ಪಂಚೆ-ಶಲ್ಯ ಧರಿಸಿ ಪೊಂಗಲ್‌ ಸೆಲೆಬ್ರೇಟ್ ಮಾಡಿದ ಪಿಎಂ ಮೋದಿ: ಹಾಡು ಹಾಡಿದ ಬಾಲಕಿಗೆ ಶಾಲು ಗಿಫ್ಟ್

National Political News: ನವದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ, ಪಂಚೆ, ಶಲ್ಯ ಧರಿಸಿ, ಪೊಂಗಲ್ ಆಚರಿಸಿ, ಸಂಭ್ರಮಿಸಿದರು. ಇವರೊಂದಿಗೆ, ಬಿಜೆಪಿಯ ಹಲವು ನಾಯಕರೂ ಇದ್ದರು.

ದೆಹಲಿಯ ರಾಜ್ಯ ಸಚಿವ ಎಲ್.ಮುರುಗನ್ ಮನೆಯಲ್ಲಿ ಪೊಂಗಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಪಂಚೆ ಶಲ್ಯ ಧರಿಸಿ, ಪ್ರಧಾನಿ ಮೋದಿ ಕೂಡ ಪೂಜೆಗೆ ಹಾಜರಾಗಿದ್ದರು. ಪೂಜೆ ವೇಳೆ ಪೊಂಗಲ್‌ಗೆ ಸಿಹಿ ಹಾಕಿ, ದೇವರಿಗೆ ಕೈ ಮುಗಿದರು. ಅಲ್ಲದೇ, ಅಲ್ಲೇ ಇದ್ದ ಗೋವಿನ ಕಡೆ ಹೋಗಿ, ಅದಕ್ಕೆ ಮೇವು ತಿನ್ನಿಸಿ, ಹೂಮಾಲೆ ಹಾಕಿ, ಅದರ ತಲೆ ಸವರಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆಗೆ ಪೊಂಗಲ್ ಹಬ್ಬದ ಶುಭಾಶಯ ಕೋರಿದ್ದಾರೆ.

ಇನ್ನು ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಇತ್ತು. ಭರತನಾಟ್ಯ, ಸಂಗೀತ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಓರ್ವ ಗಾಯಕಿ ಹಾಡು ಹಾಡಿದ್ದು, ಬಳಿಕ ಬಂದು ಪ್ರಧಾನಿ ಮೋದಿಯವರ ಕಾಲಿಗೆರಗಿ ನಮಸ್ಕಾರ ಮಾಡಿದಳು. ಈ ವೇಳೆ ಆಕೆಯ ಗಾಯನ ಮೆಚ್ಚಿದ ಮೋದಿ, ಆಕೆಗೆ ಶಾಲನ್ನು ಉಡುಗೊರೆಯಾಗಿ ಹಾಕಿದರು.

ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..

ವಿಹೆಚ್‌ಪಿಯಿಂದ ಅಮಿತ್ ಷಾಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ

ವಿಹೆಚ್‌ಪಿಯಿಂದ ಅಮಿತ್ ಷಾಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ

About The Author