Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಬೆಳಗಾವಿಯಿಂದಲ್ಲೇ ಕಸಗೂಡಿಸಿ, ಕೊಳೆಯಲ್ಲಾ ತೆಗೆದು ಸ್ವಚ್ಛ ಆಗಬೇಕು ಅಂತ ಗಾಂಧಿ ಬಾವಿ ನಿರೇ ಚೆಲ್ಲಿದ್ದೆವೆ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಡುವಂತೆ ಡಿಸಿಎಂ ಹೇಳಿಕೆ ಕೊಟ್ಟ ಹಾಗಿತ್ತು.
ನನ್ನ ಬಾಯಿ ಸೇರಿ ಎಲ್ಲರ ಬಾಯಿಗೂ ಬೀಗ ಹಾಕಬೇಕು ಅಂತ ಡೆಲ್ಲಿಯವರು ಹೇಳಿದ್ದಾರೆ. ನೀವು ಏನೆನೋ ಮಾತನಾಡಿದ್ರೆ ಅದಕ್ಕೆ ಉತ್ತರ ನೀಡಲು ನಾನು ತಯಾರಿಲ್ಲಾ. ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಅವರ ಮಾರ್ಗದರ್ಶನದಲ್ಲಿ ಮತ್ತು ನಮ್ಮ ವರಿಷ್ಠ ಮಾರ್ಗದರ್ಶನದಲ್ಲಿ ನಡೆಯುತ್ತವೆ. ನಾವೆಲ್ಲ ಕಾರ್ಯಕರ್ತರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ತಿಂಗಳ 21 ರಂದು ಬೆಳಗಾವಿಯಲ್ಲಿ ಜೈಬಾಪು, ಜೈಭೀಮ್, ಜೈ ಸಂವಿಧಾನದ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ನಾಳೆ ಹುಬ್ಬಳ್ಳಿಯಲ್ಲಿ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಪೂರ್ವಭಾವಿ ಸಭೆ ನಡೆಯುತ್ತಿದೆ. ಈಗಾಗಲೇ ಪ್ರಮುಖ ಮುಖಂಡ ಬೆಳಗಾವಿಗೆ ಬಂದಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮ ಸಂಸದೀಯ ವ್ಯವಹಾರಗಳ ಸಚಿವರು, ಸ್ಪೀಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ , ರಾಹುಲ್ ಗಾಂಧಿಯವರು ಕಾರ್ಯಕ್ರಮ ಉದ್ಘಾಟನೆ ಮಾಡತ್ತಾರೆ. ಮುಖ್ಯ ಮಂತ್ರಿಗಳು ಎಲ್ಲಾ ಪಕ್ಷದ ಶಾಸಕರನ್ನು ಆಹ್ವಾನಿಸುತ್ತಿದ್ದಾರೆ. ಎಲ್ಲಾ ಶಾಸಕರು ಪಕ್ಷ ಭೇದ ಮರೆತು, ಸಾರ್ವಜನಿಕರು ಸಹ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಡಿಸಿಎಂ ಹೇಳಿದರು.
ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳದ ಬಗ್ಗೆ ಗೃಹ ಸಚಿವರು ಮಾತನಾಡುತ್ತಾರೆ. ಒಂದೇ ಗಾಂಧಿ ಇರೋದು, ನಾವೆಲ್ಲ ಗಾಂಧಿ ವಂಶಸ್ಥರು. ನಕಲಿ ಗಾಂಧಿ ಅಂದಿರೋದು ಬಹಳ ಸಂತೋಷ ಎನ್ನುವ ಮೂಲಕ ಬಿಜೆಪಿ ನಾಯಕರ ನಕಲಿ ಗಾಂಧಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಮಹದಾಯಿ ವಿಚಾರವಾಗಿ ಹತ್ತು ದಿನದಿಂದ ನಾವು ಮೀಟಿಂಗ್ ಮಾಡಿದ್ವೀ. ದೆಹಲಿಯಲ್ಲಿ ಮೀಟಿಂಗ್ ಇತ್ತು. ಮೋದಿ ಅವರನ್ನು ಭೇಟಿ ಮಾಡಿದಾಗ,ಸಚಿವರಿಗೆ ತಿಳಿಸದ್ದೇನೆ. ಆದ್ರೆ ಮೀಟಿಂಗ್ ಅಲ್ಲಿ ಏನೂ ತೀರ್ಮಾನ ಆಗಿಲ್ಲ ಎಂದು ಡಿಕೆಶಿ ಹೇಳಿದರು.