ಕರ್ನಾಟಕ ಟಿವಿ : ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಪರಿಣಾಮ ರಾಜ್ಯದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗ್ತಿದೆ. ಅದರಲ್ಲಿ ದಿನ ಬಳಕೆಯ ವಸ್ತು ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದೆ. ನೆರೆ ಪ್ರವಾಹಕ್ಕೂ ಮುನ್ನ ಕೆ.ಜಿ.ಗೆ 15 ರೂ ಇದ್ದ ಬೆಲೆ ಈಗ ಸಗಟಿನಲ್ಲಿ ಕೆ.ಜಿ ಈರುಳ್ಳಿ 35 ರಿಂದ 40 ರೂ. ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 40 ರಿಂದ 45 ರೂ. ಗೆ ಏರಿಕೆಯಾಗಿದೆ. ಗಣೇಶ ಹಬ್ಬದ ಹೊತ್ತಿಗೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯದ ದಾವಣಗೆರೆ ತರೀಕೆರೆ, ಚಳ್ಳಕೆರೆ, ಹುಬ್ಬಳ್ಳಿಯಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತದೆ. ಈ ಬೆಳೆ ಸೆಪ್ಟೆಂಬರ್ ಹೊತ್ತಿಗೆ ಮಾರುಕಟ್ಟೆಗೆ ಬರುವುದರಿಂದ. ಬೆಲೆ ಅಲ್ಲಿತನಕ ಕಡಿಮೆಯಾಗುವ ಸಾಧ್ಯತೆ ಇಲ್ಲ.
ಮಳೆಯಿಂದ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಕೊರತೆ..!
ಅಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಕಾರ ಮಳೆ ಕಾರಣ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಏರು ಪೇರಾಗಿದೆ. ಇನ್ನೂಂದೆಡೆ , ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಸಾಕಷ್ಟು ಬೆಳೆ ಹಾಳಾಗಿದೆ. ಇದರಿಂದ ಗಣೇಶ ಚತುರ್ಥಿ ಹೊತ್ತಿಗೆ ಮಾರುಕಟ್ಟೆಗೆ ಬರಬೇಕಿದ್ದ ಈರುಳ್ಳಿ ಪ್ರಮಾಣದಲ್ಲಿ ಬಾರಿ ಕುಸಿತವಾಗುವ ಸಾಧ್ಯತೆ ಇದೆ.ಮೂ ರು ವರ್ಷದ ಹಿಂದೆಯೂ ಪ್ರವಾವದಿಂದಾಗಿ ಇಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ, ಈರುಳ್ಳಿ ಕೆಜಿಗೆ 80 ರಿಂದ 90 ರೂ. ಗೆ ಏರಿಕೆಯಾಗಿತ್ತು. 2018 ರಲ್ಲಿ ಉತ್ತಮ ಇಳುವರಿ ಬಂದಿದ್ಧರಿಂದ ಮಾರುಕಟ್ಟೆಯಲ್ಲಿ ಕೆ.ಜೆ.ಗೆ 20 ರೂ. ಧಾರಣೆ ಇತ್ತು. ಅದರೆ ಈ ಬಾರಿ ದುಬಾರಿಯಾಗೋದು ಗ್ಯಾರಂಟಿ..
ಮಂಜುನಾಥ್ ಚಳ್ಳಕೆರೆ, ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ