ಶ್ರೀನಿವಾಸ ಗುರೂಜಿಯವರಿಂದ ಮೀನ ರಾಶಿಯವರ 2025ರ ವರ್ಷ ಭವಿಷ್ಯ

Horoscope: 2025ನೇ ವರ್ಷ ಮೀನ ರಾಶಿಯವರಿಗೆ ಯಾವ ಫಲಗಳನ್ನು ನೀಡುತ್ತದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಹೊಸ ವರ್ಷದಲ್ಲಿ 6 ಗ್ರಹಗಳು ನಿಮ್ಮ ರಾಶಿಯಲ್ಲಿ ಕುಳಿತಿರುತ್ತದೆ. ಹಾಗಾಗಿ ಈ ರಾಶಿಯವರಿಗೆ ಈ ವರ್ಷ ಕೆಟ್ಟದ್ದೂ ಇದೆ, ಒಳ್ಳೆಯದ್ದೂ ಇದೆ. ಅದರಲ್ಲೂ ಆರೋಗ್ಯದಲ್ಲಿ ಬದಲಾವಣೆಯಾಗಲಿದ್ದು, ಆರೋಗ್ಯದ ಕಡೆ ಗಮನ ಕೊಡಲೇಬೇಕು.

ಜನ್ಮದಲ್ಲಿರುವ ರಾಹು ಗ್ರಹ ಬಿಡುಗಡೆಯಾಗುತ್ತದೆ. ಈ ವೇಳೆ ನಿಮಗೆ ಅವಮಾನಿಸಿದವರು, ಅವಹೇಳನ ಮಾಡಿದವರು, ನಿಮ್ಮನ್ನು ತುಚ್ಛರಾಗಿ ಕಂಡವರು, ನಿಮ್ಮ ಕಣ್ಣಿಗೆ ಕಾಣದಷ್ಟು ದೂರವಾಗುತ್ತಾರೆ. ಮನೆಯಲ್ಲಿ ಶುಭಕಾರ್ಯಗಳಾಗುತ್ತದೆ. ಕಷ್ಟವಿದ್ದರೂ ಸಹ, ಅದು ಮಧ್ಯಮವಾಗಿರುತ್ತದೆ. ಕೋಪ ಕಡಿಮೆಯಾಾಗಿ, ತಾಳ್ಮೆಯಿಂದ ಮಾತನಾಡುವ ಸ್ವಭಾವ ಮೀನ ರಾಶಿಯವರಿಗೆ ಬರುತ್ತದೆ.

ಆದರೆ ರವಿ ಗ್ರಹ, ಬುಧ ಗ್ರಹ, ಕುಜ ಗ್ರಹ, ಶುಕ್ರ ಗ್ರಹ, ರಾಹು ಗ್ರಹ, ಈ ಗ್ರಹಗಳಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಜೀವನದಲ್ಲಿ ಗೊಂದಲಗಳೇ ಹೆಚ್ಚಾಗುತ್ತದೆ. ಸದ್ಯಕ್ಕೆ 2ವರೆ ವರ್ಷದ ಶನಿ ಕಾಟ ಬಿಟ್ಟು ಹೋಗಿದ್ದು, ಇನ್ನು 5 ವರ್ಷಗಳ ಕಾಲ ಶನಿ ನಿಮ್ಮ ಜೊತೆಗಿರಲಿದ್ದಾನೆ. ಹಾಗಾಗಿ ಕೆಲವು ತೊಂದರೆಗಳು ಅನುಭವಿಸಬೇಕಾಗುತ್ತದೆ. ಹಾಾಗಾಗಿ ಶನಿ ಮತ್ತು ಹನುಮಂತನನ್ನು ಆರಾಧಿಸಿ.

ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324

About The Author