ಅಸ್ಸಾಂನ ಈ ಚಹಾ ಮಾರಾಟಗಾರ (Tea vendor) ಡಾಕ್ಟರ್ ಆಗೋ ಆಸೆ ಹೊತ್ತು ಕಷ್ಟಪಟ್ಟು ಓದಿ ನೀಟ್ ಪರೀಕ್ಷೆ (NEET Exam) ಪಾಸ್ ಮಾಡಿದ್ದಾನೆ ಈ ಯುವಕ. ಬಜಾಲಿ ಜಿಲ್ಲೆಯಲ್ಲಿ ತನ್ನ ತಾಯಿ ನಡೆಸುತ್ತಿದ್ದ ಚಹಾ ಅಂಗಡಿಯಲ್ಲಿ ಗ್ರಾಹಕರಿಗೆ ಟೀ ಕೊಡುವ ಕೆಲಸ ಮಾಡ್ತಿದ್ದ ರಾಹುಲ್ ದಾಸ್. ತಾಯಿ ಕಷ್ಟಕ್ಕೂ ಜೊತೆಯಾಗಿದ್ದ. 24 ವರ್ಷದ ರಾಹುಲ್ ದಾಸ್ ಡಾಕ್ಟರ್ ಹಾಗೋ ಕನಸು ಕಾಣ್ತಿದ್ದ. ಕಷ್ಟಪಟ್ಟು ಓದುತ್ತಿದ್ದ ರಾಹುಲ್ ದಾಸ್ (Rahul das) ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ (Neet pass on the first try) ಮಾಡುವ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ. ರಾಹುಲ್ ದಾಸ್ ಅವರು ನೀಟ್ ಪರೀಕ್ಷೆಯಲ್ಲಿ 12,068ನೇ ಸ್ಥಾನ ಪಡೆದಿದ್ದಾರೆ.ಈಗ ದೇಶದ ಪ್ರತಿಷ್ಠಿತ ದೆಹಲಿಯ ಏಮ್ಸ್ ನಲ್ಲಿ ಸೀಟು ಪಡೆದಿದ್ದು(Seated at Aims Delhi), ಅವರ ಶ್ರಮ ಅಂತಿಮವಾಗಿ ಫಲ ನೀಡಿದೆ. ರಾಹುಲ್ ದಾಸ್ ಅವರ ಓದಿನ ಪ್ರಯಾಣ ಅತ್ಯಂತ ಕಠಿಣವಾಗಿದ್ದು, ದಾಸ್ ಮತ್ತು ಅವರ ಸಹೋದರ ಇಬ್ಬರೂ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. 11 ವರ್ಷಗಳ ಹಿಂದೆ ಪತಿಯಿಂದ ದೂರವಾದ ರಾಹುಲ್ ದಾಸ್ ಅವರ ತಾಯಿ ತನ್ನ ಇಬ್ಬರು ಗಂಡು ಮಕ್ಕಳನ್ನು ಸಾಕಲು ಚಹಾದ ಅಂಗಡಿ ನಡೆಸುತ್ತಿದ್ದಾರೆ.. ದಾಸ್ ಡಿಪ್ಲೊಮಾದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದರು ಮತ್ತು ಕೋವಿಡ್-19 ಸಾಂಕ್ರಾಮಿಕದ ಮಧ್ಯೆ 2020ರ ಅಕ್ಟೋಬರ್‌ನಲ್ಲಿ ‘ಕ್ವಾಲಿಟಿ ಇಂಜಿನಿಯರ್’ ಆಗಿ ಗುವಾಹಟಿಯ ಬಹು-ರಾಷ್ಟ್ರೀಯ ಕಂಪನಿಯಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಕ್ವಾಲಿಟಿ ಇಂಜಿನಿಯರ್’ ಆಗಿದ್ದರೂ ಕೆಲಸದ ತೃಪ್ತಿಯೇ ಇರಲಿಲ್ಲ. ನಾನು ಯಾವಾಗಲೂ ವೈದ್ಯನಾಗಬೇಕೆಂದು ಬಯಸಿದ್ದೆ. ನನ್ನ ಸೋದರ ಸಂಬಂಧಿಯೊಬ್ಬರು ದಂತ ಶಸ್ತ್ರಚಿಕಿತ್ಸಕರಾಗಿದ್ದಾರೆ ಮತ್ತು ಅವರು ನನಗೆ ಸ್ಫೂರ್ತಿಯಾಗಿದ್ದರು. ಪುಸ್ತಕಗಳನ್ನು ಖರೀದಿಸಲು ನನ್ನ ಬಳಿ ಹಣವಿಲ್ಲದ ಕಾರಣ ನಾನು ನನ್ನ ಕೆಲಸವನ್ನು ಬಿಟ್ಟು ಆನ್‌ಲೈನ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ (With resources available online) ನೀಟ್ ಗಾಗಿ ಸಿದ್ಧತೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ದಾಸ್ ಪಿಟಿಐಗೆ ತಿಳಿಸಿದ್ದಾರೆ.