Saturday, July 27, 2024

Latest Posts

Political News: ಬೆಂಗಳೂರಿಗೆ ಜನತೆಗೆ ಡಿಸಿಎಂ ಸಿಹಿ ಸುದ್ದಿ

- Advertisement -

Political News: ಬೆಂಗಳೂರಿನ ಜನತೆಗೆ ಡಿಸಿಎಂ ಡಿಕೆ ಶಿವಕುಮಾರ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸರಹದ್ದಿನಲ್ಲಿರುವ ಎಲ್ಲಾ ಪಾರ್ಕ್ ಗಳು ಇನ್ನು ಮುಂದೆ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಈ ಸಂಬಂಧ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಎಲ್ಲಾ 1,200 ಉದ್ಯಾನವನಗಳು ಈ ಹಿಂದೆ ಬೆಂಗಳೂರು ನಗರ ವ್ಯಾಪ್ತಿಯ ಉದ್ಯಾನವನಗಳು ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೆ ತೆರೆದಿರುತ್ತಿದ್ದವು. ನಂತರ ಮಧ್ಯಾಹ್ನದಿಂದ ಸಂಜೆ 5 ಗಂಟೆಯವರೆಗೆ ಮುಚ್ಚಿರುತ್ತಿದ್ದವು.ಸಂಜೆ 4 ಗಂಟೆಯಿಂದ 8 ಗಂಟೆವರೆಗೆ ಓಪನ್ ಇರುತ್ತಿದ್ದವು. ಆದರೀಗ ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ. ಉದ್ಯಾನವನದಲ್ಲಿ ಹೆಚ್ಚಿನ ಭದ್ರತೆಗೆ ಪಾಲಿಕೆ ವತಿಯಿಂದ ಸಿಬ್ಬಂದಿ ನಿಯೋಜಿಸಲಾಗುವುದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ, ಈ ಮಾಹಿತಿ ನೀಡಿದರು. ಇನ್ನು ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಅನಧಿಕೃತ ಬ್ಯಾನರ್ ಗಳನ್ನು ತೆರವು ಮಾಡದಿರುವುದಕ್ಕೆ ಸಹಾಯಕ ಕಂದಾಯ ಅಧಿಕಾರಿ ವಿರುದ್ಧ ಕೇಸು ದಾಖಲಿಸುವಂತೆ ಬಿಬಿಎಂಪಿ ಮುಖ್ಯಸ್ಥ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಸೂಚಿಸಿದರು.

ಒಟ್ನಲ್ಲಿ ದಿನಪೂರ್ತಿ ಪಾರ್ಕ್​ಗಳನ್ನು ಓಪನ್ ಮಾಡುತ್ತಿರುವುದು ಹಿರಿಯ ನಾಗರೀಕರಿಗೆ ಖುಷಿ ತಂದಿದೆ.

ಇಂದು ಬೆಂಗಳೂರಿಗೆ ರಾಹುಲ್- ಪ್ರಿಯಾಂಕಾ ನಾಳೆ ವಯನಾಡಿಗೆ ರಾಹುಲ್ ಭೇಟಿ

Sandalwood News: ದರ್ಶನ್ ಅರೆಸ್ಟ್- ನಟಿ ರಮ್ಯಾ ಎಂಟ್ರಿ!

ಮೈಸೂರು ದಸರಾ ಆನೆ ಇನ್ನಿಲ್ಲ: ವಿದ್ಯುತ್ ತಂತಿ ತಗುಲಿ ಅಶ್ವತ್ಥಾಮ ಸಾವು

- Advertisement -

Latest Posts

Don't Miss