Bangkok News: ಪ್ರವಾಸಿಗರ ಸ್ವರ್ಗ ಬ್ಯಾಂಕಾಕ್, ಭೀಕರ ಭೂಕಂಪ ಸಂಭವಿಸಿದೆ. ಭೂಮಿಯ ಕಂಪನ ಪ್ರಾರಂಭವಾಗುತ್ತಿದೆ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಬೆಳಿಗ್ಗೆ ಯಥಾವತ್ತಾಗಿ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಏಕಾ ಏಕಿಯಾಗಿ ಕಟ್ಟಡಗಳು ಅಲುಗಾಡಲು ಪ್ರಾರಂಭವಾಗಿವೆ, ಇದರಿಂದ ಗಾಬರಿಗೊಂಡ ಜನರಿಗೆ ದಿಕ್ಕು ತೋಚದಂತಾಗಿ ಓಡೋಡಿ ಬಂದಿದ್ದಾರೆ. ಅಲ್ಲದೆ ಗಗನ ಚುಂಬಿ ಬಹು ಮಹಡಿ ಕಟ್ಟಡಗಳೂ ಧರೆಗುರುಳಿವೆ. ಈ ದೃಶ್ಯ ನೋಡುಗರ ಎದೆ ಝಲ್ ಎನ್ನಿಸುವಂತಿಗೆ.
7.7 ರಷ್ಟು ತೀವ್ರತೆಯ ಭೂ ಕಂಪನ..
ಇನ್ನೂ ಅತ್ಯಂತ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಬ್ಯಾಂಕಾಕ್‌ನಲ್ಲಿ ದೊಡ್ಡ ಐಷಾರಾಮಿ ಹೋಟೆಲ್‌ಗಳು, ಮಾಲ್‌ಗಳು ಇವುಗಳ ಕೆಳಗೆ ಸ್ವಿಮ್ಮಿಂಗ್ ಪೂಲ್‌ಗಳಲ್ಲಿನ ನೀರು ಹೊರಕ್ಕೆ ಚಿಮ್ಮಿದೆ. ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಆರಂಭದಲ್ಲಿ ಒಂದು ಬಾರಿ ಕಂಪಿಸಿದ್ದ ಭೂಮಿಯು 15 ನಿಮಿಷದ ಬಳಿಕ ಮತ್ತೊಂದು ಬಾರಿ ಶೇಕ್ ಆಗಿದೆ. ಅಂದರೆ ಎರಡೆರಡು ಬಾರಿ ಭೀಕರವಾಗಿ ಕಂಪಿಸಿರುವ ಭೂಮಿಯು ಎರಡೂ ದೇಶಗಳ ಜನರನ್ನು ಕಂಗಾಲಾಗುವಂತೆ ಮಾಡಿದೆ. ಅಲ್ಲದೆ ಬಹು ಮಹಡಿ ಕಟ್ಟಡಗಳು ಕುಸಿದು 47 ಜನರು ನಾಪತ್ತೆಯಾಗಿದ್ದಾರೆ. ಬ್ಯಾಂಕಾಕ್ ನಗರವು 17 ದಶ ಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ. ಅವರಲ್ಲಿ ಹಲವರು ಎತ್ತರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಭೂ ಕಂಪದಿಂದ ಅವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸಾಗಯಿಂಗ್ ನಗರದ ವಾಯುವ್ಯಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಇದರ ಕೇಂದ್ರಬಿಂದು ಪತ್ತೆಯಾಗಿದೆ
ಮಯನ್ಮಾರ್‌ಗೂ ತಟ್ಟಿದ ಬಿಸಿ..
ಇನ್ನೂ ಹೀಗೆ ಪ್ರಬಲವಾಗಿ ಸಂಭವಿಸಿರುವ ಭೂಕಂಪಕ್ಕೆ ಇನ್ನೊಂದು ದೇಶ ಮಯನ್ಮಾರ್‌ನ ಐತಿಹಾಸಿಕ ಸೇತುವೆ ಕುಸಿದು ಬಿದ್ದಿದೆ, ಮಧ್ಯಾಹ್ನ 12.50ಕ್ಕೆ ಇಲ್ಲಿ ಭೂಮಿ ಕಂಪಿಸಿದೆ. ಇದಾದ ಬಳಿಕ ಮತ್ತೆ ಮಯನ್ಮಾರ್‌ನಲ್ಲಿ ಎರಡನೇ ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದೆ. ಅಲ್ಲದೆ ಬ್ಯಾಂಕಾಕ್ ಹಾಗೂ ಮಯನ್ಮಾರ್‌ಗಳಲ್ಲಿ ಭೂಕಂಪ ಸಂಭವಿಸಿದ್ದ ಬೆನ್ನಲ್ಲಿಯೇ ಭಾರತದ ದೆಹಲಿ ಸೇರಿದಂತೆ ಹಲವೆಡೆ ಭೂ ಕಂಪನದ ಅನುಭವವಾಗಿದೆ
ಭೂ ಲೋಕದ ಸ್ವರ್ಗ ಬ್ಯಾಂಕಾಕ್
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ತನ್ನಲ್ಲಿಯ ವರ್ಣರಂಜಿತ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಈ ನಗರವು ಸದಾ ಜನ ದಟ್ಟಣೆಯಿಂದ ಕೂಡಿರುತ್ತದೆ. ಅಲ್ಲದೆ ಜನಭರಿತ ಬೀದಿಗಳು ಮತ್ತು ಗಗನ ಚುಂಬಿ ಕಟ್ಟಡಗಳು ಇಲ್ಲಿನ ಸಾಂಸ್ಕೃತಿಕ ಪರಂಪರೆಗೆ ಮತ್ತಷ್ಟು ಮೆರುಗನ್ನು ನೀಡುತ್ತದೆ. ಅಲ್ಲದೆ ಇವುಗಳು ನಗರದ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿರುವ ಮರೀನ್ ಪಾರ್ಕ್ ಹಾಗೂ ಸಫಾರಿ ಜಗತ್ತಿನಾದ್ಯಂತ ಇರುವ ಅಪಾರ ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡಿದೆ. ಥಾಯ್ಲೆಂಡ್‌ಗೆ ಪ್ರವಾಸೋದ್ಯಮವೇ ಹೆಚ್ಚಿನ ಆದಾಯ ತಂದು ಕೊಡುತ್ತಿದೆ. ಅಲ್ಲದೆ ಭಾರತೀಯರು ಸಹ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ. ಇದೊಂದು ಭೂ ಲೋಕದ ಸ್ವರ್ಗದ ರೀತಿಯಲ್ಲಿಯೇ ಇದೆ.