National Political News: ಯಾಕೋ ಇಂಡಿಯಾ ಕೂಡದ ಸಮಯ ಸರಿಇಲ್ಲ ಎನ್ನಿಸುತ್ತದೆ. ಪ್ರಧಾನಿ ಮೋದಿಯನ್ನು ಈ ಬಾರಿ ಸೋಲಿಸಲೇಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್, ಭಾರತದಲ್ಲಿರುವ ಪುಟ್ಟ ಪುಟ್ಟ ಪಕ್ಷಗಳನ್ನು ಒಗ್ಗೂಡಿಸಿ, ಸಭೆ ನಡೆಸಿ, ಇಂಡಿಯಾ ಕೂಡ ಕಟ್ಟಿತ್ತು. ಅಲ್ಲದೇ ಎಲ್ಲರೂ ಕೈ ಕೈ ಹಿಡಿದು ಒಟಟ್ಟಾಗಿ ಫೋಟೋ ಕೂಡ ತೆಗೆದುಕೊಂಡಿದ್ದರು,.
ಈ ಬಗ್ಗೆ ವ್ಯಂಗ್ಯವಾಡಿದ್ದ ಬಿಜೆಪಿ, ಇದು ಫೋಟೋಶೂಟ್‌ಗೆ ಮಾತ್ರ ಎಂದಿದ್ದರು. ಇದೀಗ ಪರಿಸ್ಥಿತಿ ಅದೇ ರೀತಿ ಆಗಿದೆ. ಕಾಶ್ಮೀರದಲ್ಲಿ, ಪಂಜಾಬ್, ದೆಹಲಿ, ಬಂಗಾಳ, ಬಿಹಾರ ಸೇರಿ ಹಲವೆಡೆ ತಾವು ಸ್ವಾತಂತ್ರವಾಗಿ ಚುನಾಾವಣೆಗೆ ಸ್ಪರ್ಧಿಸುತ್ತೇವೆ ಎಂದು ಹಲವು ಪಕ್ಷಗಳು, ಇಂಡಿಯಾ ಕೂಟದಿಂದ ಹಿಂದೆ ಸರಿದಿದೆ. ಮಾಯಾವತಿ ಕೂಡ ಇಂದು ಮತ್ತೊಮ್ಮೆ ಬಿಎಸ್‌ಪಿ ಪಕ್ಷ ಕೂಡ ಇಂಡಿಯಾ ಕೂಟದೊಂದಿಗೆ ಇಲ್ಲ. ನಮ್ಮದು ಸ್ವತಂತ್ರ ಸ್ಪರ್ಧೆ ಎಂದಿತ್ತು.
ಇದೀಗ ಎಸ್ಪಿ ಕೂಡ ಕಾಂಗ್ರೆಸ್ ತನ್ನ ಷರತ್ತು ಒಪ್ಪಿದರೆ ಮಾತ್ರ, ಹೊಂದಾಣಿಕೆ ಎಂದಿದೆ. ಉತ್ತರಪ್ರದೇಶದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಇರಬೇಕು ಅಂದ್ರೆ ಸಮಾಾಜವಾದಿ ಪಾರ್ಟಿ ಇಟ್ಟಿರುವ ಷರತ್ತನ್ನು ಕಾಂಗ್ರೆಸ್ ಒಪ್ಪಬೇಕಿದೆ. ಅದೇನಂದ್ರೆ, ಉತ್ತರಪ್ರದೇಶದಲ್ಲಿರುವ 80 ಸೀಟ್‌ನಲ್ಲಿ ಬರೀ 15 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಬಹುದು. ಉಳಿದ ಕ್ಷೇತ್ರವೆಲ್ಲ ಎಸ್‌ಪಿಗೆ ಬಿಟ್ಟು ಕೊಡಬೇಕು.
ಮಾಜಿ ಸಿಎಂ ಅಖಿಲೇಶ್ ಯಾದವ್ ಇಟ್ಟಿರುವ ಈ ಷರತ್ತಿಗೆ ಒಪ್ಪಿದ್ರೆ ಮಾತ್ರ, ಎಸ್‌ಪಿ ಕಾಂಗ್ರೆಸ್‌ನೊಂದಿಗೆ ಇರುತ್ತದೆ. ಇಲ್ಲವಾದಲ್ಲಿ, ಇಂಡಿಯಾ ಒಕ್ಕೂಟದಿಂದ ಸಮಾಜವಾದಿ ಪಕ್ಷವೂ ಹಿಂದೆ ಸರಿಯುತ್ತದೆ. ಈಗಾಗಲೇ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆ, ಉತ್ತರಪ್ರದೇಶ ಬಂದು ತಲುಪಿದೆ. ಆದರೆ ಅಖಿಲೇಶ್ ಯಾದವ್ ಈ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಕಾರಣವೇನಂದ್ರೆ, ಸೀಟು ಹಂಚಿಕೆ ಬಗ್ಗೆ ರಾಹುಲ್ ಇನ್ನೂ ಷರತ್ತು ಒಪ್ಪಿಲ್ಲ. ಷರತ್ತು ಒಪ್ಪಿದರೆ ಮಾತ್ರ ಅಖೀಲ್ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಮತ್ತು ಇಂಡಿಯಾ ಕೂಡದಲ್ಲಿ ಇರುತ್ತಾರೆ. ಕಾಂಗ್ರೆಸ್ ಈ ಷರತ್ತಿಗೆ ಒಪ್ಪಿಗೆ ನೀಡುತ್ತಾ ಇಲ್ಲವಾ ಅಂತಾ ಕಾದು ನೋಡಬೇಕಿದೆ.
ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟಿಲ್ಲ: ವಿವಾದದ ಬೆನ್ನಲ್ಲೇ ಸಂತೋಷ್ ಲಾಡ್ ಸ್ಪಷ್ಟನೆ
‘ಸಂತೋಷ್ ಲಾಡ್ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಮೆಚ್ಯೂರ್ ಆಗಿ ಮಾತಾಡಲಿ’