Political News: ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲು ವಾಸ ಅನುಭವಿಸಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಸಂಸದ ಅನುರಾಗ್ ಠಾಕೂರ್, ಎಎಪಿ ದೆಹಲಿಯಲ್ಲಿ ಶಾಲೆಗಳ ಬದಲಾಗಿ, ಬಾರ್‌ಗಳನ್ನೇ ಹೆಚ್ಚಾಗಿ ನಿರ್ಮಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಅನುರಾಗ್ ಠಾಕೂರ್, ಎಎಪಿ ಪಕ್ಷ ಪಾಠಶಾಲಾ ತೆರೆಯುದಕ್ಕಿಂತ ಹೆಚ್ಚು ಮಧುಶಾಲೆ ತೆರೆದಿದೆ ಎಂದು ವ್ಯಂಗ್ಯವಾಡದ್ದಾರೆ. ಅಬಕಾರಿ ಹಗರಣದಲ್ಲಿ 8 ಮಂದಿ ಸಚಿವರು, 15 ಮಂದಿ ಶಾಸಕರು ಜೈಲು ಸೇರಿದ್ದಾರೆ. ಸ್ವತಃ ಅರವಿಂದ್ ಕೇಜ್ರಿವಾಲ್ ಅಬಕಾರಿ ಹಗರಣದಲ್ಲಿ ಸಿಲುಕಿ, ಜೈಲು ಸೇರಿ, ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ.
2026ಕೋಟಿ ಹಗರಣದ ದೊರೆ ಅರವಿಂದ್ ಕೇಜ್ರಿವಾಲ್. ಇದರಿಂದ ರಾಜ್ಯಕ್ಕೂ ನಷ್ಟ, ಪಕ್ಷದಲ್ಲಿರುವವರೆಲ್ಲೂ ಜೈಲು ಪಾಲು. ಹಾಗಾಗಿ ದೆಹಲಿಯಲ್ಲಿ ಎಎಪಿ ತೊಲಗುವುದು ಅನಿವಾರ್ಯವಾಗಿದೆ. ಕಳೆದ 10 ವರ್ಷಗಳಲ್ಲಿ ಬರೀ ಹಗರಣಗಳನ್ನೇ ಮಾಡಿದೆ ಹೊರತು, ಜನರ ಬಗ್ಗೆ ಏನೂ ಯೋಚನೆ ಮಾಡಿಯೇ ಇಲ್ಲ ಎಂದು ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
ಮುಂದಿನ ತಿಂಗಳು ದೆಹಲಿಯಲ್ಲಿ ಚುನಾವಣೆ ನಡೆಯಲಿದ್ದು, ಈ ವೇಳೆ ಎಎಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ದೆಹಲಿಯ ಜನ ಮನಸ್ಸು ಮಾಡಿದ್ದಾರೆಂದು ಅನುರಾಗ್ ಠಾಕೂರ್ ಹೇಳಿದ್ದಾರೆ.