Political News: ಮಂಡ್ಯದಲ್ಲಿ ಕಾಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯದಲ್ಲಿ ಎಲ್ಲದರ ದರ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂದು ಮಂಡ್ಯ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದು, ಈ ಯಾತ್ರೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರು.
ಈ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಸಿ.ಟಿ.ರವಿ, ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಹೊಡೆದು ಕೋಟೆ ಕಟ್ಟಲು ಹೊರಟಿರುವ ಕಾಂಗ್ರೆಸ್ಸಿಗರೇ.. ಮಂಡ್ಯಕ್ಕೆ ಕಾಂಗ್ರೆಸ್ಸಿನವರ ಕೊಡುಗೆ ಏನೆಂಬುದನ್ನು ಅನುದಾನ ಕೊರತೆಯಿಂದಾಗಿ ಮುಚ್ಚಲು ಹೊರಟಿರುವ ವಿವಿಗಗಳ ಬಾಗಿಲುಗಳು ಹೇಳುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬ್ರಿಟಿಷರು ರೈತರಿಂದ ದುಪ್ಪಟ್ಟು ಕಪ್ಪ ಕಾಣಿಕೆ ಕಸಿದುಕೊಂಡಂತೆ, ಕಾಂಗ್ರೆಸ್ಸಿಗರು ಉಚಿತ ಯೋಜನೆಗಳನ್ನು ಕೊಟ್ಟು ಜನರಿಂದ ಹಣ ಕೀಳುತ್ತಿದ್ದಾರೆ. ಕರ್ನಾಟಕ ಕಂಡಂತಹ ಅಭಿನವ ಬ್ರಿಟಿಷರು ಅಂದರೆ ಕಾಂಗ್ರೆಸ್ ನವರು. ರಾಜ್ಯದ ಜನತೆಯ ಮೇಲೆ ಅತೀ ಅತಿ ಹೆಚ್ಚು ಸಾಲದ ಹೊರೆಯನ್ನು ಹೊರೆಸಿರುವ ಸಿ ಎಂ, ಸಂವಿಧಾನವನ್ನು ಗಣನೆಗೆ ತೆಗೆದುಕೊಳ್ಳದೇ ಮತೀಯ ಮೀಸಲಾತಿ ತಂದು ರಾಜ್ಯವನ್ನೇ ಅಶಾಂತಿ ಕೂಪಕ್ಕೆ ತಳ್ಳಲು ಹೊರಟಿರುವವರು ಇವರು. ನ್ಯಾಯಕ್ಕೆ ಬದ್ಧ, ಸಮರಕ್ಕೆ ಸಿದ್ಧ, ನಮ್ಮ ಹೋರಾಟ ಅನ್ಯಾಯದ ವಿರುದ್ಧ, ಜನ ವಿರೋಧಿ ಸರ್ಕಾರದ ವಿರುದ್ಧ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಸಿ.ಟಿ.ರವಿ ಹೇಳಿದ್ದಾರೆ..