Fake IT officers ಹೆಸರಿನಲ್ಲಿ ಮನೆಯೊಂದಕ್ಕೆ ನುಗ್ಗಿದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ..!

ನಕಲಿ ಐಟಿ ಅಧಿಕಾರಿಗಳ(fake IT officers)ಹೆಸರಿನಲ್ಲಿ ಮನೆಯೊಂದಕ್ಕೆ ನುಗ್ಗಿ ಹಣ ದೋಚಿದ್ದ  5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿ 23ರಂದು ಸಂಜಯನಗರದ(Sanjaynagar) ಮನೆಯೊಂದಕ್ಕೆ  ಏರ್ ಪಿಸ್ತೂಲ್ (Air pistol)ಜೊತೆ  ನಕಲಿ ಐಡಿ ಯ ಮೂಲಕ 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿ,  ಉದ್ಯಮಿ ಮನೆಯಲ್ಲಿದ್ದ ಏರ್ ಪಿಸ್ತೂಲ್ ತೆಗೆದುಕೊಂಡು ಜೊತೆಗೆ 3.5 ಲಕ್ಷ ಹಣ ತೆಗೆದುಕೊಂಡು ವಾಪಸ್ಸಾಗಿದ್ದರು.ಆ ಬಳಿಕ ಅನುಮಾನಗೊಂಡ ಮನೆ  ಮಾಲೀಕ ಪೊಲೀಸರಿಗೆ ದೂರು ನೀಡಿದ್ದು ಈಗ ಪೊಲೀಸರು ಆರೋಪಿಗಳನ್ನು ಬಲೆಗೆ ಬೀಸಿದ್ದಾರೆ. ಆರೋಪಿಗಳು  ರಿಯಲ್ ಎಸ್ಟೇಟ್ ಬ್ರೋಕರ್(Real estate broker)ಕೆಲಸ ಮಾಡುತ್ತಿದ್ದರು, ಉದ್ಯಮಿಯ ವ್ಯವಹಾರದ ಬಗ್ಗೆ ತಿಳಿದಿದ್ದ ಇವರು  ಹೆಚ್ಚಿನ ಆದಾಯ ಇದೆ ಎಂದು  ಐಟಿ ಅಧಿಕಾರಿಗಳ ರೀತಿಯಲ್ಲಿ  ಮನೆಗೆ ನುಗ್ಗಿ ದಾಳಿ ನಡೆಸಿದ್ದರು. ಮಂಜುನಾಥ್, ಶೋಯೆಬ್‌, ದುರ್ಗೇಶ್, ಕುಮಾರ್, ಪ್ರಶಾಂತ್ ಬಂಧಿತರು. ಆರೋಪಿ ಮಂಜುನಾಥ್ ಪತ್ರಿಕೆಯೊಂದರ ಉಪ ಸಂಪಾದಕನಾಗಿದ್ದ ಎಂದು ತಿಳಿದು ಬಂದಿದೆ.

About The Author