Wednesday, October 29, 2025

Latest Posts

March 4 ರಂದು ವಿಧಾನಸೌಧದ 2 ಕಿಲೋ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ..!

- Advertisement -

ಮಾರ್ಚ್ 4 ರಿಂದ ಬಜೆಟ್ (Budget) ಅಧಿವೇಶನ ಇರುವುದರಿಂದ ವಿಧಾನಸೌಧದ (Vidhana Soudha)  ಸುತ್ತಮುತ್ತ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು (Prohibition) ಜಾರಿಗೊಳಿಸಲಾಗಿದೆ. ಮಾರ್ಚ್ 4ರಿಂದ ಅಧಿವೇಶನದ ಹಿನ್ನೆಲೆ, ವಿರೋಧ ಪಕ್ಷಗಳು ಹಾಗೂ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ನಗರ ಪೊಲೀಸ್ ಆಯುಕ್ತ  ಕಮಲ್ ಪಂತ್ ಮಾರ್ಚ್ 4 ನೇ ತಾರೀಖಿನಿಂದ ನಿಷೇಧಾಜ್ಞೆ ಜಾರಿಗೆ ತಂದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಮಲ್ ಪಂತ್ (Kamal Pant) ಆದೇಶ ಹೊರಡಿಸಿದ್ದಾರೆ. ಬಜೆಟ್ ಅಧಿವೇಶನದ ಸಮಯದಲ್ಲಿ ವಿಪಕ್ಷಗಳು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ (Protest) ಕೈಗೊಳ್ಳುವ ಸಾಧ್ಯತೆಗೊಳಿರುತ್ತವೆ. ಆದ್ದರಿಂದ ಅಧಿವೇಶನದ ಕಾರ್ಯಕಲಾಪಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಧಿವೇಶನ ಆರಂಭವಾಗುವ ದಿನ ಬೆಳಗ್ಗೆ 6 ರಿಂದ ಮಧ್ಯರಾತ್ರಿ12 ಗಂಟೆವರೆಗೆ ನಿಷೇಧಾಜ್ಞೆ ಇರಲಿದೆ. ನಿಷೇಧಾಜ್ಞೆ ಜಾರಿಯಾಗುವ ಪ್ರದೇಶದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವಂತಿಲ್ಲ. ಈ ಭಾಗದಲ್ಲಿ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ ನಡೆಸುವಂತಿಲ್ಲ ಎಂದು ಕಮಲ್ ಪಂತ್ ಹೇಳಿದ್ದಾರೆ. ಇನ್ನೂ ಬಜೆಟ್ ಅಧಿವೇಶನ ಹಿನ್ನೆಲೆ ಮಾರ್ಚ್ 4ರಂದು ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆದಿದ್ದಾರೆ. ಈ ಸಭೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿದೆ. ಅಧಿವೇಶನದಲ್ಲಿ ಯಾವ ರೀತಿ ಪ್ರತಿಭಟಿಸಬೇಕು ಎಂಬುದರ ಬಗ್ಗೆ ಮಾರ್ಚ್ 4 ರಂದು ನಡೆಯುವ ಸಭೆಯಲ್ಲಿ ಕಾಂಗ್ರೆಸ್ ತೀರ್ಮಾನಿಸಲಿದೆ.

- Advertisement -

Latest Posts

Don't Miss