Dharwad News: ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಸುದ್ದಿಗೋಷ್ಠಿ ನಡೆಸಿದ್ದಾರೆ.
ಕಳೆದ ಬುಧವಾರದಂದು ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯನ್ನು ಬದಲಾವಣೆ ಮಾಡಬೇಕು ಎಂದು ಗಡುವು ನೀಡಿದ್ದರು. ಇಂದು ದಿಂಗಾಲೇಶ್ವರ ಶ್ರೀಗಳು ಮತ್ತೊಮ್ಮೆ ಸುದ್ದಿಗೋಷ್ಠಿ ಮಾಡಿದ್ದು, ಮಾರ್ಚ್ 31 ಕ್ಕೆ ಜೋಶಿ ಬದಲಾವಣೆಗಾಗಿ ಗಡುವು ನೀಡಲಾಗಿತ್ತು.
ಈ ವಿಚಾರವಾಗಿ ನಮ್ಮನ್ನ ದೂರವಾಣಿ ಕರೆ ಮಾಡಿ ಮನವೋಲಿಸುವ ಪ್ರಯತ್ನ ಮಾಡಲಾಯಿತು. ಬಹುಸಂಖ್ಯಾತರಿಂದ ಬೆದರಿಕೆ ಕರೆಗಳೂ ಸಹ ಬಂದವು. ಮಾನ, ಪ್ರಾಣದ ವಿಚಾರವಾಗಿಯೂ ಬೆದರಿಕೆ ಕರೆಗಳು ಬಂದವು. ಬಹುಸಂಖ್ಯಾತರಿಂದ ಸಾಕಷ್ಟು ಒತ್ತಡಗಳೂ ಬಂದವು. ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಬದಲಾವಣೆ ಅಸಾಧ್ಯ ಎಂಬುದು ಅವರ ನಿರ್ಧಾರವಾದರೆ. ಹೋರಾಟವೇ ನಮ್ಮ ನಿಲುವು ಎಂಬುದು ನಮ್ಮ ಸ್ಪಷ್ಟ ನಿರ್ಧಾರ. ನಾನು ಇಟ್ಟ ಹೆಜ್ಜೆಯನ್ನ ಯಾವತ್ತೂ ಹಿಂದಕ್ಕೆ ಸರಿಯಲ್ಲ ಎಂದಿದ್ದಾರೆ.
ಅಲ್ಲದೇ, ನಾನು ಯಾವುದೇ ಆಮೀಷಗಳಿಗೆ , ಒತ್ತಡಕ್ಕೆ ಮಣಿಯುವಂತಹ ಸ್ವಾಮೀಜಿಗಳು ನಾವಲ್ಲ. ಜೋಶಿಯವರ ಬದಲಾವಣೆ ವಿಚಾರದ ಹೋರಾಟಕ್ಕೆ ನಾನು ಬದ್ಧ. ಚುನಾವಣೆ ಮುಗಿಯುವವರೆಗೂ ನಮ್ಮಹೋರಾಟ ಮುಂದುವರೆಯುತ್ತದೆ. ಈ ವಿಚಾರವಾಗಿ ನಮ್ಮದು ಗಟ್ಟಿ ನಿರ್ಧಾರ. ಇದೇ ಏಪ್ರೀಲ್ 2 ರಂದು ನಾವು ಸಭೆ ನಡೆಸಲಿದ್ದೇವೆ. ಧಾರವಾಡದಲ್ಲಿ ಭಕ್ತರ ಸಭೆ ನಡೆಸಲಿದ್ದೇವೆ. ಧಾರವಾಡ ಜಿಲ್ಲಾ ಕೇಂದ್ರವಾಗಿರುವುದರಿಂದಅಂದು 10.30 ಕ್ಕೆ ಭಕ್ತರ ಸಭೆ ಕರೆಯಲಿದ್ದೇವೆ.
ಈಗಾಗಲೇ ನಾಡಿನಮಠಾಧೀಶರ ಸಭೆ ನಡೆಸಲಾಗಿದೆ. ಮಠಾಧೀಶರು ತಮ್ಮ ಅಭಿಪ್ರಾಯಗಳನ್ನ ಸ್ಪಷ್ಟಪಡಿಸಿದ್ದಾರೆ. ಅವರನಿಲುವನ್ನ ನಾನುತೆಗೆದುಕೊಂಡಿದ್ದೇನೆ. ಈಗ ನಾನು ಭಕ್ತರ ನಿಲುವು ಕೇಳಬೇಕಿದೆ. ರಾಜಕೀಯೇತರ ಭಕ್ತರ ನಿಲುವು ಪಡೆದು ನನ್ನ ಅಚಲ ನಿರ್ಧಾರ ಪ್ರಕಟಿಸುತ್ತೇನೆ. ನಾವು ಯಾವುದೇ ಪಕ್ಷದ ವಿರೋಧಿಗಳಲ್ಲ. ನಾಡಿನ ಧಮನಕಾರಿ ನಡೆ ವಿರುದ್ಧ ನಮ್ಮಅಸಮಾಧಾನ. ಈಗಾಗಲೇ ನಾವು ಜೋಶಿ ಕ್ಷೇತ್ರ ಬದಲಾವಣೆಗಾಗಿ ಗಡುವು ನೀಡಿದ್ದೆವು. ಆದ್ರೆ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್ ನಿಂದ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ಹೀಗಾಗಿ ಅವರ ಬದಲಾವಣೆ ವಿರುದ್ಧ ನಮ್ಮಹೋರಾಟ ಮುಂದುವರೆಯಲಿದೆ. ಜೋಶಿಯವರನ್ನ ಸೋಲಿಸುವುದೇ ನಮ್ಮ ಗುರಿ ಎಂಬುವುದು ಈಗ ಅನಿವಾರ್ಯ. ಅವರನ್ನ ಸೋಲಿಸುವುದು ಈಗ ಅನಿವಾರ್ಯವಾಗಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಮಠಾಧೀಶರಿಂದ ಹೇಳಿಕೆ ಹಿಂಪಡೆಸುವ ಕೆಲಸಗಳಾಗುತ್ತಿವೆ. ಪ್ರಹ್ಲಾದ್ ಜೋಶಿಯವರು ಧಮನಕಾರಿ ನೀತಿ ಅನುಸರಿಸುತ್ತಿದ್ದಾರೆ. ಜೋಶಿಯವರೇ ನೀವು ಎಷ್ಟೇ ಜನಮಠಾಧೀಶರನ್ನ ಧಮನಕಾರಿ ನೀತಿಯಿಂದ ಬದಲಾಯಿಸಬಹುದು. ಆದ್ರೆ ಜೋಶಿಯವರನ್ನ ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು. ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ ಮೇಲೆ ಜೋಶಿ ಧಮನಕಾರಿ ನೀತಿಯನ್ನ ಅನುಸರಿಸುತ್ತಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಜಾಸತ್ತತೆ ಸತ್ತು ಹೋಗಿದೆ. ಇಲ್ಲಿ ರಾಜಸತ್ತತೆ ಅಳ್ವಿಕೆ ನಡೆಸಿದೆ. ಒಬ್ಬ ಸನ್ಯಾಸಿ ಏನಾದ್ರೂ ಮಾಡಬಲ್ಲ. ರಾಜ್ಯದ ಮಠಾಧೀಶರ ಮೇಲೆ ಅಧಿಕಾರ ದಬ್ಬಾಳಿಕೆ ಮಾಡಿ ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬಹುದು.
ಜೋಶಿಯವರನ್ನ ಧಮಕ ಮಾಡಲು ನಾನೊಬ್ಬ ಸಾಕು. ಜೋಶಿಯವರನ್ನ ಸೋಲಿಸುವುವು ನಮಗೆ ಅನಿವಾರ್ಯವಾಗಿದೆ.ನಮ್ಮ ಹೈಕಮಾಂಡ್ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು. ಮನವರಿಕೆ ಪ್ರಯತ್ನ ಮಾಡಿದವರು ಈಗ ಯಾರನ್ನ ಬೇಡ ಎನ್ನುತ್ತಿದ್ದೇವೋ ಅದೇ ಪಕ್ಷದ ನಾಯಕರು. ನನಗೆ ಬೆದರಿಕೆ ಕರೆ ಬರ್ತಿವೆ, ಕೆಲವು ಜನ ಪೋನ್ ಮಾಡಿ ನಿಮ್ಮನ್ನ ಜೈಲಿಗೆ ಕಳುಹಿಸುತ್ತಾರೆಂದು ಹೇಳಿದ್ದಾರೆ. ಯಾವುದೇ ಬೆದರಿಕೆಗೆ ಯಾವುದಕ್ಕೂ ನಾವು ಬಗ್ಗುವುದಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.
ಪ್ರಹ್ಲಾದ್ ಜೋಶಿ, ಹಾವೇರಿ ಜಿಲ್ಲೆಗೆ ಮೂರು ಜನ ಲಿಂಗಾಯತ ಲೀಡರ್ ಗಳನ್ನು ಕಳಿಸಿದ್ದರು. ಮೂರು ಜನ ಲಿಂಗಾಯತ ಲೀಡರ್ ಗಳನ್ನು ಹಾವೇರಿಗೆ ಕಳಿಸಿ, ಜಿಲ್ಲೆಯಲ್ಲಿ ಓಡಾಡಿ ಖರ್ಚು ಮಾಡುವಂತೆ ಮಾಡಿದ್ರು. ಟಿಕೆಟ್ ಆಸೆ ತೋರಿಸಿ ಲಿಂಗಾಯತ ಲೀಡರ್ ಗಳ ಮಧ್ಯ ಸ್ಪರ್ಧೆ ಸೃಷ್ಟಿದ್ರು. ಕೇಂದ್ರ ಸಚಿವ ಜೋಶಿಯೇ ಅವರನ್ನು ಕಳಿಸಿದ್ರು. ಜೋಶಿ ಮಾತು ನಂಬಿ ಮೂರು ಜನ ಕೋಟ್ಯಾಂತರ ರೂಪಾಯಿ ದುಡಿದ ದುಡ್ಡು ಖರ್ಚು ಮಾಡಿದ್ರು. ಆದ್ರೆ ಟಿಕೆಟ್ ಬೇರೆಯವರಿಗೆ ಟಿಕೆಟ್ ಕೊಟ್ಟರು. ಆಗಲೇ ನಾ ಹೇಳಿದ್ದೆ, ಜೋಶಿಯವರ ತರ ನಿಮ್ಮದು ಹರಾಮಿ ದುಡ್ಡು ಅಲ್ಲ. ನಿಮ್ಮದು ದುಡಿದ ದುಡ್ಡು ಖರ್ಚು ಮಾಡಬೇಡಿ ಅಂತ ಸಲಹೆ ಕೊಟ್ಟಿದ್ದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.