Valentines Day Special: ಸಂಬಂಧಗಳಲ್ಲೇ ಶ್ರೇಷ್ಠ ಸಂಬಂಧ ಅಂದ್ರೆ, ಅದು ಪತಿ ಪತ್ನಿ ಸಂಬಂಧ. ಇದೇನಪ್ಪಾ ಅಮ್ಮ ಮಕ್ಕಳ ಸಂಬಂಧ ಎಲ್ಲಕ್ಕಿಂತ ಶ್ರೇಷ್ಠ ಅಂತಾ ನೀವು ಹೇಳಬಹುದು. ಅಮ್ಮನಾಗಬೇಕು ಅಂದ್ರುನೂ ಪತಿ-ಪತ್ನಿ ಸಂಬಂಧದಿಂದಲೇ ಆಗಬೇಕು ಅಲ್ವಾ..? ಒಂದು ಕುಟುಂಬವನ್ನು ನಿರ್ಮಿಸುವ ಶಕ್ತಿ ಇರೋದು ಪತಿ- ಪತ್ನಿಯಲ್ಲಿ. ಹಿಂದಿನ ಕಾಲದಲ್ಲಿ ಒಂದು ದಂಪತಿಗೆ 6ರಿಂದ 7 ಮಕ್ಕಳು ಇರುತ್ತಿದ್ದರು. ಆ 6ರಿಂದ 7 ಮಕ್ಕಳು ಒಂದೇ ಮನೆಯಲ್ಲಿರುತ್ತಿದ್ದರು.
ಮಕ್ಕಳ ಮದುವೆಯಾಗಿ, ಮೊಮ್ಮಕ್ಕಳಾದರೂ ಅದೇ ಮನೆಯಲ್ಲಿ ಎಲ್ಲರೂ ಸೇರಿ, ಸುಖ ದುಃಖ ಹಂಚಿಕೊಂಡಿರುತ್ತಿದ್ದರು. ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ ಕ್ರಮೇಣ ಒಂದೊಂದೇ ಜೋಡಿ, ಬೇರೆ ಬೇರೆಯಾಗತೊಡಗಿತು. ಒಂದೊಂದು ಮಕ್ಕಳು ತಮ್ಮ ತಮ್ಮ ಸಂಸಾರ ಕಟ್ಟಿಕೊಂಡು ಬೇರೆ ಬೇರೆ ಮನೆಗೆ ಹೋಗತೊಡಗಿದರು. ಅಲ್ಲಿಗೆ ಅವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಯಿತು.
ಈ ಮೊದಲು ಇಷ್ಟು ದೊಡ್ಡ ಸಂಸಾರ ಕಟ್ಟಿ ಗಟ್ಟಿಯಾಗಿ ಇರಿಸುತ್ತಿದ್ದ ಪತಿ ಪತ್ನಿ ಸಂಬಂಧ ಇದೀಗ, ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಡಿ, ದೂರವಾಗುವ ಹಂತಕ್ಕೆ ಬಂದಿದೆ. ಹೆಣ್ಣು ಮಕ್ಕಳೂ ವಿದ್ಯಾವಂತರಾಗಿದ್ದು, ಅದೇ ಅಹಂನಲ್ಲಿಯೇ ಸಂಬಂಧ ಕಡಿದುಕೊಳ್ಳುತ್ತಿದ್ದಾರೆ. ಇನ್ನು ಕೆಲ ಹೆಣ್ಣು ಮಕ್ಕಳು ದುಡ್ಡಿಯಾಗಿಯೇ ಮದುವೆಯಾಗುತ್ತಿದ್ದಾರೆ. ದುಡ್ಡಿಗಾಗಿಯೇ ದೂರಾಗುತ್ತಿದ್ದಾರೆ. ಹಾಗಾದ್ರೆ ಪತಿ ಪತ್ನಿ ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ, ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ಸಂಸಾರ ಹಾಳಾಗೋದು ಯಾವಾಗ ಎಂದರೆ, ಒಬ್ಬರ ಮೇಲೊಬ್ಬರು ಅಗತ್ಯಕ್ಕಿಂತ ಹೆಚ್ಚು ನಿರೀಕ್ಷೆ ಇಟ್ಟುಕೊಂಡಾಗ. ಆದರೆ ಇಟ್ಟ ನಿರೀಕ್ಷೆಗೆ ತಕ್ಕಂತೆ ನೀವು ಕೂಡ, ಅವರಿಗೆ ಅದೇ ರೀತಿ ಪ್ರೀತಿ, ಕಾಳಜಿ ತೋರದೇ ಇದ್ದಾಗ. ಇದೇ ನಿರೀಕ್ಷೆ ನಿರಾಸೆಯುಂಟು ಮಾಡಿ, ಸಂಬಂಧ ಹಾಳಾಗಲು ಕಾರಣವಾಗಿದೆ. ಹಾಗಾಗಿ ನಿರೀಕ್ಷೆ ಬಿಟ್ಟು, ಜೀವನವನ್ನು ಅರಿತು, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬದುಕಿ.
ಎರಡನೇಯದಾಗಿ ನಿಮ್ಮಿಬ್ಬರ ಮಧ್ಯೆ ಮಿಸ್ ಅಂಡಸ್ಟ್ಯಾಂಡಿಂಗ್ ಆಗಿ ಮೌನ ಮನೆ ಮಾಡಿದ್ದರೆ, ನೀವಿಬ್ಬರೂ ಸೇರಿ ಮಾತನಾಡಿಕೊಂಡು ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಪತಿ ತನ್ನ ಮನೆಯವರಿಗೆ, ಪತ್ನಿ ತನ್ನ ಮನೆಯವರಿಗೆ ಇಬ್ಬರ ನಡುವಿನ ಜಗಳದ ಬಗ್ಗೆ ಹೇಳಿದರೆ, ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ, ಮುಂದೊಂದು, ನಿಮ್ಮ ಸ್ವಂತದವರೇ ನಿಮ್ಮ ಜಗಳವನ್ನು ತಮಾಷೆ ಮಾಡುತ್ತಾರೆ. ಹಾಗಾಗಿ ನಿಮ್ಮಿಬ್ಬರ ಮಧ್ಯೆ ಜಗಳವಾದರೆ, ಅದನ್ನು ನೀವಿಬ್ಬರೇ ಕುಳಿತು ಬಗೆಹರಿಸಿಕೊಳ್ಳಿ ವಿನಃ ಇನ್ನೊಬ್ಬರ ಬಾಯಿಗೆ ಆಹಾರವಾಗಬೇಡಿ.
ಮೂರನೇಯದಾಗಿ ಎಂದಿಗೂ ನಿಮ್ಮ ಜೀವನ ಸಂಗಾತಿಯನ್ನು ಅವರ ಮನೆಯವರನ್ನು ಎಂದಿಗೂ ಅವಮಾನಿಸಬೇಡಿ. ಅದರಲ್ಲೂ ಇನ್ನೊಬ್ಬರ ಎದುರು ಅವಮಾನಿಸಿದಾಗ, ಅಲ್ಲೇ ಅರ್ಧ ಸಂಬಂಧ ಮುರಿದು ಹೋಗುತ್ತದೆ. ಹಾಗಾಗಿ ಒಬ್ಬರನ್ನೊಬ್ಬರು, ಒಬ್ಬರ ಮನೆಯವರನ್ನು ಇನ್ನೊಬ್ಬರು ಗೌರವಿಸುವುದನ್ನು ಕಲಿಯಿರಿ.