ಬೆಂಗಳೂರು: ನಗರದಲ್ಲಿ ಎಟಿಎಂ ಲೂಟಿಕೋರರು ಹೆಚ್ಚಾಗ್ತಿದ್ದು ಇದೀಗ ನಗರದಲ್ಲಿ ವಾಸವಿರೋ ಕೆಲ ವಿದೇಶಿ ಖದೀಮರು ಈ ಕುಕೃತ್ಯವೆಸಗುತ್ತಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು ಪೊಲೀಸರಿಗೆ ತಲೆನೋವಾಗಿ ಕಾಡ್ತಿದ್ದಾರೆ.
ಎಟಿಎಂಗೆ ಬರುವ ಗ್ರಾಹಕರನ್ನು ಟಾರ್ಗೆಟ್ ಮಾಡೋ ಈ ವಿದೇಶಿ ಖದೀಮರು ಪಾಸ್ ವರ್ಡ್ ನೋಡಿಕೊಂಡು ತಮ್ಮ ಕೈಚಳಕ ತೋರುತ್ತಿದ್ದಾರೆ. ಹಣ ಡ್ರಾ ಮಾಡೋಕೆ ಬರುವವರ ಎಟಿಎಂ ಪಾಸ್ ವರ್ಡನ್ನು ಸ್ಕಿಮ್ಮರ್ ಮೆಷಿನ್ ನಲ್ಲಿ ರೆಕಾರ್ಡ್ ಮಾಡಿ ಬಳಿಕ ಬ್ಯಾಂಕ್ ಖಾತೆಯಲ್ಲಿ ಬಿಡಿಗಾಸೂ ಬಿಡದಂತೆ ಹಣ ಲೂಟಿ ಮಾಡುತ್ತಿರೋ ಜಾಲ ಬೆಳಕಿಗೆ ಬಂದಿದೆ.
ಸ್ಕಿಮ್ಮರ್ ಮೆಷಿನ್ ನಿಂದ ಪಾಸ್ ವರ್ಡ್ ಪಡೆದು ನಕಲಿ ಎಟಿಎಂ ಕಾರ್ಡ್ ಬಳಸಿ ಲೂಟಿ ಮಾಡುತ್ತಿರೋ ವಿದೇಶಿಗರ ಈ ಗ್ಯಾಂಗ್ ಪೊಲೀಸರ ನಿದ್ದೆಗಡಿಸಿದೆ. ನಗರದ ಲ್ಯಾವೆಲ್ ರಸ್ತೆಯಲ್ಲಿರುವ ಎಟಿಎಂ ಒಂದರಲ್ಲಿ ಇಂತಹ ಘಟನೆ ನಡೆದಿದೆ. ಎಟಿಎಂನಿಂದ ಪೊಲೀಸ್ ಪೇದೆ ಚಂದ್ರಶೇಖರ್ ತಲ್ವಾರ್ ಎಂಬುವರು ಹಣ ಡ್ರಾ ಮಾಡಿ 4 ಗಂಟೆಗಳ ಒಳಗೆ ತಮ್ಮ ಖಾತೆಯಲ್ಲಿದ್ದ ಬಾಕಿ 37ಸಾವಿರ ರೂಪಾಯಿಯನ್ನು ಖದೀಮರು ದೋಚಿದ್ದಾರೆ. ಇದೇ ರೀತಿ ರವಿ ಎಂಬುವರ ಅಕೌಂಟ್ ನಿಂದಲೂ ಇದೇ ಗ್ಯಾಂಗ್ 59 ಸಾವಿರ ರೂಪಾಯಿ ಹಣ ಎಗರಿಸಿದ್ದಾರೆ.
ಇನ್ನು ಈ ವಿದೇಶಿ ಖದೀಮರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳಿಗಾಗಿ ಕಬ್ಬನ್ ಪಾರ್ಕ್ ಪೊಲೀಸರು ಬಲೆ ಬೀಸಿದ್ದಾರೆ.
ವಿನಯ್ ಗುರೂಜಿ ಆಶ್ರಮದಲ್ಲಿ ಆಗಿದ್ದೇನು…?? ಈ ವಿಡಿಯೋದಲ್ಲಿದೆ ಫುಲ್ ಡೀಟೇಲ್ಸ್. ತಪ್ಪದೇ ನೋಡಿ