ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದ ಪಾಕ್ ಗೋಲ್ಡನ್ ಬಾಯ್

ಬರ್ಮಿಂಗ್‍ಹ್ಯಾಮ್: ವೇಟ್‍ಲಿಫ್ಟರ್ ನ್ಹೂ ದಸ್ತ್‍ಗಿರ್ ಬಟ್ ಚಿನ್ನ ಗೆಲ್ಲುವ ಮೂಲಕ ಪ್ರಸಕ್ತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪಾಕಿಸ್ಥಾನಕ್ಕೆ  ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ  ಪಾಕಿಸ್ಥಾನ  ಎರಡನೆ ಚಿನ್ನ ಗೆದ್ದ ಸಾಧನೆ ಮಾಡಿದೆ.

2006ರಲ್ಲಿ ಪಾಕ್ ಪರ ಶುಜಾ ಉದ್ದೀನ್ ಮಲ್ಲಿಕ್ ಕೊನೆಯ ಬಾರಿಗೆ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದಿದ್ದರು.

ಪುರುಷರ 109 ಕೆಜಿ + ಭಾರ ಎತ್ತುವ ಸ್ಪರ್ಧೆಯಲ್ಲಿ  ನ್ಹೂ ಬಟ್ ಒಟ್ಟು 405 ಕೆಜಿ ಭಾರ ಎತ್ತಿದರು. (173+232) ಭಾರ ಎತ್ತಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಭಾರತದಿಂದ ತುಂಬ ಪ್ರೀತಿ ಸಿಕ್ಕಿದೆ

24 ವರ್ಷದ ನ್ಹೂ ಬಟ್ ನನಗೆ ಭಾರತದಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ ಎಂದಿದ್ದಾರೆ. ಮೀರಾಬಾಯಿ ನಮಗೆ ಸೂರ್ತಿ. ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ ಬಂದಿರುವ ನಾವು ಒಲಿಂಪಿಕ್ಸ್ ಪದಕಳನ್ನು ಗೆಲ್ಲಬಲ್ಲೆವು ಅನ್ನೋದನ್ನು ತೋರಿಸಿಕೊಟ್ಟವರು. ಟೊಕಿಯೊ ಒಲಿಂಪಿಕ್ಸ್‍ನಲ್ಲಿ ಮೀರಾಬಾಯಿ ಬೆಳ್ಳಿ ಗೆದ್ದಿದ್ದು ನಮಗೆ ಹೆಮ್ಮೆಯನ್ನುಂಟು ಮಾಡಿದೆ. ಭಾರತಕ್ಕೆ ನಾನು ಎರಡು ಬಾರಿ ಬಂದಿದ್ದೇನೆ. ಭಾರತೀಯರು ನನಗೆ ಆಪ್ತರು ಎಂದಿದ್ದಾರೆ.

 

About The Author