Saturday, April 12, 2025

Latest Posts

Political News: ಅನರ್ಹರು ಸದಸ್ಯರಾದ್ರೆ ಹೇಗೆ..? : ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

- Advertisement -

Political News: ರಾಜ್ಯದಲ್ಲಿ ಸದಾ ಒಂದಿಲ್ಲೊಂದು ವಿವಾದಗಳಿಗೆ ಸುದ್ದಿಯಾಗುತ್ತಿರುವ ರಾಜ್ಯ ಲೋಕಸೇವಾ ಆಯೋಗವು ಇದೀಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿಗಾಗಿ ಶೋಧನಾ ಸಮಿತಿಯನ್ನು ರಚಿಸದಿರುವ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಕುಡಿಯುವ ನೀರು ಪೊರೈಕೆ ವಿಭಾಗದ ಸಹಾಯಕ ಎಂಜಿನಿಯರ್‌ಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ನೀಡಿರುವ ಶಿಫಾರಸ್ಸು ಮಾಡಿತ್ತು. ಇದಕ್ಕೆ ತಡೆ ನೀಡಲು ನಿರಾಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಅಂದರೆ ಕೆಎಟಿ ಕ್ರಮ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಸೇರಿದಂತೆ ಹಲವರು ಎರಡು ಪ್ರತ್ಯೆಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ವಿಚಾರಣೆಯ ವೇಳೆ ಸರ್ಕಾರದ ವಿರುದ್ಧ ಕೋರ್ಟ್ ಈ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಸರ್ಕಾರದ ಬೇಜವಾಬ್ದಾರಿ ನಡೆಯ ಬಗ್ಗೆ ಕಿಡಿ ಕಾರಿರುವ ಹೈಕೋರ್ಟ್‌, ಕೆಪಿಎಸ್‌ಸಿ ಸದಸ್ಯರಾಗಲು ಅನ್‌ಫಿಟ್‌ ಇರುವವರನ್ನು ತಂದು ಸಂಸ್ಥೆಯಲ್ಲಿ ಸದಸ್ಯರನ್ನಾಗಿ ಮಾಡಿದರೆ, ವಿವಿಧ ವಿಷಯಗಳಲ್ಲಿ ಡಿಗ್ರಿ ಪೊರೈಸಿರುವ ಅರ್ಹ ಅಭ್ಯರ್ಥಿಗಳ ಸಂದರ್ಶನವನ್ನು ಅವರು ಹೇಗೆ ಮಾಡುತ್ತಾರೆ..? ಎಂಬ ವಿಚಾರ ಎಂತಹದೇ ವಿವೇಚನಾಯುಕ್ತ ವ್ಯಕ್ತಿಗೆ ದಿಗ್ಭ್ರಮೆ ಮೂಡಿಸುತ್ತದೆ ಎಂದು ಸರ್ಕಾರದ ಚಳಿ ಬಿಡಿಸಿದೆ.

ಇನ್ನೂ ಈ ಕುರಿತು ಸರ್ಕಾರದ ಕ್ರಮವನ್ನು ನ್ಯಾಯಮೂರ್ತಿಗಳ ಪೀಠವು, ತಮಗಿಂತಲೂ ಕೆಳಮಟ್ಟದವರ ಎದುರು ಸಂದರ್ಶನಕ್ಕೆ ಹಾಜರಾಗುವಂತೆ ಮಾಡಿದರೆ ಉನ್ನತ ವರ್ಗದ ಜನರು ಯಾವ ಅಭಿಪ್ರಾಯಕ್ಕೆ ಬರಲು ಸಾಧ್ಯ ಎನ್ನುವುದನ್ನು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

ತುರ್ತಾಗಿ ಶೋಧನಾ ಸಮಿತಿ ರಚಿಸಿ..

ಅಲ್ಲದೆ ನೇಮಕಾತಿಗೆ ನೆರವು ನೀಡುವುದಕ್ಕಾಗಿ ಶೋಧನಾ ಸಮಿತಿಯ ರಚನೆಗೆ ತುರ್ತು ಆಧಾರದ ಮೇಲೆ ಕೆಲ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಈ ಕುರಿತು ನಡೆದ ಬೆಳವಣಿಗೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಭರವಸೆ ನೀಡಿದ್ದರು. ಬಳಿಕ ಸ್ವಲ್ಪ ಸಮಾಧಾನವಾದ ನಂತರ ನ್ಯಾಯಪೀಠ ತುರ್ತಾಗಿ ಶೋಧನಾ ಸಮಿತಿಯನ್ನು ರಚನಾ ಕಾರ್ಯ ಮಾಡಬೇಕಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಸರ್ಕಾರದ ಗಮನಕ್ಕೆ ತರುತ್ತೇವೆ..

ಇನ್ನೂ ಇದಕ್ಕೂ ಮುನ್ನ ಅಕ್ರಮ ನೇಮಕಾತಿಯನ್ನು ಸಿಬಿಐಗೆ ವಹಿಸಲು ಅಡ್ವೋಕೇಟ್‌ ಜನರಲ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಪ್ರಕರಣವು ತನಿಖೆಗೆ ಅರ್ಹವಾಗಿದೆ, ಇದರಲ್ಲಿ ಸಿಬಿಐ ತನಿಖೆಗೆ ವಹಿಸಲು ಅಂತಹ ವಿಶೇಷವೇನಿಲ್ಲ. ಇದರ ತನಿಖೆಗೆ ರಾಜ್ಯದ ಸಿಐಡಿ ಸಮರ್ಥವಾಗಿದೆ. ಆದರೂ ಆಯ್ಕೆಯಂತೆ ವಿಶೇಷ ತನಿಖಾ ತಂಡವನ್ನು ರಚಿಸಿದರೆ, ನ್ಯಾಯಲಯದ ಆಯ್ಕೆಯಂತೆಯೇ ಅಧಿಕಾರಿಗಳು, ಸಿಬ್ಬಂದಿಯನ್ನು ಎಸ್‌ಐಟಿ ಸದಸ್ಯರಾಗಿ ನೀಡುವ ಭರವಸೆ ಕೊಟ್ಟಿದ್ದರು. ಅಲ್ಲದೆ ಯಾವ ಅಧಿಕಾರಿಗಳಿಂದ ತನಿಖೆ ನಡೆಸುತ್ತೀರಿ ಎಂದು ಕೋರ್ಟ್‌ ಪ್ರಶ್ನಿದಾಗ, ಈ ವಿಚಾರದ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸಿ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದರು.

- Advertisement -

Latest Posts

Don't Miss