Monday, June 16, 2025

Latest Posts

ನೀವು ನೀರು ನಿಲ್ಲಿಸಿದ್ರೆ, ನಿಮ್ಮ ಉಸಿರು ನಿಲ್ಲಿಸ್ತೇವೆ : ಮತ್ತೆ ಬೊಗಳಿದ ಪಾಕ್‌ ಸೇನಾ ವಕ್ತಾರ..

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ ದಾಳಿಯ ಬಳಿಕ ನಡೆದ ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ಸಮಯದಲ್ಲಿ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ಮೂಲಕ ರಣಹೇಡಿ ರಾಷ್ಟ್ರಕ್ಕೆ ದೊಡ್ಡ ಆಘಾತವನ್ನೇ ಭಾರತ ನೀಡಿತ್ತು. ಇದಾದ ಬಳಿಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಆದಿಯಾಗಿ ಹಲವು ನಾಯಕರು ಭಾರತಕ್ಕೆ ಗೊಡ್ಡು ಬೆದರಿಕೆಗಳನ್ನು ಹಾಕಿದ್ದರು. ಆದರೆ ಇದೀಗ ಸದ್ಯ ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕವಾಗಿ ವಿರಾಮ ನೀಡಲಾಗಿದೆ. ಈ ಸಮಯದಲ್ಲಿ ಮತ್ತೆ ಪಾಕಿಸ್ತಾನ ಭಾರತವನ್ನು ಕೆರಳಿಸುವ ದುಸ್ಸಾಹಸಕ್ಕೆ ಮುಂದಾಗಿದೆ.

ನಾಲಿಗೆ ಹರಿಬಿಟ್ಟ ಪಾಕ್‌ ಸೇನಾ ವಕ್ತಾರ..,

ಇನ್ನೂ ಕಾರ್ಯಕ್ರಮವೊಂದರಲ್ಲಿ ಭಾರತದ ವಿರುದ್ಧ ನಾಲಿಗೆ ಹರಿ ಬಿಟ್ಟಿರುವ ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್‌ ಷರೀಫ್‌ ಚೌಧರಿ, ನೀವು ನಮಗೆ ಬರಬೇಕಾದ ನೀರನ್ನು ನಿರ್ಬಂಧಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸುತ್ತೇವೆ ಎಂದು ಉಗ್ರ ಹಫೀಜ್‌ ಸಯೀದ್‌ ಹೇಳಿದ್ದ ರೀತಿಯಲ್ಲಿಯೇ ಮತ್ತೊಮ್ಮೆ ಭಾರತದ ವಿರುದ್ಧ ಬೊಗಳೆ ಬಿಟ್ಟಿದ್ದಾನೆ.

ಭಾರತ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತುನಲ್ಲಿಟ್ಟಿರುವುದನ್ನು ಉಲ್ಲೇಖಿಸಿ ಭಾರತ ನಮ್ಮ ನೀರು ನಿಲ್ಲಿಸಿದರೆ, ನಾವು ನಿಮ್ಮ ಉಸಿರನ್ನೇ ಕಟ್ಟಿ ಹಾಕುತ್ತೇವೆ ಎಂದು ಹೇಳಿದ್ದಾನೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದು, ಪಾಕ್‌ ವಿರುದ್ಧ ದೇಶದಲ್ಲಿ ಮತ್ತೆ ಆಕ್ರೋಶ ಹೆಚ್ಚಾಗುತ್ತಿದೆ.

ಹಫೀಜ್ ಸಯೀದ್ ಹೇಳಿಕೆ ಪುನರುಚ್ಚಾರ..

ಇನ್ನೂ ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಭಾರತದ ಈ ಕ್ರಮವನ್ನು ಉಲ್ಲೇಖಿಸಿ, 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಸಹ ಇದೇ ಹೇಳಿಕೆ ನೀಡಿದ್ದ. ಇದೀಗ ಪಾಕ್‌ ಸೇನಾ ವಕ್ತಾರ ಸಹ ಅದನ್ನೇ ಬುರುಡೆ ಬಿಟ್ಟಿದ್ದಾನೆ.

ಪಾಕ್‌ ಪರಿಸ್ಥಿತಿ ಮುಂದೆ ಇನ್ನಷ್ಟು ಘೋರವಾಗುತ್ತೆ..

ಅಲ್ಲದೆ ಪಾಕಿಸ್ತಾನದ ಈ ರೀತಿಯ ಬೆದರಿಕೆಗಳಿಗೆ ಬಗ್ಗುವುದಿಲ್ಲ, ರಕ್ತ ಹಾಗೂ ನೀರು ಒಂದೆ ಕಡೆಯಿಂದ ಹರಿಯಲು ಸಾಧ್ಯವಿಲ್ಲ. ಹಾಗೆಯೇ ವ್ಯಾಪಾರ ಮತ್ತು ಭಯೋತ್ಪಾದನೆ ಒಟ್ಟಾಗಿ ನಡೆಯುವುದಿಲ್ಲ. ಇನ್ನು ಮುಂದೆ ಭಾರತದ ತಂಟೆಗೆ ಬಂದರೆ ಮಣ್ಣು ಮುಕ್ಕಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಭಯೋತ್ಪಾದನೆಯನ್ನೇ ಬೆಳೆಸುತ್ತಿರುವ, ಉತ್ತೇಜಿಸುತ್ತಿರುವ ಪಾಕಿಸ್ತಾನದ ಕೊನೆಗೆ ಒಂದಿನ ಅದೇ ಭಯೋತ್ಪಾದನೆಯಿಂದಲೇ ಸರ್ವನಾಶವಾಗುತ್ತದೆ ಎಂದು ಗುಡುಗಿದ್ದಾರೆ. ಅಲ್ಲದೆ ಹೀಗೆ ಮಾಡಿದರೆ ಪಾಕಿಸ್ತಾನದ ಮುಂದಿನ ಸ್ಥಿತಿ ಅತ್ಯಂತ ಘೋರವಾಗಿರುತ್ತದೆ ಎಂದಿದ್ದಾರೆ. ಆದರೂ ಸಹ ಬುದ್ಧಿ ಕಲಿಯದ ಪಾಕಿಸ್ತಾನಕ್ಕೆ ಭಾರತದಿಂದ ಇನ್ನಷ್ಟು ಗುಮ್ಮಿಸಿಕೊಳ್ಳುವ ಆಸೆ ಬಂದಂತಾಗಿದ್ದು, ಇದಕ್ಕಾಗಿಯೇ ಅಲ್ಲಿನ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಇನ್ನೊಮ್ಮೆ ಪಾಕಿಸ್ತಾನವನ್ನು ಬಗ್ಗು ಬಡೆಯಲು ಭಾರತ ಸರ್ವ ಸನ್ನದ್ಧವಾಗಿದೆ ಎಂದು ಭಾರತ ಈಗಾಗಲೇ ಎಚ್ಚರಿಸಿದೆ.

ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಏ.23 ರಂದು ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿತ್ತು. 1960 ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಎರಡು ದೇಶಗಳ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಹಂಚಿಕೆಯ ಒಪ್ಪಂದ ನಡೆದಿತ್ತು. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಒಂಬತ್ತು ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿತ್ತು.

- Advertisement -

Latest Posts

Don't Miss