Political News: ಇಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೂ ಕೂಡ ಭೇಟಿ ನೀಡಿತ್ತು.
ಬಿಜೆಪಿ ಭದ್ರಕೋಟೆಯಾದ ಮಂಗಳೂರಿನಲ್ಲಿ ಪ್ರಧಾನಿ ಮೋದಿಯನ್ನು ನೋಡಲು ಜನಸಮೂಹವೇ ನೆರೆದಿತ್ತು. ಇಡೀ ಮಂಗಳೂರು ಸಿಟಿ ಕೇಸರಿಮಯವಾಗಿತ್ತು. ಪ್ರಧಾನಿ ಮೋದಿ ತೆರೆದ ವಾಹನದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಷ್ ಚೌಟ ಮತ್ತು ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಪರ ಮತಯಾಚಿಸಿದರು. ಕೈಯಲ್ಲಿ ಕಮಲ ಹಿಡಿದು, ಜನರತ್ತ ಕೈಬೀಸಿ, ಮತಯಾಚಿಸುಂತೆ ಕೇಳಿಕೊಂಡರು. ಈ ವೇಳೆ ಕುಡ್ಲದ ಜನ, ಮೋದಿಗೆ ಹೂವಿನ ಸುರಿಮಳೆಯನ್ನೇ ಸುರಿಸಿದ್ದಾರೆ.
ನಾರಾಯಣ ವೃತ್ತದಿಂದ ರೋಡ್ ಶೋ ಆರಂಭವಾಗಿದ್ದು. ನಾರಾಯಣ ಗುರೂಜಿ ಪ್ರತಿಮೆಗೆ ಹಾರ ಅರ್ಪಿಸಿ ಬಳಿಕ ರ್ಯಾಲಿ ಶುರು ಮಾಡಲಾಯಿತು. ವಿಶು ಹಬ್ಬದ ದಿನ ಮಂಗಳೂರಿಗರು ನೆಚ್ಚಿನ ನಾಯಕ ಪ್ರಧಾನಿ ಮೋದಿಯನ್ನು ಕಣ್ತುಂಬಿಕೊಂಡಿದ್ದು, ಮೋದಿ ಮೋದಿ ಎಂಬ ಘೋಷ ವಾಕ್ಯ ಕೇಳಿಬಂದಿತ್ತು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮೋದಿಯವರು ಹೇಳಿರುವ ಅಭಿವೃದ್ಧಿ ಯೋಜನೆಗಳು ಬರೀ ಟ್ರೈಲರ್ ಅಷ್ಟೇ, ಸಾಧಿಸುವುದು ಬಹಳಷ್ಟಿದೆ: ಸುಮಲತಾ
ಪ್ರಧಾನಿ ಮೋದಿಯವರೇ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು..? ಕಿತ್ತುಕೊಂಡಿದ್ದೆಷ್ಟು..?: ಸಿಎಂ ಸಿದ್ದರಾಮಯ್ಯ
ದಲಿತ ಆದಿವಾಸಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ: ಜಿಗ್ನೇಶ್ ಮೇವಾನಿ