Thursday, May 30, 2024

Latest Posts

ʼಪೆನ್‌ಡ್ರೈವ್‌ʼ ಸ್ವಾಮಿ ಅವರು ಗ್ಯಾರಂಟಿಗಳನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Political News: ಬಿಜೆಪಿ ಗ್ಯಾರಂಟಿ ಮತ್ತು ಕುಮಾರಸ್ವಾಮಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಪೆನ್‌ಡ್ರೈವ್ ಪದ ಬಳಸಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿಗಳ ಮುಂದೆ ಬಿಜೆಪಿ ಗ್ಯಾರಂಟಿಗಳು ಲೊಳಲೊಟ್ಟೆ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಇದರಿಂದ ಹತಾಶರಾಗಿರುವ ʼಪೆನ್‌ಡ್ರೈವ್‌ʼ ಸ್ವಾಮಿ ಅವರು ಗ್ಯಾರಂಟಿಗಳನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಕನ್ನಡಿಗರ ಮೇಲೆ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಕತ್ತಿ ಮಸೆಯುತ್ತಿವೆ. ರಾಜ್ಯದ ಜನರ ಮೇಲೆ ಅದ್ಯಾಕೆ ಈ ಪರಿ ದ್ವೇಷವೋ ಗೊತ್ತಿಲ್ಲವೆಂದು ಡಿಕೆಶಿ ಹೇಳಿದ್ದಾರೆ.

ಈಗಾಗಲೇ ಕುಮಾರಸ್ವಾಮಿ ಅವರು ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎನ್ನುವ ಮೂಲಕ ಅವರ ಕೀಳು ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಎಸ್ಸಿ/ಎಸ್ಟಿ/ಒಬಿಸಿ/ರೈತರು/ಯುವಕರು/ ಮಹಿಳೆಯರು/ಬಡವರು ಗ್ಯಾರಂಟಿಗಳನ್ನು ಪಡೆಯುವ ಮೂಲಕ ಕರ್ನಾಟಕ ಸರ್ಕಾರದ ಪಾಲುದಾರರಾಗಿದ್ದಾರೆ. ರಾಜಕೀಯಕ್ಕಿಂತ ಜನರ ಕ್ಷೇಮವೇ ಮುಖ್ಯ ಎನ್ನುವ ಸಿದ್ಧಾಂತ ನಮ್ಮದು. ಎಲ್ಲದರಲ್ಲೂ ಕ್ಷುಲ್ಲಕ ರಾಜಕೀಯ ಮಾಡುವ ಮನಸ್ಥಿತಿ ಕುಮಾರಸ್ವಾಮಿ ಅವರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಕೇಂದ್ರ ಸಚಿವ ನಿತೀನ್ ಗಡ್ಕರಿ..

ಕದ್ದುಮುಚ್ಚಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು?: ಸಿಎಂಗೆ ಸುನೀಲ್ ಕುಮಾರ್ ಪ್ರಶ್ನೆ

ಆರೋಪಿ ಫಯಾಜ್ ಮೊಬೈಲ್ನಲ್ಲಿದ್ದ ಫೋಟೋಗಳು ಲೀಕ್ ಆಗಿದ್ದು ಹೇಗೆ?: ಪ್ರಹ್ಲಾದ್ ಜೋಶಿ ಪ್ರಶ್ನೆ..

- Advertisement -

Latest Posts

Don't Miss