ಬೀದರ್: ಕರ್ನಾಟಕದಲ್ಲಿ ಬಿಜೆಪಿ ಕ್ಯಾಂಡಿಡೇಟ್ಸ್ ಪರ ಅಬ್ಬರದ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಬೀದರ್‌ನ ಹುಮನಾಬಾದ್‌ನಲ್ಲಿ ಮಾತನಾಡಿದ ಪ್ರಧಾನಿ, ಅಂದು ಕಾಂಗ್ರೆಸ್, ಅಂಬೇಡ್ಕರ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದು ನಿಂದಿಸಿತ್ತು, ಇಂದು ವೀರ್ ಸಾವರ್ಕರ್‌ರನ್ನ ನಿಂದಿಸುತ್ತಿದೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬಾಬಾ ಸಾಹೇಬರಿಗೂ ಎಂಥೆಂಥ ಬೈಗುಳ ಬೈದಿದ್ದಾರೆಂದರೆ, ಅವರನ್ನೂ ಸಹ ಕಾಂಗ್ರೆಸ್ಸಿಗರು ಬಿಟ್ಟಿರಲಿಲ್ಲ. ಬಾಬಾ ಸಾಹೇಬರೇ ಒಮ್ಮೆ ಖುದ್ದಾಗಿ, ನನಗೆ ಪದೇ ಪದೇ ಕಾಂಗ್ರೆಸ್ ಬೈಯ್ಯುತ್ತಿದೆ ಎಂದು ಹೇಳಿದ್ದರು. ಯಾಕಂದ್ರೆ ಆ ಕಾಲದಲ್ಲೇ ಕಾಂಗ್ರೆಸ್ ಬಾಬಾ ಸಾಹೇಬರಿಗೆ ರಾಕ್ಷಸ, ರಾಷ್ಟ್ರದ್ರೋಹಿ, ಮೋಸಗಾರ ಎಂದೆಲ್ಲ ಹೇಳಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
ಇನ್ನು ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷಸರ್ಪ ಎಂದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ನರೇಂದ್ರ ಮೋದಿ, ಅವರು ನನಗೆ ಬೈಯ್ಯುವ ಬದಲು, ಅವರ ಕಾರ್ಯಕರ್ತರನ್ನು ಪ್ರಚಾರಕ್ಕಾಗಿ ಹುರಿದುಂಬಿಸಿದ್ದರೆ, ಚೆನ್ನಾಗಿರುತ್ತಿತ್ತು ಎಂದು ಮೋದಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ಎಲ್ಲರನ್ನೂ ದ್ವೇಷದಿಂದಲೇ ಕಾಣುತ್ತದೆ. ದೇಶಕ್ಕೆ ಒಳಿತನ್ನು ಬಯಸುವವರನ್ನು ಅಪಮಾನ ಮಾಡುವುದೇ ಕಾಂಗ್ರೆಸ್ ಕೆಲಸ ಎಂದು ಮೋದಿ ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ಸಿಗರು ಒಡೆದು ಆಳುವ ನೀತಿಯವರು. ಅವರ ಪ್ರೀತಿ ಬರೀ ಅಧಿಕಾರದ ಮೇಲಿದೆ ಅಷ್ಟೇ. ಜನರಿಗಾಗಿ ಅವರೇನೂ ಮಾಡಲಿಲ್ಲ, ಮಾಡುವುದಿಲ್ಲ. ಅವರು ನನಗೆ ಬೈಯ್ಯುವ ಬೈಗುಳ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ನಾನು ಮಾತ್ರ ಜನರ ಸೇವೆಯಲ್ಲಿ ನಿರತನಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
BJP's development agenda resonates strongly with the people of Karnataka. Addressing a huge rally in Humnabad. https://t.co/2FWo8BNh66
— Narendra Modi (@narendramodi) April 29, 2023
ಈ ಭೂಮಿ ಉರಿಗೌಡ- ನಂಜೇಗೌಡ ಹುಟ್ಟಿದ ನಾಡು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪ್ರಧಾನಿಯನ್ನು ವ್ಯಂಗ್ಯವಾಗಿ ಸ್ವಾಗತಿಸಿ, ಸಾಲು ಸಾಲು ಪ್ರಶ್ನೆ ಕೇಳಿದ ಸಿದ್ದರಾಮಯ್ಯ..
‘ಗಾಂಧೀಜಿ ಕುಳಿತಿದ್ದ ಜಾಗದಲ್ಲಿ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ’

