Tuesday, October 15, 2024

Latest Posts

ಮೋದಿ ಗಣೇಶ ಪೂಜೆ ವಿವಾದ – ವಿಪಕ್ಷಗಳಿಗೆ ಉರಿ ಯಾಕೆ?

- Advertisement -

ಪ್ರಧಾನಿ ನರೇಂದ್ರ ಮೋದಿ ಅವ್ರು ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವ್ರ ಮನೆಗೆ ಹೋಗಿದ್ರು. ಅವರ ಮನೆಯಲ್ಲಿ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ರು.. ಈ ವಿಚಾರಕ್ಕೆ ವಿಪಕ್ಷಗಳು ಉರಿದುಬಿದ್ದಿವೆ. ಮೋದಿ ಸಿಜೆಐ ಮನೇಲಿ ಗಣೇಶ ಪೂಜೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸ್ತಿವೆ. ಅದ್ರಲ್ಲೂ ಮಹಾರಾಷ್ಟ್ರದ ವಿರೋಧ ಪಕ್ಷಗಳೇ ಮೋದಿ ಕಾಲು ಎಳೀತಿವೆ.

ಸಿಜೆಐ ಡಿವೈ ಚಂದ್ರಚೂಡ್ ಅವರ ಆಹ್ವಾನದ ಮೇರೆಗೆಯೇ ಪ್ರಧಾನಿ ಮೋದಿ ಹೋಗಿ ಆರತಿ ಬೆಳಗಿ ಗಣೇಶನನ್ನ ಪೂಜಿಸಿದ್ರು.. ಆದ್ರೆ ಈ ವಿಚಾರ ವಿಪಕ್ಷಗಳಿಗೆ ಅಸ್ತ್ರ ಆಗಿದೆ. ರಾಜಕೀಯ ಜಟಾಪಟಿಗೂ ಕಾರಣ ಆಗಿದೆ. ಯಾಕಂದ್ರೆ ಶಾಸಕಾಂಗ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಪ್ರತ್ಯೇಕವಾಗಿರ್ಬೇಕು. ಇಲ್ಲಿ ಪ್ರಧಾನಿ ಮೋದಿ, ಸುಪ್ರೀಂಕೋರ್ಟ್ ಜಡ್ಜ್ ಮನೆಗೆ ಹೋಗಿದ್ದು ಸರಿ ಅಲ್ಲ, ಇದು ನ್ಯಾಯಾಂಗದ ಮೇಲೆ ರಾಜಕೀಯ ಪ್ರಭಾವ ಬೀರುತ್ತೆ ಅಂತ ವಾದಿಸಿದ್ದಾರೆ. ಇನ್ನೊಂದ್ಕಡೆ ಶಿವಸೇನೆ ನಾಯಕ, ರಾಜ್ಯಸಭಾ ಸಂಸದ ಸಂಜಯ್ ರಾವತ್ ಕೂಡ ಮೋದಿ ಭೇಟಿಯನ್ನ ಟೀಕಿಸಿದ್ದಾರೆ. ಶಿವಸೇನೆ ಉದ್ಧವ್ ಠಾಕ್ರೆ ಬಣ ಹಾಗೇ, ಏಕನಾಥ್ ಶಿಂಧೆ ಬಣದ ಜಗಳ ಸಿಜೆಐ ಪೀಠದಲ್ಲಿದೆ. ಹೀಗಾಗಿ ಈಗ ಸಿಜೆಐ ಚಂದ್ರಚೂಡ್ ಅವ್ರು ಈ ಕೇಸ್​ನಿಂದ ಹಿಂದೆ ಸರಿಬೇಕು ಅಂತ ವಾದಿಸಿದ್ದಾರೆ

ವಿಪಕ್ಷಗಳ ಈ ಆರೋಪಕ್ಕೆ ಬಿಜೆಪಿ ಕೂಡ ಸರಿಯಾಗೇ ತಿರುಗೇಟು ಕೊಟ್ಟಿದೆ. 2009ರಲ್ಲಿ ಮನಮೋಹನ್ ಸಿಂಗ್ ಅವ್ರು ಪ್ರಧಾನಿ ಆಗಿದ್ರು.. ಈ ವೇಳೆ ತಮ್ಮ ಮನೆಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ರು.. ಮುಸ್ಲಿಂ ನಾಯಕರೂ ಸೇರಿದಂತೆ, ಗಣ್ಯ ವ್ಯಕ್ತಿಗಳನ್ನ ಮನಮೋಹನ್ ಸಿಂಗ್ ತಮ್ಮ ಮನೆಯಲ್ಲಿನ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ರು… ಆಗ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ.ಬಾಲಕೃಷ್ಣನ್ ಅವ್ರು ಕೂಡ ಪಾಲ್ಗೊಂಡಿದ್ರು.. ಇದೇ ಫೋಟೋವನ್ನ ಬಿಜೆಪಿ ರಿಲೀಸ್ ಮಾಡಿ ಕೌಂಟರ್ ಕೊಟ್ಟಿದೆ… ಕಾಂಗ್ರೆಸ್ ಪ್ರಧಾನಿ ಮಾಡಿದ್ರೆ, ಅದು ಸೆಕ್ಯುಲರಿಸಂ, ಅದೇ ಮೋದಿ ಮಾಡಿದ್ರೆ ತಪ್ಪಾ ಅಂತ ಪ್ರಶ್ನಿಸಿದೆ.

- Advertisement -

Latest Posts

Don't Miss