Hubballi News: ಹುಬ್ಬಳ್ಳಿ: ನನ್ನ ಮಗನನ್ನು ಏಕಾಏಕಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಎಲ್ಲಿದ್ದಾನೆ ನನ್ನ ಮಗ ಮನೆಗೆ ಕಳಿಸಿಕೊಡಿ ಪ್ಲೀಸ್ ಎಂದು ಹೆತ್ತ ತಾಯಿಯೊಬ್ಬಳು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾಳೆ.
ಏಕಾಏಕಿ ಮಗನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಕ್ಕೆ ತಾಯಿ ಕಣ್ಣೀರು ಹಾಕುತಿದ್ದು, ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಮನೆಗೆ ಬಂದು ಮಗನನ್ನು ಕರೆದುಕೊಂಡು ಹೋಗಿದ್ದಕ್ಕೆ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ನಿನ್ನೆ ಸಂಜೆ ಬೆಂಡಿಗೇರಿ ಪೊಲೀಸರು ಸೈಮನ್ ಅನ್ನೋ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಸೈಮನ್ ನನ್ನು ನಾಲ್ವರು ಪೊಲೀಸರು ಕರೆದುಕೊಂಡು ಹೋಗಿದ್ದು, ಏಕಾಏಕಿ ಸೈಮನ್ ನನ್ನ ಅರೆಸ್ಟ್ ಮಾಡಿದ ಹಿನ್ನಲೆ ತಾಯಿ ಅಮೀನಾ ಕಣ್ಣೀರು ಹಾಕುತ್ತಿದ್ದು, ನನ್ನ ಮಗನನ್ನು ಮನೆಗೆ ಕಳಿಸಿಕೊಡಿ ಪ್ಲೀಸ್ ಎಂದು ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಿದ್ದಾಳೆ.
ಇನ್ನೂ ನಿನ್ನೆ ಸಂಜೆ ನಾಲ್ವರು ಬಂದು ಮಗನನ್ನ ಕರೆದುಕೊಂಡು ಹೋಗಿದ್ದಾರೆ. ಮಗ ಏನೂ ತಪ್ಪು ಮಾಡಿಲ್ಲ. ಆದರೂ ಕರೆದುಕೊಂಡು ಹೋಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ. ಸೈಮನ್ ನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ದುಡಿಯುವ ಮಗನನ್ನು ಕರೆದುಕೊಂಡು ಹೋಗಿದ್ದಾರೆ ನಾನ ಏನ ಮಾಡಲಿ ಎಂದು ತಾಯಿ ಕಣ್ಣೀರಿಟ್ಟಿದ್ದು, ಸೈಮನ್ ಸಂಭಂಧಿಕರು ಪೊಲೀಸರ ಜೊತೆ ಮಾತಾಡಿದಾಗ ಒಂದು ಗಂಟೆಯಲ್ಲಿ ಬಿಡ್ತೀವಿ ಎಂದು ಹೇಳಿದ್ದಾರೆ. ಬೆಂಡಿಗೇರಿ ಪೊಲೀಸ್ ಸಿಬ್ಬಂದಿ ಜೊತೆ ಸೈಮನ್ ಸಹೋದರ ಮಾತಾಡಿದಾಗ ಒಂದು ಗಂಟೆಯಲ್ಲಿ ಬಿಡ್ತೀವಿ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಒಂದು ಗಂಟೆಯಲ್ಲಿ ಬಿಟ್ಟು ಮನೆಗೆ ಕಳಸ್ತಿವಿ ಎಂದರೂ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ ಎಂದು ಕುಟುಂಬದವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ರೌಡಿ ಚಟುವಟಿಕೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದೇವೆ ಎನ್ನುತ್ತಿರೋ ಪೊಲೀಸರ ವಿರುದ್ಧ ಸೈಮನ್ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮಗಳನ್ನು ಜರುಗಿಸಬೇಕಿದೆ.
ಕಠಿಣ ಪರಿಶ್ರಮವೊಂದೇ ಯಶಸ್ಸಿನ ಕೀಲಿಕೈ : ವಿದ್ಯಾರ್ಥಿಗಳಿಗೆ ಸಚಿವ ಕೃಷ್ಣಭೈರೇಗೌಡ ಕಿವಿಮಾತು
ರಶೀದಿ ನೀಡದೆ ಲಂಚದ ರೂಪದಲ್ಲಿ ಹಣ ಪಡೆದ ಆರೋಪದ ಮೇಲೆ ಉತ್ತರ ಸಂಚಾರ ಠಾಣೆ ಎಎಸ್‌ಐ (ASI) ಅಮಾನತು
ಗೃಹಲಕ್ಷ್ಮಿ ಸರ್ವರ್ ಬಂದ್ ಆರೋಪ: ಮಹಿಳಾ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್ ಮೇಲೆ ಸಾರ್ವಜನಿಕರಿಂದ ಹಲ್ಲೆ