ಕರ್ನಾಟಕ ಟಿವಿ : ಗ್ರಾಹಕರಿಗೆ ಕಾದಿದೆ ಮತ್ತೊಂದು ಶಾಕ್. ದಿನಕ್ಕೆ 2 ಬಾರಿ ಮಾತ್ರ ಎಟಿಎಂ ಬಳಸಬೇಕು. ಅಂದ್ರೆ ದಿನಕ್ಕೆ 12 ಗಂಟೆಗೆ ಒಂದು ಬಾರಿ ಮಾತ್ರ ಅವಕಾಶ ಇರುತ್ತೆ. ಇದಕ್ಕೆ ಮುಖ್ಯ ಕಾರಣ ದಿನ ದಿಂದ ದಿನಕ್ಕೆ ಹೆಚ್ಚುತ್ತಿರು ಎಟಿಎಂ ವಂಚನೆ. ಇದನ್ನು ತಡೆಯಲು ಈ ರೀತಿಯ ರೂಲ್ಸ್ ರೂಪಿಸುವಂತೆ ಬ್ಯಾಂಕುಗಳು ಸಲಹೆ ನೀಡಿವೆ.
ಸಾಮಾನ್ಯವಾಗಿ ಎಟಿಎಂ ವಂಚನೆ ಪ್ರಕರಣ ನಡೆಯುವುದು ರಾತ್ರಿ ವೇಳೆ. ಅದರಲ್ಲೂ ಮಧ್ಯರಾತ್ರಿ ಯಿಂದ ನಸುಕಿನ ಜಾವದ ಸಮಯದಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ. ಇದಕ್ಕೆ ಕಡಿವಾಣ ಹಾಕಲು ಹೊಸ ರೂಲ್ಸ್ ತರಲು ಚರ್ಚೆ ನಡೆಯತ್ತಿದೆ .
ಈ ರೀತಿ ಮಿತಿ ಹೇರುವುದರಿಂದ ವಂಚನೆ ತಡೆಯ ಬಹುದು ಎಂದು ದೆಹಲಿ ರಾಜ್ಯಮಟ್ಟದ ಬ್ಯಾಂಕ್ ಸಮಿತಿ ಸಭೆಯಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ವ್ಯವಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮುಕೇಶ್ ಕುಮಾರ್ ಜೈನ್ ಅವರು ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಅಥವಾ ರಿಸರ್ವ್ ಬ್ಯಾಂಕ್ ಈ ಸಲಹೆಯನ್ನ ಏನಾದರು ಸ್ವೀಕರಿಸಿದರೆ, ದೇಶಾದ್ಯಂತ ಎಟಿಎಂ ವ್ಯವಹಾರಕ್ಕೆ ಸಮಯದ ಮಿತಿ ಹೇರಲಾಗುತ್ತೆ.. ದೇಶದಲ್ಲಿ 2017 – 2018 ರಲ್ಲಿ 911 ಎಟಿಎಂ ವಂಚನೆ ಪ್ರಕರಣಗಳು ವರದಿಯಾಗಿದ್ದವು. 2018-2019 ಕ್ಕೆ ಇದು 980 ಕ್ಕೆ ಜಿಗಿತ ಕಂಡಿದೆ. 233 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ಈ ಸಲಹೆ ಮಹತ್ವ ಪಡೆದುಕೊಂಡಿದೆ
ಮತ್ತೊಂದೆಡೆ, ಎಟಿಎಂ ವಂಚನೆ ತಡೆಗಟ್ಟಲು ನಗದು ಪಡೆಯುವ ಮುನ್ನ ಓಟಿಪಿ ನಮೂದಿಸುವ ವ್ಯವಸ್ಥೆ ರೂಪಿಸುವ ಸಲಹೆ ನೀಡಿದ್ದಾರೆ ಬ್ಯಾಂಕ್ ವ್ಯವಸ್ಥಾಪಕರು. ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವಾಗ ಓಟಿಪಿ ನಮೂದು ಮಾಡುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಎಟಿಎಂ ನಲ್ಲಿಯೂ ಈ ವ್ಯವಸ್ಥೆ ಬಂದರೆ ವಂಚನೆಗಳಿಗೆ ಕಡಿವಾಣ ಹಾಕಬಹುದು.
ಮಂಜುನಾಥ್ ಚಳ್ಳಕೆರೆ, ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ