Tuesday, May 28, 2024

Latest Posts

ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ: ಹೆಚ್.ಡಿ.ಕುಮಾರಸ್ವಾಮಿ

- Advertisement -

Political News: ಬೆಂಗಳೂರು: ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಜೆಡಿಎಸ್ ಸಮನ್ವಯ ಸಭೆ ನಡೆದಿದ್ದು, ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಈಗಾಗಲೇ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಿದೆ. ೧೫ ದಿನಗಳ ಹಿಂದೆಯೇ ಕರಯಬೇಕಿತ್ತು. ಅನಾರೋಗ್ಯ ಕಾರಣ ಕರೆಯೋಕೆ ಆಗಿಲ್ಲ. ಎರಡು ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಗೊಂದಲ ಆಗಿದೆ. ಪ್ರಧಾನ ಮಂತ್ರಿಗಳು ಹಿಂದುಳಿದ ಸಮಾಜಕ್ಕೆ ಸೇರಿದವರು. ನಮ್ಮ ಸಿಎಂ ಹಿಂದುಳಿದವರ ಬಗ್ಗೆ ಮಾತಾಡ್ತಾರೆ. ನಮ್ಮ ಗುರಿ 28 ಕ್ಕೆ 28 ಕ್ಕೆ ಗೆಲ್ಲಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಸಭೆ‌ ಬಹಳ ಹಿಂದೆಯೇ ‌ಸೇರಬೇಕಿತ್ತು. ಹಲವಾರು ನಾಯಕರಿಗೆ ಜೊತೆ ಚರ್ಚೆ ಮಾಡಿದ್ದೆ. ಆದರೆ ಸೇರಲು ಆಗಿರಲಿಲ್ಲ. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಬಿಜೆಪಿ ಜೆಡಿಎಸ್ ಸ್ನೇಹಿತರು ಹಿಂದೆ ಸಂಘರ್ಷದ ಅನಿವಾರ್ಯತೆಯಲ್ಲೂ‌ ಪ್ರೀತಿ ತೋರಿದ್ದೀರಿ. ಕುಮಾರಸ್ವಾಮಿ ಅಂತಾ ಗುರುತಿಸಲು ಸಾಧ್ಯವಾಗಿದ್ದು ಯಡಿಯೂರಪ್ಪ ಅವರ ಜೊತೆಗಿನ ಸರ್ಕಾರದಲ್ಲಿ. ಅವತ್ತಿನ ನನ್ನ ಉದ್ದೇಶ ‌ತಾತ್ಕಾಲಿಕ ಆಗಬಾರದು ಎಂದು. ಹಲವಾರು ರಾಜಕೀಯ ಬೆಳವಣಿಗೆಗಳ‌ ಪರಿಣಾಮ ಮೈತ್ರಿ ಮುಂದುವರಿಯಲು ಆಗಲಿಲ್ಲ. ಆಗ ನಮ್ಮ ತಂದೆ ಅವರಿಗೂ ಕೆಲವು ತಪ್ಪು ಮಾಹಿತಿ ಕೊಟ್ಟಿದ್ದರು. ಕಾಂಗ್ರೆಸ್ ಬದಲು ಬಿಜೆಪಿ ಜೊತೆ 2018ರಲ್ಲಿ ಮೈತ್ರಿ ಮಾಡಿಕೊಂಡಿದ್ದರೆ, ಈಗ ನಮ್ಮ ಸರ್ಕಾರವೇ‌ ಬರ್ತಿತ್ತು. ಇದೆಲ್ಲಾ ವಿಧಿಯ ಆಟ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾವು ಎರಡೂ ಪಕ್ಷದ ಮುಖಂಡರಿಗೆ ಮನವಿ ಮಾಡ್ತೇವೆ. ಅಭ್ಯರ್ಥಿ ಆಯ್ಕೆ ಮಾಡುವಾಗ‌ ಸಣ್ಣಪುಟ್ಡ‌ ಗೊಂದಲಗಳಿರುತ್ತವೆ. ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಆದಮೇಲೆ ನಮ್ಮನ್ನ ಯಾಕೆ ಗುರುತಿಸಲಿಲ್ಲ ಎಂಬ ಸಣ್ಣ‌ನೋವು ಇರಬಹುದು. ಯಾವುಧೇ ಭಿನ್ನಾಭಿಪ್ರಾಯ ಇದ್ದರೂ‌ ಪ್ರತಿಷ್ಠೆ ಬೇಡ. 28ಕ್ಕೆ 28 ಗೆಲ್ಲಬೇಕು. ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು. ಇದು‌ ಕೃತಕವಾದ ಮೈತ್ರಿಯಲ್ಲ. 20 ತಿಂಗಳು ಕಾಲ ಹಿಂದೆ ಉತ್ತಮ ಸರ್ಕಾರ ಮಾಡಿದ್ದೇವೆ. ಜನಮಾನಸದಲ್ಲಿ ಇವತ್ತು ಚರ್ಚೆಯಲ್ಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ‌ ಚುನಾವಣೆ‌ ಇಂತಹ ಆಡಳಿತಕ್ಕೆ ವೇದಿಕೆ ಆಗಬೇಕು. ನನ್ನ ಬಗ್ಗೆ ‌ಕುಹಕ‌ ಮಾಡಿದವರ ಬಗ್ಗೆ ಮಾತಾಡಲ್ಲ. ಮೈತ್ರಿ‌ ಬಗ್ಗೆ‌ ಕಾಂಗ್ರೆಸ್ ನಡುಕ ಉಂಟಾಗಿದೆ. 3-4 ಸೀಟು‌ಕೂಡ‌ ಗೆಲ್ಲೋಕೆ ಆಗಲ್ಲ ಅಂತಾ ಅವರೇ‌ಹೇಳ್ಕೋತಿದಾರೆ. ಇದು ತಾತ್ಕಾಲಿಕ ಮೈತ್ರಿ ಅಲ್ಲ. ಮಂತ್ರಿ ಮುಂದುವರಿಯಲಿದೆ. ನಮ್ಮ ಮನಸ್ಸು ಶುದ್ದ ಆಗಿದೆ. ಮೈತ್ರಿಯಲ್ಲಿ ಏನೇ ಸಮಸ್ಯೆ‌ ಇದ್ರೂ ಉಸ್ತುವಾರಿಗಳ‌ ಗಮನಕ್ಕೆ ತನ್ನಿ. ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾವು ಎಲ್ಲ ರೀತಿ ಮುಕ್ತವಾಗಿ ಮಾತಾಡ್ತೇವೆ. ಯಾವುದೇ ಗೊಂದಲ ಇಲ್ಲದೆ. ನಿಜವಾದ ಮೈತ್ರಿ ಧರ್ಮ ಪಾಲನೆ ಎನು ಎಂಬ ಸಂದೇಶ ನೀಡಿದ್ದೇವೆ. ಈಗಾಗಲೇ ಜಂಟಿ ಸಮಾವೇಶ ಆರಂಭ ಮಾಡಿದ್ದೇವೆ. ಮೈಸೂರು, ಮಂಡ್ಯ ,ಬೆಂಗಳೂರು ದಕ್ಷಿಣದಲ್ಲಿ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲದೆ ಕೆಲಸ ಮಾಡೋಕೆ ಕರೆ ನೀಡ್ತೀವಿ. ಎಲ್ಲಿಯೂ ಗೊಂದಲಕ್ಕೆ ಅವಕಾಶ‌ ಮಾಡಿಕೊಡದಂತೆ ಕಾರ್ಯಕರ್ತರಿಗೆ ಸಂದೇಶ ರವಾನಿಸಬೇಕಿದೆ. ಈಗಾಗಲೇ ‌ಜಂಟಿ ಪ್ರಚಾರ ಮೈಸೂರಿನಿಂದಲೇ ಶುರುವಾಗಿದೆ‌. ಸಣ್ಣಪುಟ್ಟ ಸಮಸ್ಯೆಗಳು ಏನೇ‌ ಇದ್ದರೂ. ಅಮಿತ್ ಶಾ ಗೂಂಡಾ ಎಂಬ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯಗೆ ಹೆಚ್ಡಿಕೆ ಕೌಂಟರ್ ಕೊಟ್ಟಿದ್ದು,  ಅವರೇನಂತೆ…? ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss