Thursday, December 5, 2024

Latest Posts

ನಮ್ಮ ಕೂದಲು ಗಟ್ಟಮುಟ್ಟಾಗಿ ಚೆಂದವಾಗಿ ಇರಬೇಕು ಅಂದ್ರೆ ಯಾವ ಆಹಾರ ಸೇವನೆ ಮಾಡಬೇಕು

- Advertisement -

Health tips: ಈ ಮೊದಲ ಭಾಗದಲ್ಲಿ ನಾವು ತಲೆಗೂದಲು ಆರೋಗ್ಯಕರವಾಗಿ ಇರಬೇಕು ಅಂದ್ರೆ, ಯಾವ ಯಾವ ಎಣ್ಣೆ ಬಳಸಬೇಕು ಎಂದು ಹೇಳಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ ತಲೆಗೂದಲು ಚೆನ್ನಾಗಿ ಬೆಳೆಯಬೇಕು ಅಂದ್ರೆ, ನಾವು ಯಾವ ಆಹಾರ ಸೇವನೆ ಮಾಡಬೇಕು ಅಂತಾ ತಿಳಿಯೋಣ.

ನೆನೆಸಿದ ಹೆಸರುಕಾಳು. ರಾತ್ರಿ ನೀರಿನಲ್ಲಿ ಹೆಸರು ಕಾಳನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೆಸರು ಕಾಳಿನ ಸೇವನೆ ಮಾಡಬೇಕು. ನಿಮಗೆ ಬರೀ ಹೆಸರು ಕಾಳು ತಿನ್ನಲು ಇಷ್ಟವಾಗುತ್ತಿಲ್ಲವೆಂದಲ್ಲಿ, ಒಂದು ಕ್ಯಾರೆಟ್, ತೆಂಗಿನ ತುರಿ, ಬೇಯಿಸಿದ ಸ್ವೀಟ್ ಕಾರ್ನ್, ಉಪ್ಪು ಹಾಕಿ ಮಿಕ್ಸ್ ಮಾಡಿ, ಸಲಾಡ್ ರೀತಿ ಮಾಡಿ ಸೇವಿಸಿ. ಹೀಗೆ ಪ್ರತಿದಿನ ಸೇವಿಸಿದರೆ, ನಿಮ್ಮ ತಲೆಗೂದಲು ಅಂದವಾಗಿ ಬೆಳೆಯುವುದರ ಜೊತೆಗೆ, ನಿಮ್ಮ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಸ್ಕಿನ್‌ ಮೇಲೆ ಗ್ಲೋ ಬರುತ್ತದೆ.

ಇನ್ನು ನೆನೆಸಿಟ್ಟ ಡ್ರೈಫ್ರೂಟ್ಸ್ ಸೇವನೆ ಮಾಡಬೇಕು. ಬಾದಾಮಿ, ವಾಲ್ನಟ್, ಅಂಜೂರ, ದ್ರಾಕ್ಷಿಯನ್ನು ರಾತ್ರಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಸೇವಿಸಿ. ಬಾದಾಮಿ ಸೇವಿಸುವಾಗ, ಸಿಪ್ಪೆ ತೆಗೆದು ಸೇವಿಸಿ. ಇದರ ಜೊತೆಗೆ ನೀವು ಪಿಸ್ತಾ, ಖರ್ಜೂರ, ಗೋಡಂಬಿ ಸೇರಿ ಬೇರೆ ಬೇರೆ ಡ್ರೈ ಫ್ರೂಟ್ಸ್, ನಟ್ಸ್ ಸೇವನೆ ಮಾಡಬಹುದು. ಇದರಿಂದಲೂ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ.

ಇನ್ನು ಫ್ಲ್ಯಾಕ್ಸ್ ಸೀಡ್ಸ್, ಅಂದ್ರೆ ಅಗಸೆಬೀಜದ ಚಟ್ನಿಪುಡಿ ತಯಾರಿಸಿ, ಊಟದೊಂದಿಗೆ ಲಿಮಿಟಿನಲ್ಲಿ ಬಳಸಿ. ಇದು ಕೂದಲ ಆರೋಗ್ಯ ಅಭಿವೃದ್ಧಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಗಸೆಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಅದರ ಪೇಸ್ಟ್ ತಯಾರಿಸಿ, ಹೇರ್ ಪ್ಯಾಕ್ ಹಾಕಲಾಗುತ್ತದೆ.

ಇನ್ನು ಎಳನೀರು, ಮಜ್ಜಿಗೆ, ಮನೆಯಲ್ಲೇ ತಯಾರಿಸಿದ ಜ್ಯೂಸ್‌, ಪಾನಕ ಇವೆಲ್ಲವೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹವನ್ನು ತಂಪು ಮಾಡಿ, ಕೂದಲು ಉದುರಂತೆ ಮಾಡುತ್ತದೆ. ಅದರಲ್ಲೂ ಎಳನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಜೊತೆಗೆ ಹೆಚ್ಚು ನೀರಿನ ಸೇವನೆ ಮಾಡಿದರೆ, ತಲೆಗೂದಲ ಬೆಳವಣಿಗೆ, ತ್ವಚೆಯ ಸೌಂದರ್ಯ ಹೆಚ್ಚುವುದರ ಜೊತೆಗೆ, ಆರೋಗ್ಯವೂ ಅಭಿವೃದ್ಧಿಯಾಗುತ್ತದೆ.

- Advertisement -

Latest Posts

Don't Miss