- Advertisement -
ಬರ್ಮಿಂಗ್‍ಹ್ಯಾಮ್: ತಾರಾ ಶಟ್ಲರ್‍ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ವಿಭಾಗಗಳಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ ಸಿಂಧು, ಮಾಲ್ಡೀವ್ಸ್‍ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ 21-4, 21-11 ಅಂಕಗಳಿಂದ ಗೆದ್ದರು. ಪುರುಷರ ಸಿಂಗಲ್ಸ್‍ನಲ್ಲಿ ಶ್ರೀಕಾಂತ್ ಉಗಾಂಡದ ಡೇನಿಯಲ್ ವಾಂಗಾಲಿಯಾ ವಿರುದ್ಧ 21-9, 21-9 ಅಂಕಗಳಿಂದ ಗೆದ್ದರು.
ಮೊದಲ ಕೋರ್ಟ್‍ನಲ್ಲಿ ಆಡಿದ ಸಿಂಧು ಮಾಲ್ಡಿವ್ಸ್ ಆಟಗಾರ್ತಿ ವಿರುದ್ಧ ನಿರಾಯಾಸವಾಗಿ ಗೆದ್ದರು. ಇನ್ನು ಪುರುಷರ ವಿಭಾಗದಲ್ಲಿ ಉಗಾಂಡ ಬ್ಯಾಡ್ಮಿಂಟನ್ ಆಟಗಾರ ಹಲವಾರು ತಪ್ಪುಗಳನ್ನು ಮಾಡಿದ್ದರಿಂದ ಶ್ರೀಕಾಂತ್ ಸುಲಭವಾಗಿ ಗೆದ್ದರು.
- Advertisement -