National News: ಪಂಜಾಬ್ ಸಿಎಂ ಭಗವಂತ್ ಮನ್ ಅವರನ್ನು ಕೊಲ್ಲುತ್ತೇನೆ ಎಂದು, ಭಯೋತ್ಪಾದಕ ಪನ್ನು ಘೋಷಿಸಿದ್ದಾನೆ. ಗ್ಯಾಂಗ್‌ಸ್ಟರ್ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆ, ಪನ್ನು ಈ ರೀತಿ ಹೇಳಿಕೆ ನೀಡಿದ್ದಾನೆ.
ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ವೇಳೆ ಭಗವಂತ್ ಮನ್‌ರನ್ನು ಕೊಲ್ಲುವುದಾಗಿ, ಪನ್ನು ಹೇಳಿದ್ದಾನೆ. ಇತ್ತೀಚಿನ ದಿನಗಳಲ್ಲಿ ಪನ್ನು ಹಾರಾಟ ಅತಿಯಾಗಿದ್ದು, ಪದೇ ಪದೇ ಕೊಲ್ಲುವುದಾಗಿ, ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾನೆ. ಮೊನ್ನೆಯಷ್ಟೇ ಲೋಕಸಭೆ ಸದನ ನಡೆಯುವಾಗ, ಕೆಲ ಯುವಕರು ಅಶ್ರುವಾಯು ಸಿಡಿಸಿದ್ದರು. ಆದರೆ ಇದೇ ದಿನ ತಾನು ಸಂಸತ್ ಭವನ ಸ್ಪೋಟಿಸುವುದಾಗಿ ಟೆರರಿಸ್ಟ್ ಪನ್ನು ಹೇಳಿದ್ದ.
ಅಲ್ಲದೇ, ರಾಮಮಂದಿರ ಉದ್ಘಾಟನೆ ಬಗ್ಗೆ ಮಾತನಾಡಿದ್ದ ಪನ್ನು, ಇದು ಭಕ್ತಿಹೀನ, ಡಾಂಭಿಕ, ಅಪವಿತ್ರ ಕಾರ್ಯಕ್ರಮವೆಂದು ಹೇಳಿಕೆ ನೀಡಿದ್ದ. ಇದೀಗ ಪಂಜಾಬ್ ಸಿಎಂ ಭಗವಂತ್ ಮನ್‌ಗೆ ಜೀವ ಬೆದರಿಕೆ ಹಾಕಿದ್ದು, ಪಂಜಾಬ್ ಪೊಲೀಸರು ಇವರ ವಿರುದ್ಧ ಶೂನ್ಯ ಸಂಹಿತೆ ನೀತಿ(Zero Code Policy) ಅಳವಡಿಸಿಕೊಂಡಿದ್ದಾರೆ.
ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ
‘ನಾನು ಮೋದಿ ವಿರೋಧಿ ಎಂದು 3 ಪಕ್ಷಗಳು ನನಗೆ ಟಿಕೇಟ್ ಕೊಡಲು ಮುಂದಾಗಿದೆ. ಆದರೆ…’