Tuesday, October 14, 2025

Latest Posts

ಲೋಕದಲ್ಲೂ‌ ಪಾಸ್, ರಾಜ್ಯದಲ್ಲೂ ಸಕ್ಸಸ್..! : ಇಂಡಿ ಕೂಟಕ್ಕೆ ತೀವ್ರ ಮುಖಭಂಗ

- Advertisement -

National Political News: ತೀವ್ರ ಪ್ರತಿಷ್ಠೆಯ ವಿಚಾರವಾಗಿದ್ದ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಗೆದ್ದಿದ್ದ ಮೋದಿ ಸರ್ಕಾರ, ಇದೀಗ ರಾಜ್ಯಸಭೆಯಲ್ಲೂ ಇದರ ದಿಗ್ವಿಜಯ ಸಾಧಿಸಿದ್ದು, ಈ ಮೂಲಕ ಇಂಡಿ ಕೂಟಕ್ಕೆ ತೀವ್ರ ಮುಖಭಂಗವನ್ನು ಉಂಟ ಮಾಡಿದೆ. ಚರ್ಚೆ, ವಾಕ್ಸಮರ, ಗದ್ದಲ ಹಾಗೂ ಕೋಲಾಹಲಗಳ ನಡುವೆಯೇ ಸುದೀರ್ಘ 12 ಗಂಟಗಳ ಕಾಲದ ಚರ್ಚೆ ನೆಡದಿದೆ. ಬಳಿಕ ತಡರಾತ್ರಿ 2 ಗಂಟೆ 30 ನಿಮಿಷದ ವೇಳೆಗೆ ರಾಜ್ಯಸಭಾ ಸಭಾಪತಿ ಜಗದೀಪ್‌ ಧನ್ಕರ್‌ ಅವರು ಈ ಕುರಿತ ಮತದಾನ ಪ್ರಕ್ರಿಯೆ ನಡಸಿದ್ದರು.

ಇನ್ನೂ ಪ್ರಮುಖವಾಗಿ ರಾಜ್ಯಸಭೆಯ ವಿಪಕ್ಷಗಳ ಸಂಸದರು ತಿದ್ದುಪಡಿಯಲ್ಲಿನ ಅಂಶಗಳನ್ನು ಕೈ ಬಿಡುವಂತೆ ಕೋರಿದ್ದ ಒಂದೊಂದು ಪ್ರಸ್ತಾವವನ್ನು ಮತಕ್ಕೆ ಹಾಕಲಾಯಿತು. ಆದರೆ ಅವುಗಳು ಬಹುಮತ ಪಡೆಯುವಲ್ಲಿ ಬಿದ್ದು ಹೋದವು. ಅಲ್ಲದೆ ವಕ್ಫ್‌ ತಿದ್ದುಪಡಿ ಮಸೂದೆಯ ಪರ ಲೋಕಸಭೆಯಂತೆಯೇ ಈ ರಾಜ್ಯಸಭೆಯಲ್ಲೂ ಸಹ ಅಭೂತಪೂರ್ವ ಮತಗಳು ಚಲಾವಣೆಯಾಗಿದ್ದವು. ಅಂದಹಾಗೆ ಮಸೂದೆ ಪರ 128 ಹಾಗೂ ವಿರುದ್ಧ 95 ಮತಗಳು ಬಿದ್ದವು. ಅಂತಿಮವಾಗಿ ಜಗದೀಪ್‌ ಧನ್ಕರ್‌ ಅವರು ರಾಜ್ಯಸಭೆಯಲ್ಲಿ ಮಸೂದೆ ಪಾಸ್‌ ಆಗಿದ್ದನ್ನು ಘೋಷಿಸಿದ್ದಾರೆ. ಇನ್ನೂ ಅಂದುಕೊಂಡಂತೆ ಕೇಂದ್ರ ಸರ್ಕಾರವು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಎರಡೂ ಮನೆಗಳಲ್ಲಿ ಪಾಸ್ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಇನ್ನೇನಿದ್ರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತ ಬಿದ್ದ ಬಳಿಕ ಇದು ಕಾನೂನಿನ ರೂಪ ಪಡೆಯಲಿದೆ.

ಕಾನೂನುಗಳು ನ್ಯಾಯಕ್ಕಾಗಿಯೇ ಇವೆ..

ಇನ್ನೂ ಮಸೂದೆ ಮಂಡಿಸುವ ಮೊದಲು ಮಾತನಾಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ಇಲಾಖೆಯ ಸಚಿವ ಕಿರಣ್‌ ರಿಜಿಜು, ನಮ್ಮಿಂದ ವಕ್ಫ್ ಆಸ್ತಿಯಲ್ಲಿ ಯಾವುದೇ ಹಸ್ತಕ್ಷೇಪ ಆಗುವುದಿಲ್ಲ, ಅದು ಯಾವಾಗಲೂ ಹಾಗೆಯೇ ಇರುತ್ತದೆ. ವಕ್ಫ್‌ ಬೋರ್ಡ್‌ ಅದೊಂದು ಶಾಸನಬದ್ಧ ಸಂಸ್ಥೆಯಾಗಿದೆ. ಕಾನೂನುಗಳು ನ್ಯಾಯಕ್ಕಾಗಿ ಇರಬೇಕೇ ಹೊರತು ಕಿತ್ತಾಟ ಮಾಡಲು ಅಲ್ಲ, ವಕ್ಫ್ ಕೇವಲ ಮುಸ್ಲಿಮರ ಅಧೀನದಲ್ಲಿರಲಿದೆ, ಇದರಲ್ಲಿ ಬೇರೆಯವರ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಅಲ್ಲದೆ ಪ್ರತಿಪಕ್ಷ ಸದಸ್ಯರು ರಾಜಕೀಯ ಕಾರಣಗಳಿಗಾಗಿ ವಕ್ಫ್‌ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಅವರು ಈ ಮಸೂದೆಯನ್ನು ಆಳವಾಗಿ ಅಧ್ಯಯನ ಮಾಡಿದರೆ, ಖಂಡಿತವಾಗಿಯೂ ಇದಕ್ಕೆ ಸಮ್ಮತಿಸುತ್ತಾರೆ. ಈ ಮಸೂದೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿಲ್ಲ. ಯಾವ ಧರ್ಮದ ಆಂತರಿಕ ವಿಷಯದಲ್ಲೂ ಈ ಮಸೂದೆ ಹಸ್ತಕ್ಷೇಪ ಮಾಡುವುದಿಲ್ಲ. ಇದು ದೇಶದ ಒಳಿತಿಗಾಗಿ ಜಾರಿ ಮಾಡಲಾಗುತ್ತಿರುವ ಮಸೂದೆಯಾಗಿದೆ. ಈ ಬಗ್ಗೆ ನಾವು ಸಾಕಷ್ಟು ಚರ್ಚೆ ಮಾಡಿದ್ದೇವೆ. ಪ್ರತಿಪಕ್ಷ ಸದಸ್ಯರು ಸರ್ಕಾರದ ನಿಲುವುಗಳ ಬಗ್ಗೆ ಒಮ್ಮೆ ಚಿಂತನೆ ನಡೆಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಕಿರಣ್‌ ರಿಜಿಜು ರಾಜ್ಯಸಭೆಯಲ್ಲಿ ಹೇಳಿದ್ದರು.

ಸಂಸತ್ತಿನ ಶಾಸನಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ..

ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಿರಿ ಹಿರಿ ಹಿಗ್ಗಿದ್ದಾರೆ. ಅಲ್ಲದೆ ಮಸೂದೆಯು ಅಂಗೀಕಾರವಾದ ಕ್ಷಣವೂ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಗಳ ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತದೆ. ದೇಶದ ಸಮಗ್ರ ಬೆಳವಣಿಗೆಗಾಗಿ, ಸಾಮೂಹಿಕ ಅನ್ವೇಷಣೆಯಲ್ಲಿನ ಒಂದು ಪ್ರಮುಖ ಕ್ಷಣವಾಗಿದೆ ಎಂದು ಅವರು ಕೊಂಡಾಡಿದ್ದಾರೆ. ಅಲ್ಲದೆ ದಶಕಗಳಿಂದ ವಕ್ಫ್ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯಿಂದ ಬಳಲುತ್ತಿತ್ತು. ವಿಶೇಷವಾಗಿ ಮುಸ್ಲಿಂ ಮಹಿಳೆಯರು, ಬಡ ಮುಸಲ್ಮಾನರು ಮತ್ತು ಪಸ್ಮಾಂಡ ಮುಸಲ್ಮಾನರ ಹಿತಾಸಕ್ತಿಗಳಿಗೆ ನಷ್ಟ ಮಾಡುತ್ತಿತ್ತು ಎಂದು ಜರಿದಿದ್ದಾರೆ.

ಇನ್ನೂ ಸಂಸತ್ತು ಅಂಗೀಕರಿಸಿದ ಶಾಸನಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ, ಜನರ ಹಕ್ಕುಗಳನ್ನು ಉಳಿಸುವಲ್ಲಿ ಸಹಕಾರಿಯಾಗುತ್ತವೆ. ಭಾರತವು ಈಗ ಆಧುನಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಸೂಕ್ಷ್ಮವಾಗಿರುವ ಯುಗವನ್ನು ಪ್ರವೇಶಿಸಲಿದೆ. ಅಂತಿಮವಾಗಿ ಇದರ ಬಗ್ಗೆ ಹೇಳುವುದಾದರೆ, ಪ್ರತಿಯೊಬ್ಬ ನಾಗರಿಕನ ಘನತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ. ಈ ರೀತಿಯಾಗಿ ನಾವು ಬಲವಾದ, ಎಲ್ಲರನ್ನೂ ಒಳಗೊಂಡ ಮತ್ತು ಹೆಚ್ಚು ಸಹಾನುಭೂತಿ ಇರುವ ಭಾರತವನ್ನು ನಿರ್ಮಿಸುತ್ತೇವೆ ಎಂದು ಮೋದಿ ವಕ್ಫ್‌ ತಿದ್ದುಪಡಿ ಮಸೂದೆಗೆ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss