Monday, December 23, 2024

Latest Posts

ಇಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್,ಡೀಸೆಲ್ ದರ ಎಷ್ಟಿದೆ ಗೊತ್ತಾ.

- Advertisement -

ದೇಶದಲ್ಲಿ ಇಂದು ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಆದರೆ
ಈ ಎರಡೂ ತೈಲಗಳ ಬೆಲೆ ಸ್ಥಿರವಾಗಿದೆ. ಯಾವುದೇ ಬದಲಾವಣೆಯನ್ನು ಕಂಡಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ
ಮಾತ್ರ ಈ ಮಧ್ಯೆ ಪೆಟ್ರೋಲ್ ಬೆಲೆ ಲೀಟರ್‌ಗೆ ಶೇ.30 ರಿಂದ ಶೇ19.40 ಕ್ಕೆ ಇಳಿಸಿದೆ. ಆದರೆ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಹೀಗೆ ಪ್ರಮುಖ ನಗರಗಳ ಮಾಹಿತಿ ಇಲ್ಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 95.41 ರುಪಾಯಿ ಹಾಗು ಡೀಸೆಲ್ ದರ 86.67 ರುಪಾಯಿ
ದಾಖಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 100.58 ರುಪಾಯಿ ಹಾಗು ಲೀಟರ್ ಡೀಸೆಲ್ ದರ 85.01 ರುಪಾಯಿ ದಾಖಲಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರುಪಾಯಿ ಹಾಗು ಡೀಸೆಲ್ ದರ 94.14 ರುಪಾಯಿ ಇದೆ.
ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.40 ರುಪಾಯಿ ಹಾಗು ಲೀಟರ್ ಡೀಸೆಲ್ ದರ 91.43 ರಷ್ಟಿದೆ.
ಇನ್ನು ಕೊಲ್ಕತ್ತಾದ ವಿಷಯಕ್ಕೆ ಬಂದರೆ ಪೆಟ್ರೋಲ್ ದರ 104.67 ರುಪಾಯಿ ಹಾಗು ಡೀಸೆಲ್ ದರ 89.78 ರುಪಾಯಿ ನಿಗದಿಯಾಗಿದೆ.
ಹೈದರಾಬಾದಿನಲ್ಲಿ ಪೆಟ್ರೋಲ್ ಬೆಲೆ 108,20 ಮತ್ತು ಡೀಸೆಲ್ 94.62 ರಷ್ಟಿದೆ. ಗುಜರಾತ್ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 95.35 ಹಾಗು ಲೀಟರ್ ಡೀಸೆಲ್ ದರ 89.33 ರುಪಾಯಿ ನಿಗಧಿಯಾಗಿದೆ. ಕೇರಳದಲ್ಲಿ ಪೆಟ್ರೋಲ್ ಲೀಟರ್ ಗೆ 106.36 ರುಪಾಯಿ ಇದ್ದು ಲೀಟರ್ ಡೀಸಲ್ ಬೆಲೆ 93.47 ರುಪಾಯಿ ನಿಗಧಿಯಾಗಿದೆ. ಇದಿಷ್ಟು ಪ್ರಮುಖ ನಗರಗಳ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯಾಗಿದೆ.

- Advertisement -

Latest Posts

Don't Miss