ತಿರುವನಂತಪುರ: ತ್ರಿಶ್ಶೂರ್ ನ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ತಾವರೆ ಹೂವಿನ ತುಲಾಭಾರ ಸೇವೆ ಸಲ್ಲಿಸಿದರು.
ಇಂದು ಬೆಳಗ್ಗೆ ಶ್ರೀಕೃಷ್ಣ ದೇಗುಲಕ್ಕೆ ಬಂದ ನರೇಂದ್ರ ಮೋದಿ ಪೂಜೆ ಸಲ್ಲಿಸಿ ಬಳಿಕ ದೇವರಿಗೆ ತಮ್ಮ ಪಕ್ಷದ ಚಿಹ್ನೆಯಾದ ಕಮಲದ ಹೂವುಗಳಿಂದ ತುಲಾಭಾರ ಸೇವೆ ಸಲ್ಲಿಸಿದ್ರು. ತುಲಾಭಾರ ಸೇವೆಗೆಂದು ಬಳಸಲಾದ ತಾವರೆ ಹೂವುಗಳನ್ನು ತಮಿಳುನಾಡಿನ ನಾಗರಕೋಯಿಲ್ ನಿಂದ ಕೊಂಡುಬರಗಲಾಗಿತ್ತು. ಸೇವೆ ವೇಳೆ ಮೋದಿ ಕೇರಳದ ಸಾಂಪ್ರದಾಯಿಕ ಪಂಚೆ ಮತ್ತು ಶಾಲು ಧರಿಸಿದ್ದರು.
ಮೋದಿ 2008ರಲ್ಲೂ ಇದೇ ದೇವಸ್ಥಾದಲ್ಲಿ ಇದೇ ರೀತಿ ಕಮಲದ ಹೂಗಳಿಂದ ತುಲಾಭಾರ ಸೇವೆ ಸಲ್ಲಿಸಿದ್ರು.
ಇನ್ನು ಶ್ರೀ ಕೃಷ್ಣ ದೇಗುಲದ ತಮ್ಮ ಭೇಟಿಯ ಬಗ್ಗೆ ಟ್ವೀಟ್ ಮಾಡಿರೋ ನರೇಂದ್ರ ಮೋದಿ, ದೇಶದ ಏಳಿಗೆಗಾಗಿ ಶ್ರೀ ಕೃಷ್ಣನ ದೈವಿಕ ಹಾಗೂ ಭವ್ಯವಾದ ಈ ದೇಗುಲಕ್ಕೆ ಬಂದು ಪ್ರಾರ್ಥಿಸಿದ್ದೇನೆ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ವಿನಯ್ ಗುರೂಜಿ ಆಶ್ರಮದಲ್ಲಿ ನಡೆದದ್ದೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ