Pak News: ಇಂದು ಕೂಡ ಭಾರತ ಪಾಕ್ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ಮುಂದುವರಿಸಿದ್ದು, ಡ್ರೋನ್ ದಾಳಿಗೆ ರಾವಲ್ಪಿಂಡಿ ಸ್ಟೇಡಿಯಂಗೆ ಭಾರೀ ಹಾನಿಯುಂeಗಿದೆ. ಸ್ಟೇಡಿಯಂನ 1 ಭಾಗ ಛಿದ್ರ ಛಿದ್ರವಾಗಿದೆ.
ಯಾವ ಸ್ಥಳದಲ್ಲಿ ಭಾರತ ಡ್ರೋನ್ ದಾಳಿ ಮಾಡಿದೆಯೋ, ಆ ಸ್ಥಳದಲ್ಲಿ ಪಾಾಕಿಸ್ತಾನ ಸೂಪರ್ ಲೀಗ್ ಪಂದ್ಯ ನಿಗದಿಯಾಾಗಿತ್ತು. ಇಂದು ರಾತ್ರಿ 8 ಕ್ಕೆ ಪೇಶಾವರ್ ಝಲ್ಮಿ ಮತ್ತು ಕರಾಾಚಿ ಕಿಂಗ್ಸ್ ತಂಡಗಳ ನಡುವೆ ಪಂದ್ಯವಿತ್ತು. ಆದರೆ ಸ್ಥಳದಲ್ಲಿ ಭಾರತ ಡ್ರೋನ್ ದಾಳಿ ನಡೆಸಿದ್ದು, ಪಂದ್ಯವನ್ನು ಕರಾಚಿಗೆ ಹಸ್ತಾಂತರಿಸಲು ಸ್ಥಳೀಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಇನ್ನು ಈ ದಾಳಿಯಿಂದಾಗಿ, ಹೈರಾಣಾಗಿರುವ ಪಾಕ್ ಕ್ರಿಕೇಟ್ ಪ್ರೇಮಿಗಳು, ಕ್ರೀಡಾಂಗಣಕ್ಕೆ ಬರಲು ಹೆದರುತ್ತಿದ್ದಾರಂತೆ. ಹೀಗಾಗಿ ಹಲವರು Ticket ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಪಾಕಿಸ್ತಾನ ಕ್ರಿಕೇಟ್ ಬೋರ್ಡ್ ಆರ್ಥಿಕತೆಗೂ ಹೋಡೆತ ಬಿದ್ದಂತಾಗಿದೆ.
ಇನ್ನು ಮುಖ್ಯವಾದ ವಿಷಯ ಅಂದ್ರೆ, ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಪಾಕ್ ಸಜ್ಜಾಗಿತ್ತಂತೆ. ಈ ವಿಷಯ ತಿಳಿದ ನಮ್ಮ ಗುಪ್ತಚರ ಇಲಾಖೆಯ ಮಾಹಿತಿಯಿಂದ ನಮ್ಮ ಸೈನಿಕರು ಅಲರ್ಟ್ ಆಗಿ, ಆಗಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಅಲ್ಲದೇ ಲಾಹೋರ್‌ನಲ್ಲಿದ್ದ ಪಾಕಿಸ್ತಾನದ ರೆಡಾರ್ ಕೇಂದ್ರವನ್ನೇ ಭಾರತ ಸೇನೆ ಧ್ವಂಸ ಮಾಡಿ ಹಾಕಿದೆ.