Sandalwood News: ಮೊನ್ನೆ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಆಕೆ ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.
ಡೆತ್ ನೋಟ್‌ನಲ್ಲಿ ಇಫ್ ಯೂ ಕಮಿಟ್ ಸೂಸೈಡ್, ಯು ಕ್ಯಾನ್ ಡು ಇಟ್ ಎಂದು ಬರೆಯಲಾಗಿದೆ. ಅಂದ್ರೆ ನೀವು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದರೆ, ನೀವು ಮಾಡಿಕೊಳ್ಳಬಹುದು ಎಂದು. ಡೆತ್ ನೋಟ್‌ನಲ್ಲಿ ಇಷ್ಟೇ ಬರೆದಿದ್ದು, ಈ ಲೈನ್ ಬರೆದಿರೋದಾದ್ರೂ ಯಾಕೆ ಅಂತ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶೋಭಿತಾ ಶಿವಣ್ಣ ಬ್ರಹ್ಮಗಂಟು ಸಿರಿಯಲ್ ಮೂಲಕ ಪ್ರಸಿದ್ಧರಾಗಿದ್ದರು. 12ಕ್ಕೂ ಹೆಚ್ಚು ಧಾರಾವಾಹಿ ಮತ್ತು ನಾಲ್ಕೈದು ಸಿನಿಮಾದಲ್ಲಿ ಶೋಭಿತಾ ಶಿವಣ್ಣ ನಟಿಸಿದ್ದು, ಒಂದು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಸುಧೀರ್ ರೆಡ್ಡಿ ಎಂಬ ವ್ಯಕ್ತಿಯನ್ನು ಶೋಭಿತಾ ವಿವಾಹವಾಹಿದ್ದು, ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ, ಇಬ್ಬರ ಮನೆಯವರ ಒಪ್ಪಿಗೆಯ ಮೇರೆಗೆ ಇಬ್ಬರೂ ಮದುವೆಯಾಗಿದ್ದರು.
ಸುಧೀರ್ ರೆಡ್ಡಿ ಹೈದರಾಬಾದ್ ಮೂಲದವರಾದ ಕಾರಣ, ಮದುವೆಯಾದ ಬಳಿಕ ಶೋಭಿತಾ ಹೈದರಾಬಾದ್‌ಗೆ ಹೋಗಿ ಸೆಟಲ್ ಆಗಿದ್ದರು. ಹಾಗಾಗಿಯೇ ನಟನೆಯಿಂದಲೂ ದೂರ ಉಳಿದಿದ್ದರು. ಆದರೆ ಸಂಸಾರದಲ್ಲಿ ಕಲಹ ಶುರುವಾಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೆ ಶೋಭಿತಾ ಖಿನ್ನತೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರು ಕೆಲ ತಿಂಗಳಿಂದ ಇಂಡಸ್ಟ್ರಿಯಲ್ಲಿ ಯಾರೊಂದಿಗೂ ಸಂಪರ್ಕದಲ್ಲಿ ಇರಲಿಲ್ಲವೆಂದು ಹೇಳಲಾಗಿದೆ.
ಖಿನ್ನತೆಯಿಂದ ಬಳಲಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಕೌಟುಂಬಿಕ ಕಲಹವೂ ಇದಕ್ಕೆ ಕಾರಣವೆಂದು ಹೇಳುತ್ತಿದ್ದಾರೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದು, ಶೋಭಿತಾ ಸಾವಿಗೆ ನಿಜವಾದ ಕಾರಣವೇನು ಎಂದು ಇನ್ನಷ್ಟೇ ಗೊತ್ತಾಗಬೇಕಿದೆ.