Political News: ಮೂರು ತಿಂಗಳಿನಿಂದ ಜಮೆಯಾಗದಿದ್ದ ಗೃಹ ಲಕ್ಷ್ಮೀ ಹಣದ ಬಗ್ಗೆ ರಾಜ್ಯದ ಗೃಹ ಲಕ್ಷ್ಮೀಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾಹಿತಿ ನೀಡಿರುವ ಅವರು, ಗೃಹ ಲಕ್ಷ್ಮೀ ಯೋಜನೆಯ ಹಣವೂ ಮೂರು ತಿಂಗಳಿಂದ ಜಮೆಯಾಗುವಲ್ಲಿ ಸ್ವಲ್ಪ ಅಡಚಣೆಗಳು ಆಗಿವೆ. ಆದರೆ ತಾಲೂಕಾ ಪಂಚಾಯತ್ ಮೂಲಕ ನಾವು ಗೃಹ ಲಕ್ಷ್ಮೀಯರ ಖಾತೆಗಳಿಗೆ ಹಾಕುವುದರಿಂದ ಈ ಬಾರಿ ವಿಳಂಬವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ತಾಲೂಕು ಪಂಚಾಯತಿಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿಸಿದರು. ನೂತನ ಪ್ರಕ್ರಿಯೆಯ ಮೂಲಕ ತಾಲೂಕು ಪಂಚಾಯಿತಿಗೆ ಹಣ ಜಮೆ ಆಗಿ ಬಳಿಕ ನಮ್ಮ ಇಲಾಖೆಗೆ ಬರುತ್ತದೆ. ಹೀಗಾಗಿ 15 ದಿನಗಳ ಮೊದಲೇ ನಮಗೆ ಹಣ ಬಂದಿದೆ. ಮುಂದಿನ ತಿಂಗಳು ಗೃಹ ಲಕ್ಷ್ಮೀಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ನಿವಾರಣೆ ಆಗಿ ಹಣ ಎಲ್ಲರಿಗೂ ಹಣ ಜಮೆಯಾಗುತ್ತದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.