Health Tips: ಯಾರಿಗೆ ತಾನು ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇರೋದಿಲ್ಲ ಹೇಳಿ. ಎಲ್ಲರಿಗೂ ತಮ್ಮ ಮುಖದಲ್ಲಿ ಒಂದು ಗುಳ್ಳೆಯೂ ಇರಬಾರದು. ತಮ್ಮ ಮುಖ ಕ್ಲೀನ್ ಆಗಿ ಇರಬೇಕು ಅಂತಾ ಆಸೆ ಇರುತ್ತದೆ. ಆದರೆ ಹಲವರು ಮೊಡವೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥವರಿಗಾಗಿ ವೈದ್ಯರು ಹೋಮ್ ರೆಮಿಡಿ ಹೇಳಿದ್ದಾರೆ.
ಕೊಂಚ ಮುಲ್ತಾನಿ ಮಿಟ್ಟಿ ಪುಡಿ, ಕೊಂಚ ನ್ಯಾಚುರಲ್ ಆಗಿರುವ ಆ್ಯಲೋವೆರಾ ಜೆಲ್. ಆ್ಯಾಲೋವೆರಾ ಜೆಲ್, ಗಿಡದಲ್ಲಿ ಬೆಳೆದ ಎಲೆಯಿಂದಲೇ ತೆಗೆದಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಜೆಲ್ ಬಳಸಲೇಬೇಡಿ. ಇದಕ್ಕೆ ಸ್ವಲ್ಪ ಪಚ್ಚ ಕರ್ಪೂರ ಮತ್ತು ಜೇಷ್ಠ ಮಧು ಹಾಕಿ. ಇದಕ್ಕೆ ಕೊಂಚ ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ. ಇನ್ನು ಮೊಟ್ಟೆ ಬಳಸುವವರು, ಕೋಳಿ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿ.
ಇನ್ನು ಮುಖಕ್ಕೆ ಅಪ್ಲೈ ಮಾಡಬೇಕು. ಆದರೆ ಅದಕ್ಕೂ ಮುನ್ನ ಮುಖವನ್ನು ಕ್ಲೀನ್ ಆಗಿ ತೊಳೆದುಕೊಂಡು, ವರೆಸಿಕೊಳ್ಳಿ. ಬಳಿಕ ಫೇಸ್‌ಪ್ಯಾಕ್ ಬಳಸಿ. ಅರ್ಧ ಮುಕ್ಕಾಲು ಗಂಟೆ ಬಳಿಕ, ಮುಖ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ಫೇಸ್‌ಪ್ಯಾಕ್ ಬಳಸಿದರೂ ಉತ್ತಮ. ಆದರೆ ಯಾವುದೇ ಫೇಸ್‌ಪ್ಯಾಕ್ ಹಾಕುವ ಮುನ್ನ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ಆ ಫೇಸ್‌ಪ್ಯಾಕನ್ನು ಮೊದಲು ಕೈಗೆ ಹಚ್ಚಿ, ಕೊಂಚ ಹೊತ್ತು ಬಿಟ್ಟು ನಿಮ್ಮ ಕೈನಲ್ಲಿ ಯಾವುದೇ ಸೈಡ್ ಎಫೆಕ್ಟ್ ಆಗದಿದ್ದಲ್ಲಿ ಮಾತ್ರ, ಮುಖಕ್ಕೆ ಹಚ್ಚಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.