Thursday, July 10, 2025

Latest Posts

ಸೋತು ಸುಣ್ಣವಾಗಿ ಭಾರತದ ಕಾಲು ಹಿಡಿದ ಪಾಕ್‌ : ಶಾಂತಿಗಾಗಿ ಸಿದ್ದ ಎಂದ ಹೇಡಿ ರಾಷ್ಟ್ರ..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ :

ಪಹಲ್ಗಾಮ್‌ ದಾಳಿಯ ಬಳಿಕ ಭಾರತದ ವಿರುದ್ಧ ದಾಳಿಯ ವಿಫಲ ಯತ್ನ ನಡೆಸಿದ್ದ ಪಾಕಿಸ್ತಾನ ಕೊನೆಗೂ ಭಾರತದ ಕಾಲಿಗೆ ಬಿದ್ದಿದೆ. ಚೀನಾ ಹಾಗೂ ಟರ್ಕಿ ದೇಶಗಳ ಬೆಂಬಲದಿಂದ ಭಾರತದ ಮೇಲೆ ಎಗರಾಡುತ್ತಿದ್ದ ಪಾಕಿಸ್ತಾನ ಇದೀಗ ಬಾಲ ಮುದುರಿಕೊಂಡು ಬಿಲ ಸೇರಿದೆ. ಭಾರತದ ದಾಳಿಯ ಹೊಡೆತಕ್ಕೆ ವಿಲ ವಿಲ ಒದ್ದಾಡುತ್ತಿರುವ ಪಾಪಿಗಳ ದೇಶ ಭಾರತ ಕೈಗೊಂಡಿರುವ ಐತಿಹಾಸಿಕ ಆಪರೇಷನ್‌ ಸಿಂಧೂರ್‌ನಲ್ಲಿ ಆಗಿರುವ ನಷ್ಟವನ್ನು ಲೆಕ್ಕ ಹಾಕುವುದರಲ್ಲೇ ನಿರತವಾಗಿದೆ. ಅಷ್ಟರ ಮಟ್ಟಿಗೆ ಭಾರತ ಉಗ್ರ ಪೋಷಕ ರಾಷ್ಟ್ರಕ್ಕೆ ಹೊಡೆತ ನೀಡಿದೆ.

ಇನ್ನೂ ಮುಖ್ಯವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದೆರಡು ದಿನಗಳ ಹಿಂದಷ್ಟೇ ಪಂಜಾಬ್‌ನ ಆದಂಪುರ ಏರ್‌ಬೇಸ್‌ಗೆ ತೆರಳಿ ಸೈನಿಕರೊಂದಿಗೆ ಸಮಯ ಕಳೆದು ಅವರನ್ನು ಹುರಿದುಂಬಿಸುವ ಕೆಲಸ ಮಾಡಿದ್ದರು. ದಿನವಿಡೀ ವಾಯುಸೇನೆಯ ಯೋಧರೊಂದಿಗೆ, ಅದರಲ್ಲೂ ಆಪರೇಷನ್‌ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಯೋಧರ ಜೊತೆ ವಿಶೇಷ ಆತ್ಮೀಯತೆಯ ಸಂವಾದವನ್ನೂ ನಡೆಸಿದ್ದರು. ಬಳಿಕ ಸೈನಿಕರನ್ನುದ್ದೇಶಿಸಿ ಮಾತನಾಡಿ, ಭಾರತ ಇನ್ನು ಮುಂದೆ ಉಗ್ರವಾದವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಭಾರತ ಪಾಕಿಸ್ತಾನದ ನಡುವೆ ಯಾವುದೇ ಮಾತುಕತೆ ನಡೆದರೆ, ಅದು ಕೇವಲ ಭಯೋತ್ಪಾದನೆ ನಿರ್ಮೂಲನೆ ಹಾಗೂ ಕಾಶ್ಮೀರದ ವಿಚಾರದಲ್ಲಿ ಮಾತ್ರ ಎಂದು ಪಾಕಿಸ್ತಾನದ ವಿರುದ್ಧ ಅಬ್ಬರಿಸಿದ್ದರು. ಅಲ್ಲದೆ ಭಾರತೀಯ ಸೈನಿಕರ ಧೈರ್ಯ, ಪರಾಕ್ರಮ ಕೊಂಡಾಡಿದ್ದರು.

ಸ್ವಂತಿಕೆ ಇಲ್ಲದ ಉಗ್ರ ಪೋಷಕ ರಾಷ್ಟ್ರ..

ಮೊದಲೇ ಯಾವುದೇ ಅಸ್ಥಿತ್ವವೂ ಇಲ್ಲ, ಅದರಲ್ಲೂ ಯಾವ ಸ್ವಂತಿಕೆಯೂ ಇಲ್ಲದ ಭಿಕಾರಿ ದೇಶದ ಪ್ರಧಾನಿ ಎಲ್ಲದರಲ್ಲೂ ಭಾರತವನ್ನೇ ಅನುಕರಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿಯಾಗಿದೆ. ಎರಡೂ ದೇಶಗಳ ನಡುವೆ ಸಂಘರ್ಷದ ಆರಂಭಕ್ಕೂ ಮುನ್ನ ಭಾರತದ ಪ್ರಧಾನಿ ಮೋದಿ ಸೇನೆಗೆ ಪರಮಾಧಿಕಾರ ನೀಡಿದ್ದರು, ಪಾಕ್‌ನಲ್ಲಿಯೂ ಶೆಹಬಾಜ್‌ ಶರೀಫ್‌ ಸೇನೆಗೆ ಪರಮಾಧಿಕಾರ ನೀಡಿದ್ದನು. ಅಲ್ಲದೆ ಭಾರತವು ತನ್ನ ಕಾರ್ಯಾರಚರಣೆಗೆ ಆಪರೇಷನ್‌ ಸಿಂಧೂರ್‌ ಎಂದು ಹೆಸರಿಟ್ಟಿತ್ತು. ಅದೇ ಪಾಕ್‌ನಲ್ಲೂ ಬುನ್‌ಯಾನ್‌-ಉಮ್‌- ಮರಸೂಸ್‌ ಎಂಬ ಹೆಸರಿಟ್ಟಿತ್ತು. ಯಾವುದೇ ರಾಜಕೀಯ ನೈಪುಣ್ಯತೆ ಹಾಗೂ ಕನಿಷ್ಠ ಬುದ್ಧಿಮತ್ತೆಯನ್ನೂ ಹೊಂದಿರದ ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ ಕದನ ವಿರಾಮದ ಬಳಿಕವೂ ಭಾರತವನ್ನೇ ಫಾಲೋ ಮಾಡುತ್ತಿದ್ದಾನೆ ಎನ್ನುವುದು ಗಮನಾರ್ಹ.

ಮೋದಿ ಕಾಫಿ ಮಾಡಿದ ಪಾಕ್‌ ಪಿಎಂ..

ಪ್ರಧಾನಿ ಮೋದಿಯಂತೆ ಶರೀಫ್‌, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಕಮ್ರಾ ವಾಯುನೆಲೆಯಲ್ಲಿರುವ ಸೈನಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಅಲ್ಲದೆ ಪಾಕಿಸ್ತಾನದ ಕರ್ಮಕ್ಕೆ ಭಾರತದಿಂದ ಏಟು ತಿಂದು ಹಾನಿಯಾಗಿರುವ ಯುದ್ಧ ಟ್ಯಾಂಕರ್‌ ಮೇಲೆ ನಿಂತು ಭಾಷಣ ಮಾಡುವ ಮೂಲಕ ತನಗೆ ಹಾಗೂ ತನ್ನ ದೇಶಕ್ಕೆ ಯಾವುದೇ ಆತ್ಮಾಭಿಮಾನ, ಸ್ವಂತಿಕೆಯೇ ಇಲ್ಲ ಎನ್ನುವುದನ್ನು ಶರೀಫ್ ಸಾಬೀತುಪಡಿಸಿದ್ದಾನೆ. ಇದೆಲ್ಲಾ ಕಾಫಿ ಮಾಡಲಿ, ಆದರೆ ಒಬ್ಬ ಜವಾಬ್ದಾರಿಯುತ ಪ್ರಧಾನಿಯಾಗಿ ತನ್ನದೇ ಆದ ವಿಚಾರ ಶೈಲಿಯ ಭಾಷಣ ಮಾಡದೆ, ಅದರಲ್ಲೂ ಮೋದಿಯವರನ್ನೇ ಅನುಸರಿಸಿ ಅದೇ ಮಾದರಿಯಲ್ಲಿ ಮಾತನಾಡಿದ್ದಾನೆ ಎಂದರೆ ಅಲ್ಲಿನ ನಾಯಕರು ಬೌದ್ಧಿಕವಾಗಿ ಎಷ್ಟು ದಿವಾಳಿಯಾಗಿದ್ದಾರೆ ಎನ್ನುವುದನ್ನು ತೋರಿಸಿಕೊಡುತ್ತದೆ.

ಜಾಗತಿಕ ಮಟ್ಟದಲ್ಲಿ ಕಾಮಿಡಿ ಪೀಸ್‌,ಈ ಪಿಎಂ..

ಇನ್ನೂ ಈಗಾಗಲೇ ಭಾರತದಿಂದ ನೆನಪಿಟ್ಟುಕೊಳ್ಳುವ ಹಾಗೆ ಹೊಡೆತ ತಿಂದಿರುವ ಪಾಕ್‌ ಶಾಂತಿಯ ಮಂತ್ರ ಪಠಿಸಲು ಮುಂದಾಗಿದೆ. ತಮ್ಮ ಭಾಷಣದಲ್ಲಿ ಮಾತನಾಡಿರುವ ಶೆಹಬಾಜ್‌ ಶರೀಫ್‌, ಭಾರತದೊಂದಿಗೆ ಶಾಂತಿ ಮಾತುಕತೆಗೆ ತಮ್ಮ ದೇಶ ಸಿದ್ಧವಾಗಿದೆ. ನಮ್ಮ ಈ ಮಾತುಕತೆಯಲ್ಲಿ ಕಾಶ್ಮೀರ ವಿಷಯವೂ ಸೇರಿದೆ ಎಂದು ಭಾರತದ ಭಾಷಣವನ್ನೇ ಕಾಫಿ ಮಾಡಿ ಷರತ್ತು ಹಾಕುವ ಮೂಲಕ ಶರೀಫ್ ಜಾಗತಿಕ ಮಟ್ಟದಲ್ಲಿ ಕಾಮಿಡಿ ಪೀಸ್‌ ರೀತಿಯಾಗಿದ್ದಾರೆ. ಇನ್ನೂ ಈ ಭೇಟಿಯಲ್ಲಿ ಪಾಕ್ ಉಪ ಪ್ರಧಾನಿ ಇಶಾಕ್ ದಾರ್, ರಕ್ಷಣಾ ಸಚಿವ ಖ್ವಾಜಾ ಆಸಿಫ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ವಾಯುಪಡೆ ಮುಖ್ಯಸ್ಥ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ವಾಯುನೆಲೆಯಲ್ಲಿ ಇದ್ದರು.

ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಭಾರತದ ಮೇಲೆ ದಾಳಿ ಮಾಡಿತ್ತು. ಆದರೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಪ್ರತಿಯೊಂದು ದಾಳಿಗೂ ಸೂಕ್ತ ಪ್ರತ್ಯುತ್ತರವನ್ನು ನೀಡಿದೆ. ಅದೇ ಸಮಯದಲ್ಲಿ, ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ಬೃಹತ್ ಮಿಲಿಟರಿ ಕ್ರಮ ಕೈಗೊಂಡಿತ್ತು. ಆದಾಗ್ಯೂ, ನಾಲ್ಕು ದಿನಗಳ ಮಿಲಿಟರಿ ಉದ್ವಿಗ್ನತೆಯ ನಂತರ, ಎರಡೂ ದೇಶಗಳು ಮೇ 10 ರಂದು ಕದನ ವಿರಾಮವನ್ನು ಘೋಷಿಸಿದ್ದವು.

ಪಹಲ್ಗಾಮ್ ದಾಳಿಗೆ ಭಾರತದ ಪ್ರತೀಕಾರ..

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಅಮಾಯಕ ಪ್ರವಾಸಿಗರನ್ನು ನಿರ್ದಯವಾಗಿ ಕೊಂದಿದ್ದರು. ಈ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತು. ಇದರ ನಂತರ, ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಆಕ್ರಮಿತ ಕಾಶ್ಮೀರದ 9 ಸ್ಥಳಗಳ ಮೇಲೆ ಭಾರೀ ಬಾಂಬ್ ದಾಳಿ ನಡೆಸಿತು. ಸೇನಾ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದರು.

- Advertisement -

Latest Posts

Don't Miss