ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority) ಬೆಂಗಳೂರಿನ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ (jurisdiction of the peenya police station)ಯ ರಾಷ್ಟ್ರೀಯ ಹೆದ್ದಾರಿ 4 ರ ಎಲಿವೇಟೆಡ್ ಹೈವೆಯಲ್ಲಿ ಇನ್ನು ಒಂದು ವಾರಗಳ ಕಾಲ ವಿಶೇಷ ಪರೀಕ್ಷೆಗಳನ್ನು ನಡೆಸಲಿದೆ. ಡಾ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ದುರಸ್ತಿ ಕಾಮಗಾರಿ (Dr Sivakumara Swamiji Upper Bridge Repair Works) ಡಿಸೆಂಬರ್ 26 ರಿಂದ ಪ್ರಾರಂಭಿಸಲಾಗಿದ್ದು, ಒಂದು ವಾರದಲ್ಲಿ ದುರಸ್ತಿ ಕಾಮಗಾರಿ ಮುಗಿಯಬೇಕಿತ್ತು, ಆದರೆ ಈಗ ಅದು ಇನ್ನೂ ಒಂದು ವಾರಗಳ ಕಾಲ ಮುಂದುವರೆದಿದೆ. ಇದರಿಂದ ಫ್ಲೈಓವರ್ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಡಿಸೆಂಬರ್ 26 ರಿಂದ NHAI ತುರ್ತು ಕಾಮಗಾರಿ ಕೈಗೊಂಡ ಕಾರಣ ಫ್ಲೈಓವರ್ ಬಂದ್ ಮಾಡಲಾಗಿದ್ದು, ಬೆಂಗಳೂರು-ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿದ್ದು ಜನ ಪರದಾಟ ನಡೆಸುತ್ತಿದ್ದಾರೆ.

