ನಮ್ಮ ಕಾಂಗ್ರೆಸ್ ಶಾಸಕರು ಮತ್ಯಾರೂ ಬಿಜೆಪಿಗೆ ಹೋಗುವುದಿಲ್ಲ: ಸಚಿವ ಬಿ.ಎಸ್.ಸುರೇಶ್

Kolar News: ಕೋಲಾರ: ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್, ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ಬಿಟ್ಟು, ಮತ್ತೆ ಬಿಜೆಪಿಗೆ ಮರಳಿದ ಬಗ್ಗೆ ಮಾತನಾಡಿದ್ದಾರೆ.

ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ನಿಂದ ಸೀಟ್ ನೀಡಿದ್ದೆವು. ಎಂಎಲ್‌ಎ ಎಲೆಕ್ಷನ್ ನಲ್ಲಿ ಸೋತಿದ್ರು ಎಂಎಲ್ ಸಿ ಮಾಡಿದ್ದೆವು . ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗುವುದು ನಮಗೆ ಗೊತ್ತಿರಲಿಲ್ಲ. ನಮಗೆ ಕಿಂಚಿತ್ತೂ ಸಹ ಲಾಭ ಅಥವಾ ನಷ್ಟ ಆಗುವುದಿಲ್ಲ. ಅವರಿಗೆ ಅಷ್ಟು ಶಕ್ತಿ ಇದ್ದಿದ್ದರೆ ಎಂಎಲ್ ಎ ಆಗಬಹುದಿತ್ತು ಅಲ್ವಾ..? ಅವರು ಸಿಎಂ ಆಗಿದ್ದವರು, ಸೀನಿಯರ್ ರಾಜಕಾರಣಿ. ಆದ್ರೆ ಅವರು ಮತ್ತೆ ಬಿಜೆಪಿಗೆ ಹೋಗಿರುವುದರಿಂದ ನಮಗೆ ನಷ್ಟ ಆಗಲ್ಲ ಎಂದಿದ್ದಾರೆ .

ಅಲ್ಲದೇ, ನಮ್ಮ ಕಾಂಗ್ರೆಸ್ ಶಾಸಕರು ಮತ್ಯಾರೂ ಬಿಜೆಪಿಗೆ ಹೋಗುವುದಿಲ್ಲ . 15-20 ಸಂಸದರನ್ನು ಲೋಕಸಭೆಗೆ ಕಳುಹಿಸಿಕೊಡುತ್ತೇವೆ . ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಉತ್ತಮವಾಗಿ ತಲುಪಿವೆ . ಸಮರ್ಥರಾದ ಅಭ್ಯರ್ಥಿಗಳನ್ನು ಹುಡುಕಿ ಲೋಕಸಭೆಗೆ ಕಳುಹಿಸಿಕೊಡುತ್ತೇವೆ ಎಂದು ಸುರೇಶ್ ಹೇಳಿದ್ದಾರೆ.

ಇಂದು ಸಂತೋಷವಾದ ದಿನ, ಕಾಂಟ್ರವರ್ಸಿ ಬಗ್ಗೆ ಮಾತಾಡುವುದು ಬೇಡ . ಕಳೆದ ಬಾರಿ ಕಾಂಗ್ರೆಸ್- ಜೆಡಿಎಸ್ ಒಂದಾಗಿತ್ತು , ಆಗ ಬಿಜೆಪಿ ಪಕ್ಷಕ್ಕೆ ಲಾಭವಾಗಿತ್ತು. ಈಗ ಬಿಜೆಪಿ – ಜೆಡಿಎಸ್ ಒಂದಾಗಿದೆ, ಕಾಂಗ್ರೆಸ್ ಗೆ ಲಾಭವಾಗುತ್ತೆ . ಕೋಲಾರ ಜಿಲ್ಲೆಯಲ್ಲಿ ಇಬ್ಬರಿಂದ ಮೂವರು ಸಮರ್ಥರಾದ ಅಭ್ಯರ್ಥಿಗಳಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.

ರಾಮ ಮಂದಿರ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ . ರಾಮ ನಮಗೂ ಆರಾದ್ಯ ದೈವ, ರಾಮೇಶ್ವರ ನಮ್ಮ ಮನೆ ದೇವಸ್ಥಾನ. ದೇವಸ್ಥಾನದ ವಿಚಾರಗಳನ್ನು ಇಟ್ಟುಕೊಂಡು ಮತಗಳನ್ನು ಯಾರೂ ಕೇಳಬಾರದು. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು ಎಂದು ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಬಿ ಎಸ್ ಸುರೇಶ್ ಹೇಳಿಕೆ ನೀಜಿದ್ದಾರೆ.

ಘರ್ ವಾಪ್ಸಿ ವೇಳೆ ಜಗದೀಶ್ ಶೆಟ್ಟರ್ ಏನು ಬೇಡಿಕೆ ಇಟ್ಟಿದ್ದಾರೋ ಗೊತ್ತಿಲ್ಲ: ಮಹೇಶ್ ಟೆಂಗಿನಕಾಯಿ

ಪವಿತ್ರಾ ಗೌಡಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮೀ ದರ್ಶನ್

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

About The Author