Monday, December 11, 2023

Latest Posts

ಬಾವುಟ ತೆರವು ವಿಚಾರದಲ್ಲಿ ಘರ್ಷಣೆ- ನಾಲ್ವರು ಕಾರ್ಯಕರ್ತರ ಕೊಲೆ

- Advertisement -

ಪಶ್ಚಿಮ ಬಂಗಾಳ: ಪಕ್ಷದ ಬಾವುಟ ತೆರವುಗೊಳಿಸೋ ವಿಚಾರವಾಗಿ ಬಿಜೆಪಿ ಮತ್ತು ಟಿಎಂಸಿ  ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನಝತ್ ನಲ್ಲಿ ಚುನಾವಣೆ ವೇಳೆ ಹಾಕಲಾಗಿದ್ದ ಬಿಜೆಪಿ ಬಾವುಟಗಳನ್ನು ತೆಗೆದು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಶುರುವಾಗಿದೆ. ಬಿಜೆಪಿ-ಟಿಎಂಸಿ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎರಡೂ ಗುಂಪುಗಳ ಮೇಲೆ ಪರಸ್ಪರ ಕಲ್ಲೆಸೆತ, ಗುಂಡಿನ ದಾಳಿ ಹಾಗೂ ಪೆಟ್ರೋಲ್ ಬಾಂಬ್ ದಾಳಿಯಿಂದಾಗಿ ಮೂವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟರೆ, ಗುಂಡಿನ ದಾಳಿಯಲ್ಲಿ ಓರ್ವ ಟಿಎಂಸಿ ಕಾರ್ಯಕರ್ತ ಮೃತಪಟ್ಟಿದ್ದಾನೆ.

ಇನ್ನು ಚುನಾವಣೆ ಘೋಷಣೆಯಾದಾಗಿನಿಂದಲೂ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪ್ರೇರೇಪಿತ ಘರ್ಷಣೆಗಳು ಸಾಮಾನ್ಯವಾಗಿದ್ದು ಈಗಲೂ ಮುಂದುವರಿಯುತ್ತಿದೆ.

ಪಾಕಿಸ್ತಾನಕ್ಕೆ ಪಾಠ ಕಲಿಸ್ತಾರಾ ಧೋನಿ…??ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=MdO9Gp9ZjxU

- Advertisement -

Latest Posts

Don't Miss