Friday, August 29, 2025

Latest Posts

ಸೆಪ್ಟೆಂಬರ್ 2ಕ್ಕೆ ಅಲ್ಲ, 1ರ ರಾತ್ರಿಯೇ ಸಿಗೋಣ್ವಾ.?: ಬರ್ತ್‌ಡೇಗೆ ಅಭಿಮಾನಿಗಳನ್ನು ಇನ್ವೈಟ್ ಮಾಡಿದ ಕಿಚ್ಚ

- Advertisement -

Sandalwood News: ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಬರ್ತ್‌ಡೇ ಇದ್ದು, ಬಾಸ್ ಬರ್ತ್‌ಡೇನಾ ಸಖತ್ ಸ್ಪೆಶಲ್ ಆಗಿ ಸೆಲೆಬ್ರೇಟ್ ಮಾಡ್ಬೇಕು ಅಂತಾ, ಅವರ ಫ್ಯಾನ್ಸ್ ಕಾಯ್ತಾ ಇದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಸೆಪ್ಟೆಂಬರ್ 2ಕ್ಕೆ ಅಲ್ಲ, 1ರ ರಾತ್ರಿಯೇ ಸಿಗೋಣ್ವಾ ಅಂತಾ ಕೇಳುವ ಮೂಲಕ, ಫ್ಯಾನ್ಸ್ ಖುಷಿಯನ್ನು ಇಮ್ಮಡಿ ಮಾಡಿದ್ದಾರೆ.

ಕಿಚ್ಚನ ಬರ್ತ್‌ಡೇಗೆ ಕಿಚ್ಚಾನೇ ಇನ್ವೈಟ್ ಮಾಡಿದ್ದು, ಫ್ಯಾನ್ಸ್ ಖುಷಿ ಮತ್ತು ಕುತೂಹಲ ಹೆಚ್ಚೋಕ್ಕೆ ಕಾರಣವಾಗಿದೆ. ಈ ಬಾರಿ ಸುದೀಪ್ ಏನ್ ಸರ್ಪೈಸ್ ಕ“ಡಬಹುದು. ಬರ್ತ್‌ಡೇಗೆ ನ್ಯೂ ಸಿನಿಮಾ ಅನೌನ್ಸ್ ಏನಾದ್ರೂ ಮಾಡ್ತಾರಾ ಅಂತೆಲ್ಲಾ ಚರ್ಚೆ ಆಗ್ತಿದೆ.

ಈ ಬಗ್ಗೆ ಬರೆದಿರುವ ಕಿಚ್ಚ, ಸೆ.2ರಂದು ನೀವು ನನ್ನನ್ನು ಭೇಟಿ ಮಾಡುವುದಕ್ಕಾಗಿ ಎಷ್ಟು ಕಾಯುವಿರೋ, ನಾನು ಅದಕ್ಕಿಂತ ಹೆಚ್ಚಾಗಿ ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವೀಡಿಯೋಗಳನ್ನು ನೀವು ನೋಡಿದಾಗ, ಪ್ರತೀಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು.

ನಿಮ್ಮೆದುರು ನಿಂತು ವಿನೀತನಾಗುವುದಕ್ಕಿಂತ ಖುಷಿ ಇನ್ನೇನಿದೆ..? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿ ಮಾಡಿ ನಾನು ಸಂಭ್ರಮಿಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು.

ಆದರೆ ನಿಮ್ಮನ್ನು ನಿರಾಸೆಗ“ಳಿಸುವುದು ನನಗಿಷ್ಟವಿಲ್ಲ. ನಿಮ್ಮ ಮೂಲಕವೇ ನನ್ನ ಹುಟ್ದಬ್ಬ ಹುಟ್ಟಬೇಕು. ಗಡಿಯಾರ 12 ಗಂಟೆ ಎಂದು ಸದ್ದು ಮಾಡವಾಗು, ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ 1ರ ರಾತ್ರಿ ನಾವೆಲ್ಲ 1 ಕಡೆ ಸೇರೋಣ.

ಎಲ್ಲಿ..? ಹೇಗೆ ಅನ್ನೋದನ್ನು ತಿಳಿಸುತ್ತೇನೆ. ಆದರೆ ಸೆ.2ರಂದು ದಯವಿಟ್ಟು ಯಾರೂ ಮನೆಯ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆಯ ಬಳಿ ಬಂದು ಕಾದರೆ, ನನ್ನ ಮನಸ್ಸಿಗೆ ನೋವಾಗುತ್ತದೆ.

ಜತೆಗೆ ಅಮ್ಮನಿಲ್ಲದ ವರ್ಷ ಇದಾಾಗಿರುವುದರಿಂದ ಮನೆಯ ಬಳಿ ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ ನೀವು ನನ್ನನ್ನು ಅರ್ಥ ಮಾಡಿಕ“ಳ್ಳುವಿರೆಂದು. ಮತ್ತು ನಿರಾಸೆಗ“ಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತೀ ವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿದೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಆಸ್ತಿ.

ಸದಾ ಪ್ರೀತಿ ಇರಲಿ, ನಿಮ್ಮ ಕಿಚ್ಚ .

ಈ ರೀತಿ ಬರೆದಿದ್ದಾರೆ. ಹೀಗಾಗಿ ಅಭಿಮಾನಿಗಳು ಸುದೀಪ್ ಹೇಳುವ ಜಾಗದಲ್ಲಿ ಅವರನ್ನು ನೋಡಿ, ಬರ್ತ್‌ಡೇ ವಿಶ್ ಮಾಡಲು ಇದು ಸದಾವಕಾಶ ಅಂದ್ರೂ ತಪ್ಪಾಗಲ್ಲ.

- Advertisement -

Latest Posts

Don't Miss