International News: 40 ದಿನಗಳು ಕಳೆದರೂ, ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧ ಮುಗಿದಿಲ್ಲ. ಇಸ್ರೇಲ್ ಗಾಜಾದಲ್ಲಿ ಹಮಾಸ್ ಉಗ್ರರ ಜನ್ಮ ಜಾಲಾಡುತ್ತಿದ್ದು, ಇಂದು 5 ಪ್ಯಾಲೆಸ್ತಿನ ಉಗ್ರರ ಹತ್ಯೆ ಮಾಡಿದೆ. ಜೆನಿನ್‌ನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಇಸ್ರೇಲ್ ಸೇನೆ ಮಾಹಿತಿ ನೀಡಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಶುಕ್ರವಾರ ಬೆಳಿಗ್ಗೆ ಜೆನಿನ್‌ನಲ್ಲಿ ಕಾರ್ಯಾಚರಣೆ ನಡೆಸಿ, 5 ಭಯೋತ್ಪಾದಕರ ಹತ್ಯೆ ಮಾಡಿದೆ. ಈ ಕಾರ್ಯಾಚರಣೆ ವೇಳೆ ಇಸ್ರೇಲ್ ಸೇನೆಯ ಮೇಲೆ ಪ್ಯಾಲೆಸ್ತಿನ್ ಪಡೆಗಳು, ಗುಂಡಿನ ದಾಳಿ ಮಾಡಿದ್ದಲ್ಲದೇ, ಸ್ಪೋಟಕಗಳನ್ನು ಎಸೆದಿದ್ದಾರೆ. ಇದಕ್ಕೆ ಪ್ರತೀಯಾಗಿ ಇಸ್ರೇಲ್ ಸೇನೆ ದಾಳಿ ಮಾಡಿದ್ದು, 5 ಉಗ್ರರು ಸಾವನ್ನಪ್ಪಿದ್ದಾರೆ.
ಗಾಜಾದ ಅಲ್ ಶಿಫಾ ಆಸ್ಪತ್ರೆಯನ್ನು ಹಮಾಸ್ ಉಗ್ರರು ತಮ್ಮ ನೆಲೆಬೀಡಾಗಿ ಮಾಡಿಕೊಂಡಂತೆ, ಜೆನಿನ್‌ನ ಇಬ್ನ ಸಿನಾ ಆಸ್ಪತ್ರೆಯನ್ನು ಪ್ಯಾಲೆಸ್ತಿನ್ ಉಗ್ರರು, ತಮ್ಮ ಅಡಗುತಾಣವಾಗಿ ಮಾಡಿಕೊಂಡಿದ್ದರು. ಇದನ್ನರಿತಿದ್ದ ಇಸ್ರೇಲ್ ಸೇನೆ, ಆಸ್ಪತ್ರೆ ಬಳಿ ಕಾರ್ಯಾಚರಣೆ ನಡೆಸಿದಾಗ, ಅಲ್ಲಿ ಉಗ್ರರು ಇರುವುದು ಕನ್ಫರ್ಮ್ ಆಗಿದೆ. ಆಗ ಅವರ ಮೇಲೆ ದಾಳಿ ನಡೆಸಲು ಹೋದಾಗ, ಕೆಲವು ಉಗ್ರರು, ಅವರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಸಿಕ್ಕಿದೆ. ಇನ್ನು ಕೆಲವು ಉಗ್ರರು ಕಾರು, ಆ್ಯಂಬುಲೆನ್ಸ್ ಹತ್ತಿ ಓಡಿ ಹೋಗಿದ್ದಾರೆ.
ಇನ್ನೊಂದೆಡೆ ಅಲ್ ಶಿಫಾ ಆಸ್ಪತ್ರೆಯಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆ ನಡೆಸಿ, ಅಲ್ಲಿದ್ದ ಉಗ್ರರ ಹೆಡೆಮುರಿ ಕಟ್ಟಿ, ಅವರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಇಷ್ಟೇ ಅಲ್ಲದೇ. ಶಿಫಾ ಆಸ್ಪತ್ರೆಗೆ ಬುಲ್ಡೋಜರ್ ನುಗ್ಗಿದ್ದು, ಉಗ್ರರನ್ನೂ ಸಂಪೂರ್ಣವಾಗಿ ನಾಶ ಮಾಡಲು ಇಸ್ರೇಲ್ ಸೇನೆ ಸರ್ವಸನ್ನದ್ಧವಾಗಿದೆ.
ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ವಿಶ್ವಸಂಸ್ಥೆ, ರೆಡ್ ಕ್ರಾಸ್ ಆತಂಕ
ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು
ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್