ರಶೀದಿ ನೀಡದೆ ಲಂಚದ ರೂಪದಲ್ಲಿ ಹಣ ಪಡೆದ ಆರೋಪದ ಮೇಲೆ ಉತ್ತರ ಸಂಚಾರ ಠಾಣೆ ಎಎಸ್‌ಐ (ASI) ಅಮಾನತು

Hubballi News: ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರರೊಬ್ಬರಿಗೆ ರಶೀದಿ ನೀಡದೆ ಲಂಚದ (Bribe) ರೂಪದಲ್ಲಿ ಹಣ ಪಡೆದ ಆರೋಪದ ಮೇಲೆ ಉತ್ತರ ಸಂಚಾರ ಠಾಣೆ ಎಎಸ್‌ಐ (ASI) ರಮ್ಜಾನಬಿ ಅಳಗವಾಡಿ ಅವರನ್ನು ಅಮಾನತು ಮಾಡಲಾಗಿದೆ.

ಹುಬ್ಬಳ್ಳಿ (Hubballi) ಹೊಸೂರಿನ ಗಾಳಿ ದುರ್ಗಮ್ಮ ದೇವಸ್ಥಾನದ ಎದುರು ಹೆಲ್ಮೆಟ್ ಧರಿಸದೆ ಬೈಕ್ ಸವಾರರೊಬ್ಬರು ತೆರಳುತ್ತಿದ್ದರು. ಅವರನ್ನು ತಡೆದು ದಂಡ ಪಾವತಿಸುವಂತೆ ಎಎಸ್‌ಐ ಹೇಳಿದ್ದರು.

ಸವಾರ ನೀಡಿದ ದಂಡದ ಶುಲ್ಕವನ್ನು ಎಎಸ್‌ಐ ಜೇಬಿಗೆ ಹಾಕಿಕೊಂಡು, ಅದಕ್ಕೆ ರಶೀದಿ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಮಾಹಿತಿ ತಿಳಿದ ತಕ್ಷಣ ಪ್ರಕರಣ ಮಾಹಿತಿ ಪಡೆದ ಪೊಲೀಸ್ ಕಮಿಷನರ್ ಸಂತೋಷ್ ಬಾಬು ಎಎಸ್‌ಐಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Udyoga mela: ಉದ್ಯೋಗ ಮೇಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ: ದೇಶದ ಪ್ರಗತಿಗೆ ಕೈ ಜೋಡಿಸಿ

AAP Party: ಆನೇಕಲ್ ದೊಡ್ಡಯ್ಯ ಆಪ್ ಪಕ್ಷಕ್ಕೆ ರಾಜಿನಾಮೆ..!

Shobha karandlaje: ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ.? ನೀವು ಕೊಡೋದು ಯಾವಾಗ

About The Author