International News: ಇಸ್ರೇಲ್- ಹಮಾಸ್ ಯುದ್ಧ ನಡೆಯುತ್ತಿದ್ದು, ಇಸ್ರೇಲ್ ಸೇನೆ ಗಾಜಾದ ಮೂಲೆ ಮೂಲೆ ಹುಡುಕಿ ಉಗ್ರರನ್ನು ಸದೆಬಡೆಯುತ್ತಿದೆ. ಇಸ್ರೇಲ್ ಗಾಜಾದ ಹಲವು ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ್ದು, ಉಗ್ರರು ಆಸ್ಪತ್ರೆಗಳನ್ನು ತಮ್ಮ ನೆಲೆಗಳಾಗಿ ಮಾಡಿಕೊಂಡಿದ್ದಾರೆಂದು ಎಲ್ಲರಿಗೂ ಗೊತ್ತಾಗಿತ್ತು. ಆದರೆ ಇದೀಗ, ಗಾಜಾದ ಶಾಲೆಗಳಲ್ಲಿಯೂ ಕೂಡ ಹಮಾಸ್ ಉಗ್ರರು ಅಡಗಿ ಕೂತಿದ್ದು, ಶಾಲೆಯೊಂದರಲ್ಲಿ ಉಗ್ರರ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ.
ಶಾಲೆಯಲ್ಲಿ ರಾಕೇಟ್ ಲಾಂಚರ್, ಮಾರ್ಟರ್ ಶೆಲ್ ಗಳು ಕೂಡ ಪತ್ತೆಯಾಗಿದೆ. ಶಿಶುವಿಹಾರದಲ್ಲಿಯೂ ಉಗ್ರರ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಈ ಬಗ್ಗೆ ಇಸ್ರೇಲ್ ಸೇನೆ ವೀಡಿಯೋ ಹರಿಬಿಟ್ಟಿದೆ. ಶಿಶುವಿಹಾರದಲ್ಲಿ ಆಟಿಕೆಗಳು ಇರಬೇಕೆ ಹೊರತು, ಶಸ್ತ್ರಾಸ್ತ್ರಗಳಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ. ಇನ್ನೊಂದು ಶಾಲೆಯಲ್ಲೂ ಹಮಾಸ್ ಉಗ್ರರಿಗೆ ಸೇರಿದ ಯುದ್ಧದ ವಸ್ತುಗಳು ಸಿಕ್ಕಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇನ್ನು ಅಲ್ ಶಿಫಾ ಆಸ್ಪತ್ರೆಯಿಂದ ಉಗ್ರನ ಮನೆಗೆ ಸುರಂಗ ನಿರ್ಮಿಸಲಾಗಿತ್ತು. ಅಲ್ಲೇ ಹಮಾಸ್ ಉಗ್ರರು ಓಡಾಡುತ್ತಿದ್ದರು. ಅವರು ಬಳಸುತ್ತಿದ್ದ ಬಟ್ಟೆ, ಶಸ್ತ್ರಾಸ್ತ್ರ, ಅಡುಗೆ ಪಾತ್ರೆಗಳು, ಬಾತ್ರೂಮ್, ಟಾಯ್ಲೇಟ್ ರೂಮ್, ಎಲ್ಲದರ ವ್ಯವಸ್ಥೆ ಆ ಸುರಂಗ ಮಾರ್ಗದಲ್ಲಿ ಮಾಡಲಾಗಿತ್ತು. ಈ ವಿಚಾರ ತಿಳಿದ ಇಸ್ರೇಲ್ ಸೇನೆ, ಹಲವು ಕಾರ್ಯಾಚರಣೆ ನಡೆಸಿ, ಆಸ್ಪತ್ರೆಯನ್ನು ಸುತ್ತುವರೆದು, ದಾಳಿ ಮಾಡಿದ್ದಾರೆ. ಇದೇ ವೇಳೆ ಇಸ್ರೇಲ್ ಯೋಧೆ, ಆಸ್ಪತ್ರೆಯಲ್ಲಿ ಒತ್ತೆಯಾಳಾಗಿದ್ದ 5 ಮಕ್ಕಳ ತಾಯಿಯ ಮೃತದೇಹ ಕೂಡ ಪತ್ತೆಯಾಗಿತ್ತು.