Political News: ಮಹಾರಾಷ್ಟ್ರದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. 2026ರ ಡಿಸೆಂಬರ್ ವೇಳೆಗೆ ರೈತರಿಗೆ ಶೇ.80 ರಷ್ಟು ರೈತರಿಗೆ ದಿನಕ್ಕೆ 12 ಗಂಟೆಗಳ ಕಾಲ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ.
ವಾರ್ಧಾ ಜಿಲ್ಲೆಯ ಅರ್ವಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಫಡ್ನವೀಸ್, ಮಹಾರಾಷ್ಟ್ರ ರೈತರಿಗೆ ಬಂಪರ್ ಘೋಷಿಸಿದ್ದಾರೆ. ಕೃಷಿ ಕ್ಷೇತ್ರದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ರೈತರು ದೀರ್ಘಕಾಲದ ಸ್ಥಿರಸರಬರಾಜು ಕೇಳುತ್ತಿದ್ದಾರೆ. ಡಿಸೆಂಬರ್ 26ರ ವೇಳೆಗೆ ಅವರಲ್ಲಿ ಶೇ.80ರಷ್ಟು ಜನರಿಗೆ 12 ಗಂಟೆಗಳ ಕಾಲ ಉಚಿತ ವಿದ್ಯುತ್ ಒದಗಿಸಲು ನಾವು ಈಗ ಕೆಲಸ ಮಾಡುತ್‌ತಿದ್ದೇವೆ ಎಂದು ಹೇಳಿದ್ದಾರೆ.
ಮಧ್ಯಮ ವರ್ಗ ಮತ್ತು ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಆರ್ಥಿಕ ಪರಿಹಾರ ಒದಗಿಸುವ ಗುರಿಯನ್ನು ನಾವು ಇಟ್ಟುಕೊಂಡಿದ್ದು, 2026ರಿಂದ 30ರವರೆಗೆ ಕರೆಂಟ್ ಬಿಲ್ ಕಡಿಮೆಯಾಗಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ. ಅಷ್ಟೇ ಅಲ್ಲದೇ 300 ಯುನಿಟ್‌ಗಳವರೆಗೆ ವಿದ್ಯುತ್ ಬಳಸುವ ಮನೆಗಳಿಗೆ ಹೊಸ ಸೌರಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ವಿದ್ಯುತ್ ನೀಡಲಾಗುವುದು. ಇದು ವಿಶೇಷವಾಗಿ ದುರ್ಬಲ ಆರ್ಥಿಕ ವರ್ಗದವರಿಗೆ ಉಪಯೋಗವಾಗಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ.