Wednesday, May 29, 2024

Latest Posts

ಬಾಲಿವುಡ್ ಖಾನ್‌ಗಳ ಬಗ್ಗೆ ತಮಾಷೆ ಮಾಡಿದ ಪಾಕ್ ನಟಿ..

- Advertisement -

International Movie News: ಬಾಲಿವುಡ್‌ಗೆ ಫವಾದ್ ಖಾನ್‌ರಂಥ ನಟರು ಬಂದಿರುವುದರಿಂದ, ಬಾಲಿವುಡ್ ಖಾನ್‌ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್‌ಗೆ ಅಭದ್ರತೆ ಕಾಡುತ್ತಿದೆ ಎಂದು ಪಾಕ್ ನಟಿ, ನಾದಿಯಾ ಖಾನ್ ತಮಾಷೆ ಮಾಡಿ, ಹೇಳಿಕೆ ಕೊಟ್ಟಿದ್ದಾರೆ.

ಈ ನಟಿ ಸನ್ನಿ ಡಿಯೋಲ್ ನಟನೆಯ ಗದರ್ 2 ಸಿನಿಮಾ ರಿಲೀಸ್ ಆದಾಗ, ಅದರಲ್ಲಿ ಪಾಕಿಸ್ತಾನದ ಬಗ್ಗೆ ಹೇಳಿರುವ ಪಾಾಕಿಸ್ತಾನ್ ವಿರೋಧಿ ಹೇಳಿಕೆಯನ್ನು ವಿರೋಧಿಸಿದ್ದರು. ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿರುವ ನಾದಿಯಾ, ಖಾನ್‌ಗಳಿಗೆ ಅಭದ್ರತೆ ಕಾಡುತ್ತಿದೆ ಎಂದಿದ್ದಾರೆ. ಪಾಕಿಸ್ತಾನ ನಟರಿಂದ ಬಾಲಿವುಡ್‌ನ ಖಾನ್‌ಗಳಿಗೆ ನಡುಕ ಶುರುವಾಗಿದೆ. ಫವಾದ್ ಖಾನ್‌ರಂಥವರು, ಬಾಲಿವುಡ್‌ಗೆ ಕಾಲಿಟ್ಟಿದ್ದು, ಅಂಥವರಿಂದ ತಮ್ಮ ಸ್ಥಾನ ಎಲ್ಲಿ ಕಳೆದುಕೊಳ್ಳುತ್ತೆವೋ ಎಂದು ಬಾಲಿವುಡ್‌ ಖಾನ್‌ಗಳು ಹೆದರಿದ್ದಾರೆಂದು ನಟಿ ಹೇಳಿದ್ದಾರೆ.

ಈ ರೀತಿ ಹೇಳಿಕೆ ಕೊಡಲು ಕಾರಣವೇನೆಂದರೆ, ಭಾರತ ಚಿತ್ರರಂಗದವರು ರಾಜಕೀಯ ಕಾರಣಗಳನ್ನಿಟ್ಟುಕೊಂಡು, ಪಾಕಿಸ್ತಾನದ ಕಲಾವಿದರಿಗೆ ಬಾಲಿವುಡ್‌ನಲ್ಲಿ ನಟಿಸಲು ಅವಕಾಶ ನೀಡುತ್ತಿಲ್ಲ. ಭಾರತೀಯ ಸಿನಿ ಪ್ರೇಕ್ಷಕರು ಪಾಕಿಸ್ತಾನದ ನಟರನ್ನು ಇಷ್ಟಪಡುತ್ತಾರೆ. ಹಾಗಾಗಿ ಬಾಲಿವುಡ್‌ ಸೆಲೆಬ್ರಿಟಿಗಳಿಗೂ ನಮ್ಮ ಬಗ್ಗೆ ಅಸೂಯೆ ಇದೆ. ಭಯವೂ ಇದೆ. ಹಾಗಾಗಿ ಪಾಕಿಸ್ತಾನದ ನಟ ನಟಿಯರು ಬಾಲಿವುಡ್ ಸಿನಿಮಾದಲ್ಲಿ ನಟಿಸದಂತೆ ಬ್ಯಾನ್ ಮಾಡಿದ್ದಾರೆಂದು ನಾದಿಯಾ ಕಿಡಿಕಾರಿದ್ದಾಳೆ.

ಮಂಡ್ಯ ಲೋಕಸಭಾ ಅಖಾಡಕ್ಕೆ ಯೂಟ್ಯೂಬರ್ ಚಂದನ್ ಗೌಡ

ಸುಮಲತಾ ಅಂಬರೀಷ್ ಬಿಜೆಪಿ ಸೇರಲು ಮುಹೂರ್ತ್ ಫಿಕ್ಸ್

ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್‌ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್

- Advertisement -

Latest Posts

Don't Miss