ಸಿಎಂ ಸಿದ್ದರಾಮಯ್ಯನವರಿಗೆ ಸಮರ್ಪಿಸಿದ ಆ್ಯಪಲ್ ಹಾರದಲ್ಲಿನ ಹಣ್ಣಿಗಾಗಿ ಮುಗಿಬಿದ್ದ ಜನರು..

Kolar News: ಕೋಲಾರ: ಇಂದು ಕೋಲಾರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಕೋಲಾರ ಲೋಕಸಭಾ ಅಭ್ಯರ್ಥಿ ಗೌತಮ್ ಪರವಾಗಿ ಮುಖ್ಯಮಂತ್ರಿ ಮತಯಾಚಿಸಿದರು.

ಕೋಲಾರದ ಬಂಗಾರಪೇಟೆಯಲ್ಲಿ ಬೃಹತ್ ರೋಡ್ ಶೋ‌ ನಲ್ಲಿ ಸಿಎಂ ಭಾಗವಹಿಸಿದ್ದು, ಬಂಗಾರಪೇಟೆ ನಗರದ ಪ್ರಮುಖ ರಸ್ಯೆಯಲ್ಲಿ ಎರಡು ಕಿಲೋಮೀಟರ್ ಗೂ ಅಧಿಕ ರೋಡ್ ಶೋ ನಡೆದಿದೆ. ಸಚಿವರಾದ ಬೈರತಿ ಸುರೇಶ್ ಸೇರಿ ಕೋಲಾರ ಜಿಲ್ಲೆಯ ಶಾಸಕರುಗಳು ಮುಖ್ಯಮಂತ್ರಿಗಳ ರೋಡ್ ಶೋನಲ್ಲಿ ಭಾಗಿಯಾಗಿದ್ದರು.

ಈ ವೇಳೆ ಸಿಎಂ ಸಾಹೇಬರಿಗೆ ಬೃಹತ್ ಆ್ಯಪಲ್ ಹಾರವನ್ನು ಸಮರ್ಪಿಸಲಾಯಿತು. ಬಳಿಕ ಸಿಎಂ ರೋಡ್ ಶೋ ಮುಂದುವರೆದಿದ್ದು, ಕ್ರೇನ್ ಮೂಲಕ ಆಪಲ್ ಹಾರ ಕೆಳಗೆ ಬರುತ್ತಲೇ ಆಪಲ್ ಗಾಗಿ ಜನರು ಒಬ್ಬರ ಮೇಲೆ ಒಬ್ಬರು ಮುಗಿಬಿದ್ದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೃಹತ್‌ ಹಾರದಿಂದ ಜನ ಆ್ಯಪಲ್‌ನನ್ನು ಕಿತ್ತು ತಿಂದಿದ್ದಾರೆ.

ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು: ಚಕ್ರವರ್ತಿ ಸೂಲಿಬೆಲೆ

ಲವ್ ಜಿಹಾದ್‌ಗೆ ದೇಶದಲ್ಲಿ ತರಬೇತಿ ಕೇಂದ್ರವಿರಬೇಕು ಅನಿಸುತ್ತಿದೆ‌: ಜಗದೀಶ್ ಶೆಟ್ಟರ್

ಕಾಂಗ್ರೆಸ್ 28 ಸ್ಥಾನ ಸೋತರೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಖುಷಿ: ಬಿ.ವೈ.ವಿಜಯೇಂದ್ರ

About The Author