Political News: ಮಹಿಳಾ ಅಧಿಕಾರಿಗೆ ಬಳಸಬಾರದ ಪದ ಬಳಸಿದ ಕಾಂಗ್ರೆಸ್ ಶಾಸಕನ ಪುತ್ರ

Political News: ಅಕ್ರಮ ಗಣಿಗಾರಿಕೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಅವಾಚ್ಯ ಶಬ್ದಗಳಿಂದ ಬೈದಿರುವ ಆಡಿಯೋ ವೈರಲ್ ಆಗಿದೆ. ಆಡಿಯೋ ಕೇಳಿದವರು ಶಾಸಕನ ಪುತ್ರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಭದ್ರಾ ನದಿ ದಂಡೆಯ ಮೇಲೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಈ  ಮಾಹಿತಿ ತಿಳಿದು, ಸೋಮವಾರ ರಾತ್ರಿ ಮಹಿಳಾ ಅಧಿಕಾರಿ ರೇಡ್ ಮಾಡಿದ್ದರು. ಈ ಕಾರಣಕ್ಕೆ ಸಂಗಮೇಶ್ ಪುತ್ರ ಬಸವೇಶ್ ಅಧಿಕಾರಿಗೆ ಕರೆ ಮಾಡಿ, ಬಾಯಿಗೆ ಬೈದಂತೆ ಕೆಟ್ಟದಾಾಗಿ ಮಾತನಾಡಿದ್ದಾರೆ. ಸದ್ಯ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ವಿರುದ್ಧ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಂಗಮೇಶ್ ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಭದ್ರಾವತಿಯಲ್ಲಿ ಶಾಸಕ ಮತ್ತು ಅವರ ಪುತ್ರನ ದುರ್ವರ್ತನೆ ಮಿತಿ ಮೀರಿದೆ. ಎಸ್ಪಿಯೊಬ್ಬರು ಅಧಿಕಾರಿಯನ್ನು ಅಮಾನತು ಮಾಡಿದ್ದರು. ಆದರೆ ಅದೇ ಅಧಿಕಾರಿಯನ್ನು ಶಾಸಕರು ಮತ್ತೆ ಅದೇ ಜಾಗಕ್ಕೆ ನೇಮಿಸಿದರು. ಎಸ್ಪಿ ಅವರ ಆದೇಶಕ್ಕೆ ಬೆಲೆನೇ ಇಲ್ಲಾ ಎಂದು ಬೇಸರ ಹೊರಹಾಕಿದ್ದಾರೆ.

About The Author