Friday, April 25, 2025

Latest Posts

Pakistan : ಹಿಮಪಾತದಿಂದ 20ಕ್ಕೂ ಅಧಿಕ ಜನ ಸಾವು..!

- Advertisement -

ಪಾಕಿಸ್ತಾನ : ಪಾಕಿಸ್ತಾನದಲ್ಲಿ ಹಿಮಪಾತದಿಂದ ೨೦ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಸುರಿದ ಹಿಮದಿಂದ ಈ ಸಾವು ಸಂಭವಿಸಿದೆ. ಮುರ್ರೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ 60 ಕಲೋ ಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಹಿಮದಿಂದ ಕೂಡಿರುವ ಕಾರಣ ಇಲ್ಲಿಗೆ ಅನೇಕ ಪ್ರವಾಸಿಗಸರು ಆಗಮಿಸುತ್ತಾರೆ. ನಿನ್ನೆ ರಾತ್ರಿ ಸುರಿದ ಬಾರಿ ಹಿಮಪಾತದಿಂದ ಅನೇಕ ಕಾರುಗಳು ಹೋತುಹೋಗಿವೆ.ಅಲ್ಲಿನ ಸ್ಥಳೀಯರು ಹಾಗು ಪ್ರವಾಸಿಗರು ಬಾರಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ಆದ್ದರಿಂದ ಅಲ್ಲಿನ ಸರ್ಕಾರ ಮುರ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಸದ್ಯಕ್ಕೆ ಯಾರು ಸಹ ಮುರ್ರೆ ಬರದಿರಲು ನಿಷೇಧಾಜ್ಞೆ ಹೇರಲಾಗಿದೆ. ಎಂದು ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ ಮತ್ತು ಪೋಲೀಸ್ ಇನ್ಸೆಪೆಕ್ಟರ್ ಜನರಲ್ ಇನಾಮ್ ಘನಿ ತಿಳಿಸಿದ್ದಾರೆ. ಅಲ್ಲಿನ ಮಿಲಿಟರಿ ಸೈನಿಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಪ್ರಧಾನಿ ಇಮಾನ್ರ್ ಖಾನ್ ಸಂತಾಪ ಸೂಚಿಸಿದ್ದಾರೆ.

- Advertisement -

Latest Posts

Don't Miss