Viral News: ಭಾರತದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಅದೆಷ್ಟರ ಮಟ್ಟಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆಂದು ಯಾರೂ ಊಹಿಸಲು ಸಾಧ್ಯವೇ ಇಲ್ಲ.
ಈಕೆ ಊಟ ಮಾಡುವ ತಟ್ಟೆ, ಕುಡಿಯುವ ನೀರಿನ ಗ್ಲಾಸ್ ಮತ್ತು ಬಾಟಲಿ, ಬಳಸುವ ವಾಶ್‌ರೂಂ ಕೂಡ ಚಿನ್ನದ್ದಾಗಿದೆ. ನೀತಾ ಬರ್ತ್‌ಡೇಗಾಗಿ ಮುಖೇಶ್ ಚಿನ್ನದ ಕಮಾಡ್ ಮಾಡಿಸಿಕೊಟ್ಟಿದ್ದರು. ಇದೀಗ ಆಕೆ ಬಳಸುವ ಕುಡಿಯುವ ನೀರಿನ ಬಾಟಲಿ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ನೀತಾ ಅಂಬಾನಿ ಬರೀ ಕುಡಿಯುವ ನೀರಿಗೆ ಕೋಟಿ ಕೋಟಿ ಖರ್ಚು ಮಾಡುತ್ತಾರಂತೆ. ಫರ್ನಾಂಡೋ ಅಲ್ಟಾಮಿರಾನೋ ಎಂಬ ಪ್ರಖ್ಯಾತ ಡಿಸೈನರ್ ಡಿಸೈನ್ ಮಾಡಿರುವ, ಚಿನ್ನದ ಬಾಟಲಿಯಲ್ಲಿ ನೀತಾ ನೀರು ಕುಡೀತಾರೆ. 49 ಲಕ್ಷ ಬೆಲೆ ಬಾಳುವ ಈ ಬಾಟಲಿ, 24 ಕ್ಯಾರೆಟ್ ಚಿನ್ನ ಬಳಸಿ ತಯಾರಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಗುಜರಾತ್‌ನ ಜಾಮ್ ನಗರದಲ್ಲಿ ನಡೆದಿರುವ ಪುತ್ರ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ್ದ ನೆಕ್ಲೇಸ್ ಸುದ್ದಿಯಾಗಿತ್ತು. ಆ ನೆಕ್ಲೇಸ್ ಬೆಲೆ ಒಂದು ದೇಶದ ಜಿಡಿಪಿಗೆ ಸಮ ಎಂದು ಹೇಳಲಾಗಿತ್ತು. ಏಕೆಂದರೆ, ಆ ಎಮರಾಲ್ಡ್ ನೆಕ್ಲೇಸ್ ಬೆಲೆ 600 ಕೋಟಿಯದ್ದಾಗಿತ್ತು.
ಇದೀಗ ಅನಂತ್ ಅಂಬಾನಿಯ ಇನ್ನೊಂದು ಪ್ರಿವೆಡ್ಡಿಂಗ್ ಕಾರ್ಯಕ್ರಮ ಮತ್ತು ಮದುವೆ ಕಾರ್ಯಕ್ರಮ ಬಾಕಿ, ಆ ಸಮಯದಲ್ಲಿ ನೀತಾ ಇನ್ನೆಷ್ಟು ಮಿಂಚುತ್ತಾರೋ, ಇನ್ನು ಏನೇನು ಧರಿಸುತ್ತಾರೋ ಅಂತಾ ಕಾದು ನೋಡಬೇಕಿದೆ.
Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು
ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್
ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ