Political News: ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳಿಗೆ ಜಯ

Political News: ಆನೇಕಲ್ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ವಿ.ಎಚ್.ಸೋಮಶೇಖರ್ ರೆಡ್ಡಿ, ಎಂ.ನಾರಾಯಣ್ ಸ್ವಾಮಿ, ಎಂ.ನವೀನ್‌ಕುಮಾರ್, ಆರ್.ಮಂಜುನಾಥ್, ಎನ್.ವೆಂಕಟೇಶ್, ಪಿ.ರಾಜು, ಸಾಮಾನ್ಯ ಕ್ಷೇತ್ರದಿಂದ ಜಯ ಗಳಿಸಿದ್ದಾರೆ.

ಹಿಂದುಳಿದ ವರ್ಗದಿಂದ ಎಂ.ಶ್ರೀನಿವಾಸ್, ಎಂ.ತಿಲಕ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಪರಿಶಿಷ್ಠ ಜಾತಿ ಮೀಸಲು ಸ್ಥಾನದಿಂದ ಎಂ.ರಾಜಪ್ಪ ಮತ್ತು ಪರಿಶಿಷ್ಠ ಪಂಗಡದಿಂದ ಸತ್ಯನಾರಾಯಣ್ ಗೆಲವು ಸಾಧಿಸಿದ್ದಾರೆ.

ಮಹಿಳಾ ಮೀಸಲು ಸ್ಥಾನದಿಂದ ಮಂಜುಳಾ ಮತ್ತು ಶೋಭಾ ಜಯ ಗಳಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಎಂ.ನಾರಾಯಸ್ವಾಮಿ ಮಾತನಾಡಿ, ವ್ಯವಸಾಯ ಸಹಕಾರ ಸೇವಾ ಸಂಘಗಳಲ್ಲಿ ತಾೂಕಿನಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದ ಪರಿಣಾಮ ಎಲ್ಲ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೇವೆ ಎಂದರು.

About The Author